ಅಲ್ಲು ಅರ್ಜುನ್-ಲೋಕೇಶ್ ಸಿನಿಮಾ ನಿಂತು ಹೋಯ್ತೆ? ಸತ್ಯಾಂಶವೇನು?

Allu Arjun-Lokesh Kanagaraj: ಭಾರತೀಯ ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಅವರಿಗೆ ಇರುವಷ್ಟು ಒಳ್ಳೆಯ ಸಿನಿಮಾ ಲೈನಪ್ ಬಹುಷಃ ಇನ್ಯಾವ ಸ್ಟಾರ್ ನಟರಿಗೂ ಇಲ್ಲವೇನೋ. ಅಷ್ಟು ಒಳ್ಳೆಯ, ಸೂಪರ್ ಹಿಟ್ ಡೈರೆಕ್ಟರ್​​ಗಳು ಕತೆ ಹಿಡಿದುಕೊಂಡು ಅಲ್ಲು ಅರ್ಜುನ್ ಅವರಿಗಾಗಿ ಕಾಯುತ್ತಿದ್ದಾರೆ. ಆದರೆ ಇತ್ತೀಚೆಗೆ ಸುದ್ದಿಯೊಂದು ಹರಿದಾಡುತ್ತಿದ್ದು, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಬೇಕಿದ್ದ ಲೋಕೇಶ್ ಕನಗರಾಜ್ ಅವರು ಹಿಂದೆ ಸರಿದಿದ್ದು, ಸಿನಿಮಾ ರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಲ್ಲು ಅರ್ಜುನ್-ಲೋಕೇಶ್ ಸಿನಿಮಾ ನಿಂತು ಹೋಯ್ತೆ? ಸತ್ಯಾಂಶವೇನು?
Allu Lk

Updated on: Jun 04, 2026 | 9:28 AM

ಪುಷ್ಪ’ (Pushpa) ಮತ್ತು ‘ಪುಷ್ಪ 2’ ಸಿನಿಮಾಗಳ ಅಲ್ಲು ಅರ್ಜುನ್ (Allu Arjun) ಇದೀಗ ‘ರಾಕಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಅವರಿಗೆ ಇರುವಷ್ಟು ಒಳ್ಳೆಯ ಸಿನಿಮಾ ಲೈನಪ್ ಬಹುಷಃ ಇನ್ಯಾವ ಸ್ಟಾರ್ ನಟರಿಗೂ ಇಲ್ಲವೇನೋ. ಅಷ್ಟು ಒಳ್ಳೆಯ, ಸೂಪರ್ ಹಿಟ್ ಡೈರೆಕ್ಟರ್​​ಗಳು ಕತೆ ಹಿಡಿದುಕೊಂಡು ಅಲ್ಲು ಅರ್ಜುನ್ ಅವರಿಗಾಗಿ ಕಾಯುತ್ತಿದ್ದಾರೆ. ಆದರೆ ಇತ್ತೀಚೆಗೆ ಸುದ್ದಿಯೊಂದು ಹರಿದಾಡುತ್ತಿದ್ದು, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಬೇಕಿದ್ದ ಲೋಕೇಶ್ ಕನಗರಾಜ್ ಅವರು ಹಿಂದೆ ಸರಿದಿದ್ದು, ಸಿನಿಮಾ ರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಸಿನಿಮಾದ ಸಣ್ಣ ಟೀಸರ್ ಅನ್ನೂ ಸಹ ಬಿಡುಗಡೆ ಮಾಡಲಾಗಿತ್ತು. ಇನ್ನು ಹೆಸರಿಡದ ‘AA 23’ ಚಿತ್ರ ಪ್ರಕಟವಾದಾಗಿನಿಂದಲೂ, ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಚಿತ್ರದ ಹಾಡು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಚಿತ್ರದ ಹೊಸ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ, ಇತ್ತೀಚೆಗೆ ಲೋಕೇಶ್ ಕನಗರಾಜ್ ಮತ್ತು ಅಲ್ಲು ಅರ್ಜುನ್ ಅವರ ಸಿನಿಮಾ ರದ್ದಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ.

ಲೋಕೇಶ್ ಕನಗರಾಜ್ ಅವರ ಜೊತೆ ಬರಹಗಾರರಾಗಿ ಕೆಲಸ ಮಾಡುವ ರತ್ನಕುಮಾರ್ ಅವರು ಟ್ವೀಟ್ ಮಾಡಿದ್ದು, ‘ಎಎ23’ ಸಿನಿಮಾಕ್ಕಾಗಿ ಕಾಯುತ್ತಿದ್ದೇವೆ’ ಎಂದು ಟ್ವಿಟ್ ಮಾಡಿದ್ದಾರೆ. ಲೋಕೇಶ್ ನಿರ್ದೇಶಿಸಿ, ರತ್ನಾಕರ್ ಸಹ ಜೊತೆಗೆ ಕೆಲಸ ಮಾಡಿದ್ದ ‘ವಿಕ್ರಂ’ ಸಿನಿಮಾ ಬಿಡುಗಡೆ ಆಗಿ ನಾಲ್ಕು ವರ್ಷಗಳಾದ ಕಾರಣ ಮಾಡಿದ ಸರಣಿ ಟ್ವೀಟ್​​ನಲ್ಲಿ ‘ಎಎ23’ ಸಿನಿಮಾದ ಬಗ್ಗೆಯೂ ಟ್ವೀಟ್ ಮಾಡುವ ಮೂಲಕ, ಆ ಸಿನಿಮಾ ನಿಂತು ಹೋಗಿಲ್ಲ ಬದಲಿಗೆ ಕೆಲಸಗಳು ಚಾಲ್ತಿಯಲ್ಲಿವೆ ಎಂಬ ಸುಳಿವು ಸಹ ನೀಡಿದ್ದಾರೆ.

ಇದನ್ನೂ ಓದಿ:ಶಕ್ತಿಮಾನ್ ಕತೆಯನ್ನೇ ಅಲ್ಲು ಅರ್ಜುನ್​ಗಾಗಿ ಹೆಣೆಯುತ್ತಿರುವ ಬಾಸಿಲ್ ಜೋಸೆಫ್?

ಅಲ್ಲು ಅರ್ಜುನ್ ಕಳೆದ ಐದು ವರ್ಷಗಳಿಗಿಂತಲೂ ಹೆಚ್ಚು ಸಮಯವನ್ನು ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಮತ್ತು ‘ಪುಷ್ಪ 2: ದಿ ರೂಲ್’ ಚಿತ್ರಗಳಿಗಾಗಿ ಮುಡಿಪಾಗಿಟ್ಟಿದ್ದರು. ಈಗ ಅವರು ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಮತ್ತು ಮಲಯಾಳಿ ಸುಂದರಿ ಫೆಮಿನಾ ನಾಯಕಿಯರು. ಈ ಸಿನಿಮಾದ ಬಳಿಕ ಮಲಯಾಳಂ ನಟ, ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನ ಮಾಡಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಆ ಬಳಿಕ ಸಂದೀಪ್ ರೆಡ್ಡಿ ವಂಗಾ ರೆಡಿಯಾಗಿದ್ದಾರೆ. ಇವರೆಲ್ಲರ ಬಳಿಕ ಮತ್ತೆ ಸುಕುಮಾರ್ ಅವರು ‘ಪುಷ್ಪ 3’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us