‘ನನಗೆ ವಿಷಾದವಿಲ್ಲ’; ಡಿವೋರ್ಸ್​ ಬಗ್ಗೆ ಕೊನೆಗೂ ಮೌನ ಮುರಿದ ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮೋಟ್ವಾನಿ ಸೋಹೈಲ್ ಕತುರಿಯಾ ಜೊತೆಗಿನ ವಿಚ್ಛೇದನದ ಕುರಿತು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನಾಲ್ಕೇ ವರ್ಷಕ್ಕೆ ವಿವಾಹ ಬಂಧನದಿಂದ ಹೊರಬಂದಿರುವ ನಟಿ, ಸೋಹೈಲ್‌ನನ್ನು ಪರೋಕ್ಷವಾಗಿ ದೂಷಿಸಿದ್ದಾರೆ. ಕುಟುಂಬದ ಬೆಂಬಲದಿಂದ ತಾನು ಈಗ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ. ಮರುಮದುವೆಯ ಬಗ್ಗೆ ಈಗ ಆಲೋಚಿಸಿಲ್ಲ ಎಂದಿದ್ದಾರೆ.

‘ನನಗೆ ವಿಷಾದವಿಲ್ಲ’; ಡಿವೋರ್ಸ್​ ಬಗ್ಗೆ ಕೊನೆಗೂ ಮೌನ ಮುರಿದ ಹನ್ಸಿಕಾ ಮೋಟ್ವಾನಿ
ಹನ್ಸಿಕಾ

Updated on: Apr 18, 2026 | 10:11 AM

ಹನ್ಸಿಕಾ ಮೋಟ್ವಾನಿ (Hansika) ಹಾಗೂ ಸೋಹೈಲ್ ಕತುರಿಯಾ ಅವರು ಅದ್ದೂರಿಯಾಗಿ ವಿವಾಹ ಆಗಿದ್ದೇನೋ ನಿಜ. ಆದರೆ, ಕೇವಲ ನಾಲ್ಕೇ ವರ್ಷಕ್ಕೆ ಇವರು ಬೇರೆ ಆದರು. ಡಿವೋರ್ಸ್ ಪಡೆಯುವುದಕ್ಕೂ ಮೊದಲೇ ಇವರು ಬೇರೆ ಬೇರೆಯಾಗಿ ವಾಸಿಸಲು ಆರಂಭಿಸಿದ್ದರು ಎಂದು ಹೇಳಲಾಗಿತ್ತು. ಈಗ ವಿಚ್ಛೇದನದ ಬಗ್ಗೆ ಹನ್ಸಿಕಾ ಮೊದಲ ಬಾರಿಗೆ ಮಾತನಾಡಿದ್ದಾರೆ. ಡಿವೋರ್ಸ್​​ಗೆ ಸೋಹೈಲ್ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಯಾವುದೇ ಸೆಲೆಬ್ರಿಟಿ ವಿಚ್ಛೇದನವಾದರೂ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಈಗಲೂ ಹಾಗೆಯೇ ಆಗಿದೆ. ಹನ್ಸಿಕಾ ಹಾಗೂ ಸೋಹೈಲ್ ಡಿವೋರ್ಸ್ ವಿಷಯದಲ್ಲಿ ಹಲವು ವದಂತಿಗಳು ಹುಟ್ಟಿಕೊಂಡವು. ಆದರೆ, ಇಷ್ಟು ದಿನ ಅವರು ಈ ಬಗ್ಗೆ ಮಾತನಾಡಿರಲಿಲ್ಲ. ಕೊನೆಗೂ ಈ ಬಗ್ಗೆ ಅವರು ಮೌನ ಮುರಿದಿದ್ದಾರೆ.

