ಪಾಕಿಸ್ತಾನಿ ಹುಡುಗನ ಜೊತೆ ಮದುವೆ ರದ್ದು ಮಾಡಿಕೊಂಡ ಬಾಲಿವುಡ್​ ನಟಿ ಸಬಾ! ಕಹಿಸತ್ಯಗಳೇ ಕಾರಣ

‘ಹಿಂದಿ ಮೀಡಿಯಂ’ ಸಿನಿಮಾದಲ್ಲಿ ಸಬಾ ಖಮರ್​ ನಟಿಸಿದ್ದರು. ಇತ್ತೀಚೆಗೆ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆ ಎಂಬ ವಿಷಯ ಬಯಲಾಗಿತ್ತು. ಆದರೆ ಈಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

ಪಾಕಿಸ್ತಾನಿ ಹುಡುಗನ ಜೊತೆ ಮದುವೆ ರದ್ದು ಮಾಡಿಕೊಂಡ ಬಾಲಿವುಡ್​ ನಟಿ ಸಬಾ! ಕಹಿಸತ್ಯಗಳೇ ಕಾರಣ
ಸಬಾ ಖಮರ್​

Updated on: Apr 04, 2021 | 8:19 AM

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಬಾಲಿವುಡ್​ ನಟಿ ಸಬಾ ಖಮರ್​ ಅವರು ಪಾಕಿಸ್ತಾನಿ ಉದ್ಯಮಿ ಅಜೀಮ್​ ಖಾನ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಅವರಿಬ್ಬರ ಮದುವೆಗಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿತ್ತು. ಇನ್ನೇನು ಸಬಾ ಖಮರ್​ ಮತ್ತು ಅಜೀಮ್​ ಬಾಳಬಂಧನಕ್ಕೆ ಒಳಗಾಗುತ್ತಾರೆ ಎಂದುಕೊಳ್ಳುತ್ತಿರುವಾಗಲೇ ಒಂದು ಅಚ್ಚರಿಯ ಸುದ್ದಿ ಹೊರಬಿದ್ದಿದೆ. ಕೊನೇ ಕ್ಷಣದಲ್ಲಿ ಸಬಾ ಅವರು ಮದುವೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಯಾರು ಈ ಸಬಾ ಖಮರ್​?
ಬಾಲಿವುಡ್​ನ ಖ್ಯಾತ ನಟ ಇರ್ಫಾನ್​ ಖಾನ್​ ಅವರು ಅಭಿನಯಿಸಿದ್ದ ‘ಹಿಂದಿ ಮೀಡಿಯಂ’ ಸಿನಿಮಾದಲ್ಲಿ ಸಬಾ ಖಮರ್​ ನಟಿಸಿದ್ದರು. ಮೂಲತಃ ಸಬಾ ಕೂಡ ಪಾಕಿಸ್ತಾನದವರು. ಹಿಂದಿ ಮೀಡಿಯಂ ಸಿನಿಮಾ ಬಳಿಕ ಅವರು ಭಾರತದ ಸಿನಿಪ್ರಿಯರಿಗೂ ಪರಿಚಿತರಾಗಿದ್ದರು. ಇತ್ತೀಚೆಗೆ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆ ಎಂಬ ವಿಷಯ ಬಯಲಾಗಿತ್ತು. ಆದರೆ ಈಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

ಮದುವೆಗೆ ಒಪ್ಪಿಕೊಂಡಿದ್ದ ನಟಿ!
ಪಾಕಿಸ್ತಾನದ ಉದ್ಯಮಿ ಅಜೀಮ್​ ಖಾನ್​ ಅವರನ್ನು ಸಬಾ ಖಮರ್​ ಪ್ರೀತಿಸುತ್ತಿದ್ದಾರೆ ಎಂಬುದಕ್ಕೆ ಅವರ ಸೋಶಿಯಲ್​ ಮೀಡಿಯಾ ಕಾಮೆಂಟ್​ಗಳು ಸಾಕ್ಷಿ ಒದಗಿಸುತ್ತಿದ್ದವು. ಈ ನಟಿಯ ಪೋಸ್ಟ್​ವೊಂದಕ್ಕೆ ಕಾಮೆಂಟ್​ ಮಾಡಿದ್ದ ಅಜೀಮ್​, ‘ಈ ವರ್ಷ ಮದುವೆ ಆಗೋಣವೇ’ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಸಬಾ, ‘ಒಪ್ಪಿಗೆ ಇದೆ’ ಎಂದು ಹೇಳಿದ್ದರು. ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಮದುವೆ ಆಗುವ ನಿರ್ಧಾರವನ್ನು ಅವರು ಕೈ ಬಿಟ್ಟಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನೂ ವಿವರಿಸಿದ್ದಾರೆ.

