‘ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ’; ದರ್ಶನ್​​ಗೆ ಬಾಸ್ ನಿರ್ದೇಶಕನ ಮನವಿ

Edited By:

Updated on: Jun 18, 2026 | 12:29 PM

‘ಬಾಸ್’ ಸಿನಿಮಾ ರಿಲೀಸ್​ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಿನಿಮಾ ರಿಲೀಸ್ ಆಗಬಾರದು ಎಂಬುದು ವಿಜಯಲಕ್ಷ್ಮೀ ದರ್ಶನ್ ಅವರ ಕೋರಿಕೆ. ಅವರು ಈಗಾಗಲೇ ಕೋರ್ಟ್​​​ನಲ್ಲಿ ಅರ್ಜಿ ಸಲ್ಲಿಕೆ ಆಗಿದೆ. ಹೀಗಿರುವಾಗಲೇ ಸಿನಿಮಾದ ನಿರ್ದೇಶಕ ಲವ ಅವರು ಮಾತನಾಡಿದ್ದಾರೆ. ಅವರು ಒಂದು ಅಚ್ಚರಿಯ ವಿಷಯವನ್ನು ರಿವೀಲ್ ಮಾಡಿದ್ದಾರೆ.

‘ಬಾಸ್’ ಸಿನಿಮಾ ರಿಲಿಸ್​​ಗೆ ವಿಜಯಲಕ್ಷ್ಮೀ ದರ್ಶನ್ ಅಡ್ಡಗಾಲು ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡದಂತೆ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಈ ವಿಷಯದಲ್ಲಿ ಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಆದರೆ, ಸದ್ಯದ ಪರಿಸ್ಥಿತಿ ನೋಡಿ ಹಂಚಿಕೆದಾರರು, ಥಿಯೇಟರ್​ ಮಾಲೀಕರು ಈ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಲವ ಮಾತನಾಡಿದ್ದಾರೆ. ‘ದಯವಿಟ್ಟು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನೀವು ಅನೇಕ ಯುವಕರಿಗೆ ಬೆಂಬಲ ನೀಡಿದ್ದೀರಾ. ಅದೇ ರೀತಿ ನಮಗೂ ಬೆಂಬಲ ಕೊಡಿ’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us