ಖ್ಯಾತ ನಟ ಅಲ್ ಪಚಿನೋ (Al Pacino) ಅವರು ಒಂದು ವಿಚಿತ್ರ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದಾರೆ. ಹಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಅವರಿಗೆ ಈಗ 83 ವರ್ಷ ವಯಸ್ಸು. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎಂಬ ಮಾತು ಅಲ್ ಪಚಿನೋ ಅವರಿಗೆ ಸೂಕ್ತವಾಗಿ ಹೊಂದಿಕೆ ಆಗುತ್ತದೆ. ಈ ಇಳಿ ವಯಸ್ಸಿನಲ್ಲೂ ಅವರು ಪ್ರೇಯಸಿಯನ್ನು ಹೊಂದಿದ್ದಾರೆ. ಅವರ ಗರ್ಲ್ಫ್ರೆಂಡ್ ಹೆಸರು ನೂರ್ ಅಲ್ಫಾಲ್ಲಾ. ಅಚ್ಚರಿ ಎಂದರೆ ಅಲ್ ಪಚಿನೋ ಅವರ ಪ್ರೇಯಸಿ ನೂರ್ ಅಲ್ಫಾಲ್ಲಾ (Noor Alfallah) ವಯಸ್ಸು ಕೇವಲ 29 ವರ್ಷ! ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ. ಈಗ ನೂರ್ ಅಲ್ಫಾಲ್ಲಾ ಪ್ರೆಗ್ನೆಂಟ್ (Pregnant) ಆಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ‘ಅದಕ್ಕೆ ಕಾರಣ ನಾನಲ್ಲ’ ಅಂತ ಅಲ್ ಪಚಿನೋ ವಾದಿಸಿದ್ದಾರೆ. ಕಡೆಗೂ ಡಿಎನ್ಎ ಟೆಸ್ಟ್ ಮಾಡಿಸಲಾಗಿದೆ. ಅದ್ರಲ್ಲಿ ಏನ್ ರಿಸಲ್ಟ್ ಬಂತು? ಈ ಸ್ಟೋರಿ ಓದಿ..
2022ರಿಂದಲೂ ಅಲ್ ಪಚಿನೋ ಮತ್ತು ನೂರ್ ಅಲ್ಫಾಲ್ಲಾ ಅವರು ಜೊತೆಗಿದ್ದಾರೆ. ಅನೇಕ ಬಾರಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದುಂಟು. ಈಗ ನೂರ್ ಅಲ್ಫಾಲ್ಲಾ ಪ್ರೆಗ್ನೆಂಟ್ ಆಗಿದ್ದಾರೆ. ಅಲ್ ಪಚಿನೋಗೆ 83 ವರ್ಷ ಆಗಿರುವುದರಿಂದ ಈ ವಯಸ್ಸಿನಲ್ಲಿ ತಾವು ತಂದೆ ಆಗಲು ಸಾಧ್ಯವೇ ಎಂಬ ಪ್ರಶ್ನೆ ಸ್ವತಃ ಅವರಿಗೆ ಮೂಡಿದೆ. ಹಾಗಾಗಿ ನೂರ್ ಅಲ್ಫಾಲ್ಲಾ ಗರ್ಭಿಣಿ ಆಗಿದ್ದಕ್ಕೆ ತಾವು ಕಾರಣ ಅಲ್ಲ ಎಂಬುದು ಅವರ ವಾದ. ಒಟ್ಟಿನಲ್ಲಿ ಪ್ರೇಯಸಿ ಮೇಲೆ ಅವರಿಗೆ ಅನುಮಾನ ಬಂದಿದೆ. ಆಗಿದ್ದಾಗಲಿ ಟೆಸ್ಟ್ ಮಾಡಿಸಿಯೇ ಬಿಡೋಣ ಅಂತ ಈ ಜೋಡಿ ತೀರ್ಮಾನಿಸಿತು.
