ವಿಚ್ಛೇದನದ ಬಳಿಕ ಹೇಗಿದೆ ಹನ್ಸಿಕಾ ಮನಸ್ಥಿತಿ? ಹೊಸ ಪೋಸ್ಟ್ ಹಾಕಿದ ನಟಿ

ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ವಿಚ್ಛೇದನ ಪಡೆದಿದ್ದಾರೆ. ಮಾರ್ಚ್ 11ರಂದು ನ್ಯಾಯಾಲಯ ಇವರ ಪ್ರತ್ಯೇಕತೆಯನ್ನು ಖಚಿತಪಡಿಸಿದೆ. ಈ ಕುರಿತು ನಟಿ ಸಾಮಾಜಿಕ ಜಾಲತಾಣದಲ್ಲಿ ‘Chardi Kala always’ ಎಂದು ಪೋಸ್ಟ್ ಮಾಡಿದ್ದಾರೆ, ಇದು ಕಷ್ಟದಲ್ಲೂ ಆಶಾವಾದವನ್ನು ಸೂಚಿಸುತ್ತದೆ. ಇಬ್ಬರೂ ಮಾನಸಿಕವಾಗಿ ಸಿದ್ಧರಾಗಿದ್ದ ಕಾರಣ ಮತ್ತು ಹನ್ಸಿಕಾ ಜೀವನಾಂಶ ಕೇಳದೇ ಇರುವುದು ಈ ವಿಚ್ಛೇದನದ ಪ್ರಮುಖ ಅಂಶಗಳಾಗಿವೆ.

ವಿಚ್ಛೇದನದ ಬಳಿಕ ಹೇಗಿದೆ ಹನ್ಸಿಕಾ ಮನಸ್ಥಿತಿ? ಹೊಸ ಪೋಸ್ಟ್ ಹಾಕಿದ ನಟಿ
ಹನ್ಸಿಕಾ

Updated on: Mar 13, 2026 | 10:09 AM

ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿದ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಉದ್ಯಮಿ ಸೊಹೈಲ್ ಖತುರಿಯಾ ಅವರಿಂದ ವಿಚ್ಛೇದನ ಪಡೆದರು. ಮಾರ್ಚ್ 11ರಂದು ಕೋರ್ಟ್ ಇವರಿಗೆ ವಿಚ್ಛೇದನ ನೀಡಿದೆ. ಇಬ್ಬರು ಪರಸ್ಪರ ಸಮ್ಮತಿಸಿ ಬೇರೆ ಆಗಿದ್ದಾರೆ. ಹಾಗಾದರೆ ಡಿವೋರ್ಸ್ ಬಳಿಕ ಹನ್ಸಿಕಾ ಮನಸ್ಥಿತಿ ಹೇಗಿದೆ? ಅದಕ್ಕೆ ಇಲ್ಲಿದೆ ಉತ್ತರ. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಮನ ಸೆಳೆದಿದೆ.

ಹನ್ಸಿಕಾ ಅವರು ವಿಚ್ಛೇದನದ ಬಳಿಕ ಇನ್​​​ಸ್ಟಾಗ್ರಾಮ್ ಅಲ್ಲಿ ಸ್ಟೋರಿ ಒಂದನ್ನು ಹಾಕಿದ್ದಾರೆ. ‘Chardi Kala always’ ಎಂದು ಅವರು ಬರೆದುಕೊಂಡಿದ್ದಾರೆ. ಇದು ಪಂಜಾಬಿ ನುಡಿಗಟ್ಟಾಗಿದೆ. ಕಷ್ಟದಲ್ಲೂ ಸಹ ಆಶಾವಾದ, ಉನ್ನತ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ಈ ಸಾಲು ಸೂಚಿಸುತ್ತದೆ.

ಹನ್ಸಿಕಾ ಅವರು 2022ರ ಡಿಸೆಂಬರ್ 4ರಂದು ವಿವಾಹ ಆದರು. ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ಈ ಮುದವೆ ನಡೆಯಿತು. ಈ ಮದುವೆಯ ಫೋಟೋಗಳು ವೈರಲ್ ಆದವು. ಹನ್ಸಿಕಾ ಆತ್ಮೀಯ ಗೆಳತಿಯ ಮಾಜಿ ಪತಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವು ತಿಂಗಳ ನಂತರ ಅವರ ನಡುವೆ ಕಿತ್ತಾಟ ಪ್ರಾರಂಭವಾದವು. ಅದಾದ ನಂತರ, ಹನ್ಸಿಕಾ ಮತ್ತು ಸೊಹೈಲ್ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ವಿಚ್ಛೇದನದ ನಂತರ ಹನ್ಸಿಕಾ ಸೊಹೈಲ್‌ನಿಂದ ಜೀವನಾಂಶವನ್ನು ಕೇಳಿಲ್ಲ ಎನ್ನಲಾಗಿದೆ.

ಹನ್ಸಿಕಾ ಮತ್ತು ಸೊಹೈಲ್ ಅವರ ಜೀವನದಲ್ಲಿ ಕೆಲವು ವ್ಯತ್ಯಾಸಗಳಿದ್ದವು.ಅವರ ಆಲೋಚನೆಗಳು, ಆದ್ಯತೆಗಳು ಮತ್ತು ಜೀವನಶೈಲಿಗಳು ಪರಸ್ಪರ ಬಹಳ ಭಿನ್ನವಾಗಿವೆ ಎಂದು ಅವರು ಕ್ರಮೇಣ ಅರಿತುಕೊಂಡರು.

ಇದನ್ನೂ ಓದಿ: ಬೆಸ್ಟ್​ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ; ನಟಿಯ ಸ್ಪಷ್ಟನೆ ಏನಾಗಿತ್ತು?

2024ರಿಂದಲೇ ಹನ್ಸಿಕಾ ಹಾಗೂ ಸೊಹೈಲ್ ಬೇರೆ ಆಗಿ ವಾಸವಾಗಿರಲು ಆರಂಭಿಸಿದರು. ಈ ಕಾರಣದಿಂದ ಮಾನಸಿಕವಾಗಿ ಅವರು ಸಿದ್ಧರಾಗಿದ್ದರು. ಈ ಕಾರಣದಿಂದ ಅವರಿಗೆ ವಿಚ್ಛೇದನ ಅಷ್ಟಾಗಿ ಪರಿಣಾಮ ಬೀರದೇ ಇರಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us