Godzilla vs. Kong: Tamilrockersನಲ್ಲಿ ಲೀಕ್​ ಆಯ್ತು ಗಾಡ್ಜಿಲಾ vs ಕಾಂಗ್​ ಸಿನಿಮಾ

|

Updated on: Mar 24, 2021 | 8:27 PM

ಪೈರಸಿಯಲ್ಲಿ ಮುಂದಿರುವ Tamilrockers ಈ ಸಿನಿಮಾವನ್ನು ಲೀಕ್​ ಮಾಡಿದೆ. ಇಂಗ್ಲಿಷ್​ ವರ್ಷನ್​ ಬದಲು ಹಿಂದಿಗೆ ಡಬ್​ ಆದ ವರ್ಷನ್​ಅನ್ನು ಈ ಸೈಟ್​ನಲ್ಲಿ ಲೀಕ್​ ಮಾಡಲಾಗಿದೆ.

Godzilla vs. Kong: Tamilrockersನಲ್ಲಿ ಲೀಕ್​ ಆಯ್ತು ಗಾಡ್ಜಿಲಾ vs ಕಾಂಗ್​ ಸಿನಿಮಾ
ಗಾಡ್ಜಿಲ್ಲಾ vs ಕಾಂಗ್​ ಸಿನಿಮಾದ ಪೋಸ್ಟರ್​
Follow us on

ಪೈರಸಿ ಅನ್ನೋದು ಚಿತ್ರರಂಗಕ್ಕೆ ತಟ್ಟಿರುವ ದೊಡ್ಡ ಶಾಪ. ಕೋಟ್ಯಾಂತರ ರೂಪಾಯಿ ಸುರಿದು, ವರ್ಷಾನುಗಟ್ಟಲೆ ಕಷ್ಟಪಟ್ಟು ಮಾಡುವ ಸಿನಿಮಾ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಪೈರಸಿಗೆ ತುತ್ತಾಗುತ್ತದೆ. ಈಗ ಹಾಲಿವುಡ್​ನ ಗಾಡ್ಜಿಲಾ vs ಕಾಂಗ್​ ಸಿನಿಮಾಗೂ ಪೈರಿಸಿ ಬಿಸಿ ತಟ್ಟಿದೆ. ಸಿನಿಮಾ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಈ ಚಿತ್ರದ ಹಿಂದಿ ವರ್ಷನ್​ ಆನ್​ಲೈನ್​ನಲ್ಲಿ ಲೀಕ್​ ಆಗಿದೆ.

ಪೈರಸಿಯಲ್ಲಿ ಮುಂದಿರುವ Tamilrockers ಈ ಸಿನಿಮಾವನ್ನು ಲೀಕ್​ ಮಾಡಿದೆ. ಇಂಗ್ಲಿಷ್​ ವರ್ಷನ್​ ಬದಲು ಹಿಂದಿಗೆ ಡಬ್​ ಆದ ವರ್ಷನ್​ಅನ್ನು ಈ ಸೈಟ್​ನಲ್ಲಿ ಲೀಕ್​ ಮಾಡಲಾಗಿದೆ. ಹಿಂದಿ ಅವತರಣಿಕೆಗೆ ಬೇಡಿಕೆ ಹೆಚ್ಚಿರುವ ಕಾರಣಕ್ಕೆ ತಮಿಳ್​ ರಾಕರ್ಸ್​ ಈ ರೀತಿ ಮಾಡಿದೆ ಎನ್ನಲಾಗುತ್ತಿದೆ. ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಚಿತ್ರ ಲೀಕ್​ ಆಗಿರುವುದು ಭಾರತದಲ್ಲಿನ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ ನೀಡಿದೆ.

ತಮಿಳ್​ರಾಕರ್ಸ್ ವೆಬ್​ಸೈಟ್​ ಅನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಅಸಾಧ್ಯ ಎಂಬಂತಾಗಿದೆ. ದೇಶದಲ್ಲಿ ರಿಲೀಸ್​ ಆಗುವ ಬಹುತೇಕ ಚಿತ್ರಗಳನ್ನು ಇವರು ನಕಲು ಮಾಡಿ ಬಿಡುತ್ತಾರೆ. ಇವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಲಾಕ್‌ಡೌನ್ ಸಮಯದಲ್ಲಿ ಒಟಿಟಿಯಲ್ಲಿ ರಿಲೀಸ್​ ಆದ ಸಾಕಷ್ಟು ಸಿನಿಮಾಗಳನ್ನು ಇವರು ಲೀಕ್​ ಮಾಡಿದ್ದಾರೆ. ಲಾಕ್‌ಡೌನ್​ ನಂತರ ಮತ್ತೆ ತಮ್ಮ ಕೆಲಸವನ್ನು ಇವರು ಮುಂದುವರಿಸಿದ್ದಾರೆ.

ಅಂದಹಾಗೆ, ಗಾಡ್ಜಿಲಾ vs ಕಾಂಗ್​ ಸಿನಿಮಾಗೆ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಅನೇಕ ಆಂಗ್ಲ ವೆಬ್​ಸೈಟ್​ಗಳು ಸಿನಿಮಾವನ್ನು ಹೊಗಳಿ ಬರೆದಿದ್ದಾರೆ. ಪ್ರೇಕ್ಷಕರು ಕೂಡ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: KGF Chapter 2: ಹಾಲಿವುಡ್​ ಸಿನಿಮಾದಲ್ಲಿ ಕೆಜಿಎಫ್​-2 ಡೈಲಾಗ್? ಏನಿದರ ಹಿಂದಿನ ರಹಸ್ಯ