83ರ ಪ್ರಾಯದ ಬಾಯ್ಫ್ರೆಂಡ್ನ ದುಗುಡ ಏನು ಎಂಬುದು 29ರ ಪ್ರಾಯದ ಸುಂದರಿ ನೂರ್ ಅಲ್ಫಾಲ್ಲಾ ಅವರಿಗೆ ಅರ್ಥ ಆಗಿದೆ. ಆದ್ದರಿಂದ ಅವರು ಡಿಎನ್ಎ ಟೆಸ್ಟ್ ಮಾಡಿಸಲು ಒಪ್ಪಿಕೊಂಡಿದ್ದಾರೆ. ಆ ಪರೀಕ್ಷೆಯಲ್ಲಿ ಬಂದ ರಿಪೋರ್ಟ್ ನೋಡಿ ಸ್ವತಃ ಅಲ್ ಪಚಿನೋ ಅವರಿಗೆ ಅಚ್ಚರಿ ಆಗಿದೆ. ಯಾಕೆಂದರೆ, ನೂರ್ ಅಲ್ಫಾಲ್ಲಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಅಲ್ ಪಚಿನೋ ಅವರೇ ತಂದೆ ಎಂಬುದು ಸಾಬೀತಾಗಿದೆ!
ಇದನ್ನೂ ಓದಿ: ಮದುವೆಗೂ ಮುನ್ನ ಪ್ರೆಗ್ನೆಂಟ್ ಆದ ಇಲಿಯಾನಾ ಡಿಕ್ರೂಜ್; ಮಗಳ ನಿರ್ಧಾರಕ್ಕೆ ಅಮ್ಮನ ಬೆಂಬಲ
ಹಾಲಿವುಡ್ನಲ್ಲಿ ಡಿಗ್ಗಜ ನಟನಾಗಿ ಅಲ್ ಪಚಿನೋ ಗುರುತಿಸಿಕೊಂಡಿದ್ದಾರೆ. ‘ಗಾಡ್ ಫಾದರ್’, ‘ಸೆಂಟ್ ಆಫ್ ಎ ವುಮನ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ. ಅವರ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ, ಟೋನಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆ ಮತ್ತು ರಂಗಭೂಮಿಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. 1969ರಿಂದಲೂ ಅವರು ಹಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತೆ ಪ್ರೆಗ್ನೆಂಟ್? ವಿಡಿಯೋ ಕಂಡು ಅನುಮಾನ ವ್ಯಕ್ತಪಡಿಸಿದ ಫ್ಯಾನ್ಸ್
ಅಲ್ ಪಚಿನೋ ಅವರ ವೈಯಕ್ತಿಕ ಜೀವನ ಡಿಫರೆಂಟ್ ಆಗಿದೆ. ಅವರಿಗೆ ಈಗಾಗಲೇ ಮೂವರು ಮಕ್ಕಳು ಇದ್ದಾರೆ. ಆದರೆ ಅಲ್ ಪಚಿನೋಗೆ ಮದುವೆ ಆಗಿಲ್ಲ! ಹೌದು, ಈ ಮೂವರು ಮಕ್ಕಳು ಜನಿಸಿದ್ದು ಇಬ್ಬರು ಮಾಜಿ ಪ್ರೇಯಸಿಯರಿಗೆ. ಈಗ 4ನೇ ಮಗುವಿಗೆ ತಂದೆ ಆಗುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ಮೂವರು ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಅಲ್ ಪಚಿನೋ ಪ್ರೇಯಸಿ ನೂರ್ ಅಲ್ಫಾಲ್ಲಾ ಇತಿಹಾಸ ಕೂಡ ದೊಡ್ಡದಿದೆ. 22 ವಯಸ್ಸಿನಲ್ಲೇ ಅವರು 50 ಪ್ಲಸ್ ವಯಸ್ಸಿನ ವ್ಯಕ್ತಿಗಳ ಜೊತೆ ಡೇಟಿಂಗ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.