
‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸರಣಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ‘ಫ್ಯಾಮಿಲಿ ಮ್ಯಾನ್’ ಹಾಗೂ ‘ಫ್ಯಾಮಿಲಿ ಮ್ಯಾನ್ 2’ ಸರಣಿ ಬಳಿಕ ಗೆಲುವು ಕಂಡ ಸರಣಿ ಇದಾಗಿದೆ. ಇದರಲ್ಲಿ ಮನೋಜ್ ಬಾಜ್ಪಾಯಿ, ಪ್ರಿಯಾಮಣಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಒಂದು ದೃಶ್ಯವನ್ನು ಸೋಶಿಯಲ್ ಮೀಡಿಯಾ ಬಳಕೆ ದಾರರು ಡೀಕೋಡ್ ಮಾಡಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ನಿರ್ದೇಶಕ ರಾಜ್ ಮತ್ತು ಡಿಕೆ ಸುಳ್ಳು ಮಾಡಲಿಲ್ಲ. ಇವರು ಸರಣಿ ಮೂಲಕ ಗಮನ ಸೆಳೆದಿದ್ದಾರೆ. ಈಗ ‘ಫ್ಯಾಮಿಲಿ ಮ್ಯಾನ್ 3’ ವೆಬ್ ಸರಣಿಯಲ್ಲಿ ಬರುವ ಒಂದು ದೃಶ್ಯದ ಬಗ್ಗೆ ಮಾತನಾಡಲಾಗುತ್ತಾ ಇದೆ.
ಶ್ರೀಕಾಂತ್ ತಿವಾರಿ ಹಾಗೂ ಆತನ ಪತ್ನಿ ಸುಚಿತ್ರಾ ಮತ್ತು ಮಕ್ಕಳಾದ ಧೃತಿ ಹಾಗೂ ಅಥರ್ವ್ ಮನೆ ಬಿಟ್ಟು ಹೊರಡೋ ಪರಿಸ್ಥಿತಿ ಬರುತ್ತದೆ. ಇವರ ಜೊತೆ ಜೆಕೆ ಕೂಡ ಬರುತ್ತಾನೆ. ಇವರು ಟ್ರೇನ್ನಲ್ಲಿ ಸಾಗುತ್ತಾರೆ. ತಮ್ಮ ಐಡೆಂಟಿಟಿ ಗೊತ್ತಾಗಬಾರದು ಎಂದು ಫೇಕ್ ಐಡಿಗಳನ್ನು ಮಾಡಿಕೊಂಡಿರುತ್ತಾರೆ. ಸುಚಿತ್ರಾಗೆ ಕೊಡೋ ಐಡಿಯಲ್ಲಿನ ಹೆಸರು ಮುತ್ತಲಗ ಎಂದಿರುತ್ತದೆ. ಇದೆಂತಹ ಹೆಸರು ಎಂದು ಸುಚಿತ್ರಾ ಕೇಳುತ್ತಾಳೆ.
ಈ ಹೆಸರನ್ನು ಇಡಲು ಒಂದು ಕಾರಣ ಇದೆ. 2007ರಲ್ಲಿ ‘ಪರುತಿವೀರನ್’ ಹೆಸರಿನ ತಮಿಳು ಸಿನಿಮಾ ಬಂದಿತ್ತು. ಈ ಚಿತ್ರದಲ್ಲಿ ಕಾರ್ತಿ ಹಾಗೂ ಪ್ರಿಯಾಮಣಿ ನಟಿಸಿದ್ದರು. ಈ ಸಿನಿಮಾದಲ್ಲಿ ಪ್ರಿಯಾಮಣಿ ಪಾತ್ರದ ಹೆಸರು ಮುತ್ತಲಗು ಎಂದಾಗಿರುತ್ತದೆ. ಈ ಸಿನಿಮಾ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಈ ಕಾರಣದಿಂದಲೇ ನಿರ್ದೇಶಕರು ಐಡಿಯಾ ಮಾಡಿ ಈ ಹೆಸರನ್ನು ಬಳಸಿದರು.
ಇದನ್ನೂ ಓದಿ: ‘ಹೇಗಿದೆ ಫ್ಯಾಮಿಲಿ ಮ್ಯಾನ್ 3’; ಮನೋಜ್ ನಟನೆಯ ಸೀರಿಸ್ ನೋಡಿದವರು ಹೇಳಿದ್ದಿಷ್ಟು
ಇನ್ನು ಅಥರ್ವ್ ಹೆಸರು ‘ಸುಮನ್’ ಎಂದಾಗಿರುತ್ತದೆ. ‘ಸುಮನ್ ಎಂಬುದು ಇದು ಹುಡುಗಿಯರ ಹೆಸರು’ ಎಂದು ಹೇಳುತ್ತಾನೆ ಅಥರ್ವ್. ಸುಮನ್ ಎಂಬುದು ಈ ಸರಣಿಯ ಬರಹಗಾರನ ಹೆಸರಂತೆ. ಈ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.