‘ನನಗಿದು ಕಷ್ಟದ ಕಾಲ’
‘ಎಲ್ಲರಿಗೂ ಹಾಯ್​.. ಕೆಲವು ವೈಯಕ್ತಿಕ ಕಾರಣಗಳಿಂದಾಗಿ ನಾನು ಅಜೀಮ್​ ಖಾನ್​ನಿಂದ ದೂರಾಗುತ್ತಿದ್ದೇನೆ. ನಾವು ಈಗ ಮದುವೆ ಆಗುತ್ತಿಲ್ಲ. ಈ ನನ್ನ ನಿರ್ಧಾರವನ್ನು ನೀವು ಬೆಂಬಲಿಸುತ್ತೀರಿ ಎಂದುಕೊಂಡಿದ್ದೇನೆ. ಕೆಲವು ಕಹಿ ಸತ್ಯಗಳನ್ನು ಅರ್ಥ ಮಾಡಿಕೊಳ್ಳಲು ತಡವಾಗಿಲ್ಲ. ನಾನು ಯಾವತ್ತೂ ಅಜೀಮ್​ನನ್ನು ಭೇಟಿ ಆಗಿಲ್ಲ. ಫೋನ್​ ಮೂಲಕ ಮಾತ್ರ ನಾವು ಸಂಪರ್ಕದಲ್ಲಿ ಇದ್ದೆವು. ಸದ್ಯ ನನಗಿದು ಕಷ್ಟದ ಕಾಲ. ಈ ಸಮಯ ಕಳೆದುಹೋಗುತ್ತದೆ‘ ಎಂದು ಸೋಶಿಯಲ್​ ಮೀಡಿಯಾದಲ್ಲಿ ಸಬಾ ಬರೆದುಕೊಂಡಿದ್ದಾರೆ.

ಈ ಬ್ರೇಕಪ್​ಗೆ ತಾವೇ ಕಾರಣ ಎಂಬುದನ್ನು ಅಜೀಮ್​ ಒಪ್ಪಿಕೊಂಡಿದ್ದಾರೆ. ‘ಸಬಾ ನೀನು ಅದ್ಭುತ ವ್ಯಕ್ತಿ. ಜಗತ್ತಿನ ಎಲ್ಲ ಖುಷಿ ನೀನು ಅರ್ಹಳು. ದೇವರು ನಿನಗೆ ಯಶಸ್ಸು ಮತ್ತು ಪ್ರೀತಿಯನ್ನು ನೀಡಲಿ. ಕಷ್ಟದ ಹಾದಿಗಳು ಯಾವಾಗಲೂ ಸುಂದರವಾದ ಜಾಗಕ್ಕೆ ಕೊಂಡೊಯ್ಯುತ್ತವೆ. ಈ ಬ್ರೇಕಪ್​ಗೆ ನಾನೇ ಜವಾಬ್ದಾರ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ನಾಲ್ಕು ವರ್ಷಗಳ ಹಿಂದೆ ನಿಧಿ ಸುಬ್ಬಯ್ಯ ಮದುವೆ ಆಗಿದ್ರು; ಆಮೇಲೇನಾಯ್ತು?

Chaithra Kotoor: ಚೈತ್ರಾ ಕೋಟೂರ್​ ಮದುವೆ ರಂಪಾಟ! ಒಂದೇ ದಿನದಲ್ಲಿ ಪತಿ ನಾಗಾರ್ಜುನ್​ ಬಿಟ್ಟು ಹೋಗಿದ್ದೇಕೆ?