
ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಬಂದು ಸಖತ್ ಫೇಮಸ್ ಆದರು. ಅವರು ಸಿನಿಮಾ ಮಾಡೋದಾಗಿಯೂ ಈ ಮೊದಲು ಘೋಷಣೆ ಮಾಡಿದ್ದರು. ಈಗ ಅವರು ವಿವಿಧ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರು ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಶೋಗೆ ಬಂದಿದ್ದಾರೆ. ಈ ಶೋನಲ್ಲಿ ಅವರ ಎಂಟ್ರಿ ಭರ್ಜರಿಯಾಗಿತ್ತು. ಅವರಿಗೆ ಸಖತ್ ಬಿಲ್ಡಪ್ ಕೊಡಲಾಗಿದೆ.
ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸೈಲೆಂಟ್ ಆಗಿದ್ದಿದ್ದೇ ಹೆಚ್ಚು. ಸಿಂಪತಿ ಗಿಟ್ಟಿಸಿಕೊಳ್ಳಲು ಅವರು ಮಾಡಿರೋ ಟೆಕ್ನಿಕ್ ಇದು ಎಂದು ಅನೇಕರು ಆರೋಪ ಮಾಡಿದ್ದು ಇದೆ. ಆದರೆ, ದೊಡ್ಮನೆಯಿಂದ ಹೊರ ಬಂದ ಬಳಿಕ ಅವರು ಸಂಪೂರ್ಣವಾಗಿ ಬೇರೆ ರೀತಿಯಲ್ಲೇ ಕಾಣಿಸಿಕೊಂಡರು. ಅವರು ಸಖತ್ ಆ್ಯಕ್ಟೀವ್ ಆದರು. ಈಗ ಅವರು ‘ಭರ್ಜರಿ ಬ್ಯಾಚುಲರ್ಸ್ 2’ಗೆ ಬಂದಿದ್ದಾರೆ.
‘ಭರ್ಜರಿ ಬ್ಯಾಚುಲರ್ಸ್ 2’ ಶನಿವಾರ (ಫೆಬ್ರವರಿ 22) ಪ್ರಸಾರ ಆರಂಭಿಸಿದೆ. ರವಿಚಂದ್ರನ್, ರಚಿತಾ ರಾಮ್ ಮೊದಲಾದವರು ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಈ ರಿಯಾಲಿಟಿ ಶೋಗೆ ಡ್ರೋನ್ ಪ್ರತಾಪ್ ಎಂಟ್ರಿ ಜಬರ್ದಸ್ತಾಗಿದೆ. ಬೆಂಜ್ ಕಾರಲ್ಲಿ ಪ್ರತಾಪ್ ಅವರ ಎಂಟ್ರಿ ಆಗಿದೆ.
ಡ್ರೋನ್ ಪ್ರತಾಪ್ ಅವರು ಬರುತ್ತಿದ್ದಂತೆ ಒಂದೆರಡು ಡ್ರೋನ್ಗಳು ಹಾರಾಟ ನಡೆಸಿವೆ. ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಯಾವ ರೀತಿಯಲ್ಲಿ ಮನರಂಜನೆ ನೀಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ: ಹನುಮಂತ ಗೆದ್ದಿದ್ದಕ್ಕೆ ಡ್ರೋನ್ ಪ್ರತಾಪ್ ಸಂಭ್ರಮ ನೋಡಿ
‘ಲೈಫ್ ಪಾರ್ಟ್ನರ್ ಸಿಕ್ಕರೆ, ನನ್ನ ಆಲೋಚನೆಗಳಿಗೆ ಹೊಂದಿಕೆ ಆದರೆ ಮದುವೆ ಆಗುತ್ತೇನೆ’ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಅವರಿಗೆ ಸಾಕಷ್ಟು ರೋಸ್ಗಳು ಕೂಡ ಸಿಕ್ಕಿವೆ. ಅವರಿಗೆ ಸಾಕಷ್ಟು ನಾಚಿಕೆ ಕೂಡ ಆಗಿದೆ. ಶನಿ-ಭಾನು ರಾತ್ರಿ 9ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.