‘ಹೇಗಿದೆ ಫ್ಯಾಮಿಲಿ ಮ್ಯಾನ್ 3’; ಮನೋಜ್ ನಟನೆಯ ಸೀರಿಸ್ ನೋಡಿದವರು ಹೇಳಿದ್ದಿಷ್ಟು
ಫ್ಯಾಮಿಲಿ ಮ್ಯಾನ್ 3 ಸರಣಿ ಇಂದು (ನವೆಂಬರ್ 21) ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಈ ಸೀಸನ್ ಈಶಾನ್ಯ ಭಾರತದಲ್ಲಿ ನಡೆಯುವ ದಂಗೆಗಳು ಮತ್ತು ವಿದೇಶಿ ಶಕ್ತಿಗಳ ಪಿತೂರಿಗಳನ್ನು ಕೇಂದ್ರೀಕರಿಸುತ್ತದೆ. ವಿಜಯ್ ಸೇತುಪತಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಲವು ಟ್ವಿಸ್ಟ್‌ಗಳು ಇವೆ.

ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ ‘ಫ್ಯಾಮಿಲಿ ಮ್ಯಾನ್’ ಸರಣಿ ಗಮನ ಸೆಳೆದಿವೆ. ಈಗಾಗಲೇ ಈ ಸರಣಿಯಲ್ಲಿ ಎರಡು ಪಾರ್ಟ್ಗಳು ಬಂದು ಹಿಟ್ ಆದವು. ಈಗ ಮೂರನೇ ಪಾರ್ಟ್ ರಿಲೀಸ್ ಆಗಿದೆ. ಈ ಸರಣಿ ಕೂಡ ವೀಕ್ಷಕರ ಗಮನ ಸೆಳೆದಿದೆ. ಇಂದು (ನವೆಂಬರ್ 21) ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಆಗಿದ್ದು, ಇದನ್ನು ನೋಡಿದವರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸಿದ್ದಾರೆ. ಬಹುತೇಕರು ಸರಣಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಮೊದಲ ಸೀಸನ್ ಅಲ್ಲಿ ದೆಹಲಿ ಮೇಲೆ ಗ್ಯಾಸ್ ಅಟ್ಯಾಕ್ ಆಗುತ್ತದೆ. ಇದನ್ನು ಶ್ರೀಕಾಂತ್ ತಡೆಯುವ ಪ್ರಯತ್ನ ಮಾಡುತ್ತಾನೆ. ಆದರೆ, ಸಂಪೂರ್ಣವಾಗಿ ಯಶಸ್ಸು ಕಾಣೋದಿಲ್ಲ. ಒಂದಷ್ಟು ಸಾವು-ನೋವು ಸಂಭವಿಸುತ್ತದೆ. ಎರಡನೇ ಪಾರ್ಟ್ನಲ್ಲಿ ಶ್ರೀಲಂಕಾ ಎಲ್ಟಿಟಿ ಹಾಗೂ ಐಸಿಸ್ ಒಟ್ಟಾಗಿ ಚೆನ್ನೈನಲ್ಲಿ ಪ್ರಧಾನಿ ಮೇಲೆ ದಾಳಿ ಮಾಡಲು ಮುಂದಾದಾಗ ಶ್ರೀಕಾಂತ್ ಅದನ್ನು ತಡೆಯುತ್ತಾರೆ.
bhai Farzi and The Family Man are connected, and i KNEW it when i saw that scene in Farzi ep 4 where Michael calls Srikant for help, and now Srikant calling him back 😭 these two are hilarious. it was unexpected, but i kinda guessed it…#TheFamilyManOnPrime #TheFamilyMan3 pic.twitter.com/P5gAwGlapM
— 𝒑. (@weeknddxboy) November 21, 2025
ಕಳೆದ ಸೀಸನ್ಗಳಿಗೆ ಹೋಲಿಕೆ ಮಾಡಿದೆ ಈ ಸೀಸನ್ ಅಲ್ಲಿ ಹೆಚ್ಚು ಇಂಟಿಮೇಟ್ ದೃಶ್ಯಗಳು ಇವೆ ಎನ್ನಲಾಗಿದೆ. ಈ ಸರಣಿಯ ಕಥೆ ಈಶಾನ್ಯ ಭಾರತದಲ್ಲಿ ಸಾಗುತ್ತದೆ. ಈ ಭಾಗದಲ್ಲಿ ನಡೆಯುತ್ತಿರುವ ಧಂಗೆ ಹಾಗೂ ಅದನ್ನು ಬಳಸಿಕೊಳ್ಳಲು ವಿದೇಶಿ ದುಷ್ಟ ಶಕ್ತಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತೋರಿಸಲಾಗಿದೆ.
ಇದನ್ನೂ ಓದಿ: ‘ಫ್ಯಾಮಿಲಿ ಮ್ಯಾನ್ 3’ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಪಾತ್ರ ಹೇಗಿದೆ? ಏನನ್ನು ನಿರೀಕ್ಷಿಸಬಹುದು?
‘ಫ್ಯಾಮಿಲಿ ಮ್ಯಾನ್ 1’ ಸರಣಿಯಲ್ಲಿ ಶ್ರೀಕಾಂತ್ ಪತ್ನಿ ಸುಚಿತ್ರಾ ಸಹೋದ್ಯೋಗಿ ಜೊತೆ ಮೀಟಿಂಗ್ ಒಂದಕ್ಕೆ ತೆರಳಿದ್ದಳು. ಇವರ ಮಧ್ಯೆ ಏನಾದರೂ ನಡೆದಿತ್ತೇ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿತ್ತು. ಇದಕ್ಕೆ ಈ ಸರಣಿಯಲ್ಲೂ ಉತ್ತರ ನೀಡಿಲ್ಲವಂತೆ. ‘ಫರ್ಜಿ’ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಧ್ವನಿ ಇತ್ತು. ಈಗ ಈ ಸರಣಿಯಲ್ಲಿ ವಿಜಯ್ ಸೇತುಪತಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಹಲವು ಟ್ವಿಸ್ಟ್‌ಗಳು ಸರಣಿಯಲ್ಲಿ ಇವೆ. ಹೊಸ ಹೊಸ ಪಾತ್ರಗಳು ಪರಿಚಯಗೊಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




