Arnold Schwarzenegger: ‘ಇನ್ಮುಂದೆ ಟರ್ಮಿನೇಟರ್​ ಪಾತ್ರ ಮಾಡಲ್ಲ’: ಫ್ಯಾನ್ಸ್​ಗೆ ಬೇಸರದ ಸುದ್ದಿ ನೀಡಿದ ಅರ್ನಾಲ್ಡ್​ ಶ್ವಾರ್ಚನೆಗರ್​

The Terminator: ‘ಟರ್ಮಿನೇಟರ್ ಫ್ರಾಂಚೈಸ್​ ಮುಗಿದಿಲ್ಲ. ಆದರೆ ನನಗೆ ಸಾಕಾಗಿದೆ. ಹೊಸ ಥೀಮ್​ನಲ್ಲಿ ಈ ಸಿನಿಮಾ ಬರಬೇಕು’ ಎಂದು ಅರ್ನಾಲ್ಡ್​ ಶ್ವಾರ್ಚನೆಗರ್​ ಹೇಳಿದ್ದಾರೆ.

Arnold Schwarzenegger: ‘ಇನ್ಮುಂದೆ ಟರ್ಮಿನೇಟರ್​ ಪಾತ್ರ ಮಾಡಲ್ಲ’: ಫ್ಯಾನ್ಸ್​ಗೆ ಬೇಸರದ ಸುದ್ದಿ ನೀಡಿದ ಅರ್ನಾಲ್ಡ್​ ಶ್ವಾರ್ಚನೆಗರ್​
ಅರ್ನಾಲ್ಡ್ ಶ್ವಾರ್ಚನೆಗರ್

Updated on: May 20, 2023 | 1:25 PM

ಮುಖ್ಯಾಂಶಗಳು

  • ಟರ್ಮಿನೇಟರ್​ನ ಮೊದಲ ಎರಡು ಸೀರಿಸ್​ಗಳು ಸಖತ್​ ಜನಪ್ರಿಯತೆ ಪಡೆದುಕೊಂಡವು. ಬಾಕ್ಸ್​ ಆಫೀಸ್​ನಲ್ಲೂ ಉತ್ತಮ ಕಲೆಕ್ಷನ್​ ಮಾಡಿದವು.
  • ಆದರೆ ನಂತರದ ಸಿನಿಮಾಗಳಿಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಇನ್ಮುಂದೆ ತಾವು ಆ ಪಾತ್ರ ಮಾಡುವುದಿಲ್ಲ ಎಂದು ಅರ್ನಾಲ್ಡ್​ ಶ್ವಾರ್ಚನೆಗರ್​ ಅವರು ಹೇಳಿದ್ದಾರೆ.
  • ‘ಟರ್ಮಿನೇಟರ್ ಫ್ರಾಂಚೈಸ್​ ಮುಗಿದಿಲ್ಲ. ಆದರೆ ನನಗೆ ಸಾಕಾಗಿದೆ. ಹೊಸ ಥೀಮ್​ನಲ್ಲಿ ಈ ಸಿನಿಮಾ ಬರಬೇಕು’ ಎಂದು ಅರ್ನಾಲ್ಡ್​ ಶ್ವಾರ್ಚನೆಗರ್​ ಹೇಳಿದ್ದಾರೆ.

ಹಾಲಿವುಡ್​ ಸಿನಿಮಾ ಪ್ರೇಕ್ಷಕರಿಗೆ ಅರ್ನಾಲ್ಡ್​ ಶ್ವಾರ್ಚನೆಗರ್​ (Arnold Schwarzenegger) ಎಂದರೆ ಸಖತ್​ ಇಷ್ಟ. 1970ರಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ನಟನೆಗೆ ಫಿದಾ ಆಗದವರಿಲ್ಲ. ಅದರಲ್ಲೂ ಅವರು ನಟಿಸಿದ ‘ದಿ ಟರ್ಮಿನೇಟರ್​’ (The Terminator) ಸಿನಿಮಾವಂತೂ ಸಿಕ್ಕಾಪಟ್ಟೆ ಫೇಮಸ್​. ಆ ಚಿತ್ರದ ಸೀಕ್ವೆಲ್​ಗಳಲ್ಲೂ ನಟಿಸುವ ಮೂಲಕ ಅರ್ನಾಲ್ಡ್​ ಶ್ವಾರ್ಚನೆಗರ್​ ಅವರು ಅಭಿಮಾನಿಗಳನ್ನು ರಂಜಿಸಿದರು. ಆದರೆ ಈಗ ಅವರೊಂದು ಬೇಸರದ ಸುದ್ದಿ ನೀಡಿದ್ದಾರೆ. ಇನ್ಮುಂದೆ ತಾವು ಟರ್ಮಿನೇಟರ್​ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

1984ರಲ್ಲಿ ‘ದಿ ಟರ್ಮಿನೇಟರ್​’ ಸಿನಿಮಾ ತೆರೆಕಂಡಿತು. ಆ ಸಿನಿಮಾದಲ್ಲಿ ಟರ್ಮಿನೇಟರ್ ಆಗಿ ಅರ್ನಾಲ್ಡ್​ ಶ್ವಾರ್ಚನೆಗರ್​ ನಟಿಸಿ ಅಚ್ಚರಿ ಮೂಡಿಸಿದರು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಜೇಮ್ಸ್​ ಕ್ಯಾಮೆರಾನ್​. ಆ ಬಳಿಕ 5 ಸೀಕ್ವೆಲ್​ಗಳು ಮೂಡಿಬಂದವು. 2009ರಲ್ಲಿ ಬಂದ ‘ಟರ್ಮಿನೇಟರ್​ ಸಾಲ್ವೇಷನ್​’ ಸಿನಿಮಾದಲ್ಲಿ ಅರ್ನಾಲ್ಡ್​ ಅವರು ನಟಿಸಿರಲಿಲ್ಲ. ಇನ್ನುಳಿದ ಎಲ್ಲ ಚಿತ್ರಗಳಲ್ಲೂ ಅವರು ಅಭಿನಯಿಸಿದರು. ಆದರೆ ಈಗ ಅವರು ಟರ್ಮಿನೇಟರ್​ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.

