ಕೊರೊನಾ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಚಿತ್ರರಂಗದ ಸ್ಟಾರ್ಸ್ಗಳು ಮುಂದೆ ಬಂದಿದ್ದಾರೆ. ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ ಸೇರಿ ಎಲ್ಲಾ ಚಿತ್ರರಂಗದವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗ ಬಾಲಿವುಡ್ ನಟಿ ಹಾಗೂ ಸಂಸದೆ ಹೇಮಾ ಮಾಲಿನಿ ಕೂಡ ಕೊವಿಡ್ ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದಾರೆ. ಬುಧವಾರ ಅವರು ಮಥುರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಆಕ್ಸಿಜನ್ ವರ್ಧಕ ಯಂತ್ರವನ್ನು ಅಳವಡಿಸಿದ್ದಾರೆ.
ಮಥುರಾ ಹೇಮಾ ಮಾಲಿನಿ ಅವರ ಲೋಕಸಭಾ ಕ್ಷೇತ್ರ. ಈ ಕಾರಣಕ್ಕೆ ಅವರು ಜಿಲ್ಲೆಯ ಬ್ರಜ್ ಭಾಗದ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಈ ಭಾಗದಲ್ಲಿ ಅವರು ಏಳು ಆಕ್ಸಿಜನ್ ಉತ್ಪಾದನಾ ಮಷಿನ್ಗಳನ್ನು ಸ್ಥಾಪಿಸಿದ್ದಾರೆ. ಇದು ಕೊವಿಡ್ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಆಮ್ಲಜನಕ ದೊರೆಯಲು ಸಹಕಾರಿಯಾಗಲಿದೆ.
ಬ್ರಜ್ ನಿವಾಸಿಗಳಿಗೆ ಸಹಾಯವಾಗಲು ಮಥುರಾ ಜಿಲ್ಲೆಯಲ್ಲಿ 7 ಆಕ್ಸಿಜನ್ ವರ್ಧಕ ಯಂತ್ರವನ್ನು ಸ್ಥಾಪಿಸಿದ್ದೇನೆ. ಮಥುರಾ ಜಿಲ್ಲೆಯ ಗ್ರಾಮೀಣ ಪ್ರದೇಶದ ಬ್ರಜ್ ನಿವಾಸಿಗಳಿಗೆ ಮತ್ತಷ್ಟು ಆಮ್ಲಜನಕ ವರ್ಧಕ ಯಂತ್ರವನ್ನು ಶೀಘ್ರದಲ್ಲೇ ಅರ್ಪಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಕಷ್ಟದ ಸಮಯದಲ್ಲಿ ಜನರ ಸಹಾಯಕ್ಕೆ ನಿಂತಿದ್ದಾರೆ.
ब्रज वासियों की सेवा के लिए जनपद मथुरा में 7oxygen Enhancerमशीन स्थापित करवा कर मैं अपने आप को धन्य महसूस कर रही हूं।शीघ्र ही जनपद मथुरा में और oxygen Enhancer मशीन ग्रामीण क्षेत्र के ब्रज वासियों के लिए समर्पित कर रही हूँ।इस तरह जनपद में लगभग 60 oxygen Bed और उपलब्ध हो जाएंगे। pic.twitter.com/aeuo6wNZTL
— Hema Malini (@dreamgirlhema) May 19, 2021
ಪ್ರಿಯಾಂಕಾ ಚೋಪ್ರಾ, ಅನುಷ್ಕಾ, ಶರ್ಮ, ಅಮಿತಾಭ್ ಬಚ್ಚನ್, ಸೋನು ಸೂದ್, ವರುಣ್ ಧವನ್ ಅಕ್ಷಯ್ ಕುಮಾತ್ ಸೇರಿ ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಕೊವಿಡ್ ಸಂಕಷ್ಟದ ಸಮಯದಲ್ಲಿ ಜನರ ಸಹಾಯಕ್ಕೆ ನಿಂತಿದ್ದಾರೆ.
ನಟ ಸೋನು ಸೂದ್ ಅವರಂತೂ ಅನೇಕರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಕಷ್ಟ ಎಂದು ಹೇಳಿದ ಎಲ್ಲರಿಗೂ ಅವರು ಸಹಾಯ ಮಾಡುತ್ತಿದ್ದಾರೆ. ಸದ್ಯದ ಕೊರೊನಾ ಸಂಕಷ್ಟದಲ್ಲಿ ಹಗಲಿರುಳು ಅವರು ಶ್ರಮಿಸುತ್ತಿದ್ದಾರೆ. ಅದರಲ್ಲೂ ಆಸ್ಪತ್ರೆಯ ಬೆಡ್ ಸಿಗದೇ ಒದ್ದಾಡುತ್ತಿರುವ, ಆಕ್ಸಿಜನ್ ಸಿಲಿಂಡರ್ ಕೊರತೆ ಅನುಭವಿಸುತ್ತಿರುವ ಕೊವಿಡ್ ಸೋಂಕಿತರಿಗಾಗಿ ಸೋನು ಸೂದ್ ಹಲವು ಬಗೆಯಲ್ಲಿ ನೆರವು ನೀಡುತ್ತಿದ್ದಾರೆ. ಕೊರೊನಾದಿಂದ ಅತಿ ಹೆಚ್ಚು ಕಷ್ಟ ಅನುಭವಿಸುತ್ತಿರುವ ನಾಲ್ಕು ರಾಜ್ಯಗಳಲ್ಲಿ ಆಕ್ಸಿಜನ್ ಪ್ಲಾಂಟ್ಗಳನ್ನು ಸ್ಥಾಪಿಸಲು ಸೋನು ಸೂದ್ ತೀರ್ಮಾನಿಸಿದ್ದರು. ಅದಕ್ಕಾಗಿ ಅವರು ಆಕ್ಸಿಜನ್ ಪ್ಲಾಂಟ್ಗಳನ್ನು ಫ್ರಾನ್ಸ್ನಿಂದ ಆಮದು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ಇದನ್ನೂ ಓದಿ: Sonu Sood: ಸೋನು ಸೂದ್ ಹೆಸರಲ್ಲಿ ಮಹಾಮೋಸ; ಕೊರೊನಾ ಕಾಲದಲ್ಲೂ ದುಡ್ಡು ಕಬಳಿಸಿದ ಕಿಡಿಗೇಡಿಗಳು