‘ಜನರು ಕ್ಲಿಕ್‌ಬೈಟ್ ಬಯಸಿದ್ದರು, ಅವರಿಗೆ ಅದು ಸಿಕ್ಕಿತು. ಅವರಿಗೆ ಹೆಡ್​​ಲೈನ್ ಬೇಕಿತ್ತು ಅದು ಅವರಿಗೆ ಸಿಕ್ಕಿತು. ನನಗೆ ಇದೆಲ್ಲ ಮುಖ್ಯ ಎಂದು ಅನಿಸಲಿಲ್ಲ. ಹೀಗಾಗಿ, ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಯಾರಾದರೂ ಗೊತ್ತಿಲ್ಲದೆ ತಪ್ಪಾದ ರೈಲನ್ನು ಏರಿದರೆ, ಅದರಲ್ಲಿ ಪ್ರಯಾಣ ಮಾಡಿ ಕೊರಗುವುದಕ್ಕಿಂತ, ರೈಲಿನಿಂದ ಇಳಿಯುವುದು ಉತ್ತಮ’ ಎಂದು ಅವರು ಹೇಳಿದ್ದಾರೆ. ‘ನನಗೆ ನನ್ನ ಕುಟುಂಬದಿಂದ ಅಪಾರ ಬೆಂಬಲ ಸಿಕ್ಕಿದೆ. ನನಗೆ ಡಿವೋರ್ಸ್ ಬಗ್ಗೆ ಯಾವುದೇ ವಿಷಯ ಇಲ್ಲ. ನಾನು ಖುಷಿಯಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ವಿಚ್ಛೇದನಕ್ಕೆ ತಾಯಿ ಮತ್ತು ಸಹೋದರ ಹೇಗೆ ಪ್ರತಿಕ್ರಿಯಿಸಿದರು ಎಂದು ಕೇಳಿದ್ದಕ್ಕೆ ಹನ್ಸಿಕಾ ನೇರ ಉತ್ತರ ನೀಡಿದ್ದಾರೆ. ‘ನಾನು ಅನುಭವಿಸಿದ ಕಷ್ಟಗಳನ್ನು ಕುಟುಂಬದವರು ನೋಡಿದ್ದರು. ಸರಿ ಹೊಂದುತ್ತಿಲ್ಲ ಎಂದರೆ ಹೊರಬರುವಂತೆ ಸೂಚಿಸಿದರು. ನಾನು ಸದಾ ಖುಷಿಯಿಂದ ಇರುವ ವ್ತಕ್ತಿ. ಹೀಗಾಗಿ, ಈ ರೀತಿಯ ಕಷ್ಟ ಅನುಭವಿಸುವುದು ಭಯ ತರುತ್ತದೆ. ನನ್ನ ಹಾಗೂ ಸೋಹೈಲ್ ಮಧ್ಯೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ತಿಳಿಯದಿರುವುದೇ ಉತ್ತಮ’ ಎಂದು ಹನ್ಸಿಕಾ ಹೇಳಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಹೇಗಿದೆ ಹನ್ಸಿಕಾ ಮನಸ್ಥಿತಿ? ಹೊಸ ಪೋಸ್ಟ್ ಹಾಕಿದ ನಟಿ

ಹನ್ಸಿಕಾ ಹಾಗೂ ಸೋಹೈಲ್ 2022ರ ಡಿಸೆಂಬರ್ 4ರಂದು ವಿವಾಹ ಆದರು. ಇತ್ತೀಚೆಗೆ ಇವರು ಬೇರೆ ಆಗಿದ್ದಾರೆ. ಸದ್ಯಕ್ಕೆ ಹನ್ಸಿಕಾಗೆ ಮದುವೆ ಆಗುವ ಆಲೋಚನೆ ಇಲ್ಲ. ಮುಂದೆ ವಿಧಿ ಹೇಗೆ ಕರೆದುಕೊಂಡು ಹೋಗುತ್ತದೆಯೋ ಹಾಗೆ ಹೋಗುವ ಆಲೋಚನೆಯಲ್ಲಿ ಅವರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us