ಟರ್ಮಿನೇಟರ್​ನ ಮೊದಲ ಎರಡು ಸೀರಿಸ್​ಗಳು ಸಖತ್​ ಜನಪ್ರಿಯತೆ ಪಡೆದುಕೊಂಡವು. ಬಾಕ್ಸ್​ ಆಫೀಸ್​ನಲ್ಲೂ ಉತ್ತಮ ಕಲೆಕ್ಷನ್​ ಮಾಡಿದವು. ಆದರೆ ನಂತರದ ಸಿನಿಮಾಗಳಿಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಇನ್ಮುಂದೆ ತಾವು ಆ ಪಾತ್ರ ಮಾಡುವುದಿಲ್ಲ ಎಂದು ಅರ್ನಾಲ್ಡ್​ ಶ್ವಾರ್ಚನೆಗರ್​ ಅವರು ಹೇಳಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: 7ನೇ ಮಗುವಿಗೆ ತಂದೆಯಾದ ಖುಷಿಯಲ್ಲಿ 79ನೇ ವಯಸ್ಸಿನ ಹಾಲಿವುಡ್​​ ನಟ

‘ಟರ್ಮಿನೇಟರ್ ಫ್ರಾಂಚೈಸ್​ ಮುಗಿದಿಲ್ಲ. ಆದರೆ ನನಗೆ ಸಾಕಾಗಿದೆ. ಹೊಸ ಥೀಮ್​ನಲ್ಲಿ ಈ ಸಿನಿಮಾ ಬರಬೇಕು ಎಂದು ಪ್ರೇಕ್ಷಕರು ಸ್ಪಷ್ಟವಾಗಿ ತಿಳಿಸಿದ್ದಾರೆ. ಹಾಗಾಗಿ ಉತ್ತಮವಾದ ಕಥೆಯೊಂದಿಗೆ ಈ ಫ್ರಾಂಚೈಸ್​ ಮುಂದುವರಿಯಲಿ’ ಎಂದು ‘ಹಾಲಿವುಡ್​ ರಿಪೋರ್ಟರ್​’ ನಡೆಸಿದ ಸಂದರ್ಶನದಲ್ಲಿ ಅರ್ನಾಲ್ಡ್​ ಶ್ವಾರ್ಚನೆಗರ್​ ಹೇಳಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ಸಿನಿಮಾ ಪರ ಪ್ರಚಾರ ಶುರು ಮಾಡಿದ ಸಲ್ಮಾನ್ ಖಾನ್

ಈಗ ಅರ್ನಾಲ್ಡ್​ ಶ್ವಾರ್ಚನೆಗರ್​ ಅವರಿಗೆ 75 ವರ್ಷ ವಯಸ್ಸು. 22-23ನೇ ವಯಸ್ಸಿನಲ್ಲಿ ಅವರು ಕಟ್ಟುಮಸ್ತಾದ ದೇಹದ ಮೂಲಕ ಗಮನ ಸೆಳೆದಿದ್ದರು. ಅವರ ಬಾಡಿ ನೋಡಿ ವಿಶ್ವಾದ್ಯಂತ ಇರುವ ಪ್ರೇಕ್ಷಕರು ವಾವ್​ ಎಂದಿದ್ದರು. ಇಂದಿಗೂ ದೇಹದಾರ್ಢ್ಯ ಮಾಡುವ ಯುವಕರಿಗೆ ಅರ್ನಾಲ್ಡ್​ ಶ್ವಾರ್ಚನೆಗರ್​ ಸ್ಫೂರ್ತಿ. ಬಹುತೇಕ ಜಿಮ್​ಗಳಲ್ಲಿ ಅವರ ಫೋಟೋ ರಾರಾಜಿಸುತ್ತದೆ.

ಇದನ್ನೂ ಓದಿ:  ಹಾಲಿವುಡ್ ಎಂಟ್ರಿ ಬಗ್ಗೆ ಪರ-ವಿರೋಧ ಚರ್ಚೆ; ಶಾರುಖ್ ಹೇಳಿಕೆಗೆ ಉತ್ತರ ಕೊಟ್ಟ ಪ್ರಿಯಾಂಕಾ ಚೋಪ್ರಾ

ಮ್ಯೂಸಿಕ್​ ವಿಡಿಯೋ, ಕಿರುತೆರೆ ಸೀರಿಸ್​ಗಳಲ್ಲೂ ಕಾಣಿಸಿಕೊಂಡು ಅರ್ನಾಲ್ಡ್​ ಶ್ವಾರ್ಚನೆಗರ್​ ಫೇಮಸ್​ ಆಗಿದ್ದಾರೆ. ರಾಜಕೀಯದಲ್ಲೂ ಸೇವೆ ಸಲ್ಲಿಸಿದ್ದಾರೆ. ಕ್ಯಾಲಿಫೋರ್ನಿಯಾ ನಗರದ 30ನೇ ಗವರ್ನರ್​ ಆಗಿ ಅವರು ಆಯ್ಕೆ ಆಗಿದ್ದರು. ಗವರ್ನರ್​ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅವರು ‘ಟರ್ಮಿನೇಟರ್​ ಸಾಲ್ವೇಶನ್​’ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us