AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್ ಸಿನಿಮಾ ಪರ ಪ್ರಚಾರ ಶುರು ಮಾಡಿದ ಸಲ್ಮಾನ್ ಖಾನ್

Hollywood: ತನ್ನದೇ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಂದರ ಹಿಂದೊಂದು ಮುಗ್ಗರಿಸುತ್ತಿರುವಾಗ ಸಲ್ಮಾನ್ ಖಾನ್, ಹಾಲಿವುಡ್ ಸಿನಿಮಾದ ಪರ ಪ್ರಚಾರಕ್ಕೆ ಇಳಿದಿದ್ದಾರೆ.

ಹಾಲಿವುಡ್ ಸಿನಿಮಾ ಪರ ಪ್ರಚಾರ ಶುರು ಮಾಡಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್
ಮಂಜುನಾಥ ಸಿ.
|

Updated on: May 02, 2023 | 3:58 PM

Share

ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan), ಬಾಕ್ಸ್ ಆಫೀಸ್​ನಲ್ಲಿ (Box Office) ಒಂದು ದೊಡ್ಡ ಹಿಟ್​ಗಾಗಿ ಎದುರು ನೋಡುತ್ತಿದ್ದಾರೆ. ಆಮಿರ್ ಖಾನ್, ಅಕ್ಷಯ್ ಕುಮಾರ್ ರೀತಿಯಲ್ಲಿಯೇ ಸಲ್ಮಾನ್ ಖಾನ್​ ಸಹ ಸತತ ಸೋಲುಗಳನ್ನು ಕಂಡಿದ್ದಾರೆ. ಅವರು ಹೀರೋ ಆಗಿ ನಟಿಸಿದ ಸಿನಿಮಾ ಒಂದು ಸೂಪರ್-ಡೂಪರ್ ಹಿಟ್ ಆಗಿ ಐದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ತಮ್ಮದೇ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಮಕಾಡೆ ಮುಳುಗುತ್ತಿರುವ ಈ ಸಮಯದಲ್ಲಿ ಸಲ್ಮಾನ್ ಖಾನ್ ಹಾಲಿವುಡ್ ಸಿನಿಮಾದ ಪ್ರಚಾರಕ್ಕೆ ಇಳಿದಿದ್ದಾರೆ.

ಮಾರ್ವೆಲ್​ನ ಜನಪ್ರಿಯ ಸಿನಿಮಾ ಸರಣಿಗಳಲ್ಲಿ ಒಂದಾಗಿರುವ ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿಯ ಮೂರನೇ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಪರವಾಗಿ ಭಾರತದಲ್ಲಿ ಸಲ್ಮಾನ್ ಖಾನ್ ಪ್ರಚಾರ ಮಾಡಲಿದ್ದಾರೆ. ಅಥವಾ ಈ ಸಿನಿಮಾ ತಂಡವು ಭಾರತದಲ್ಲಿ ಸಲ್ಮಾನ್ ಖಾನ್ ಅನ್ನು ತಮ್ಮ ರಾಯಭಾರಿಯನ್ನಾಗಿ ಆರಿಸಿಕೊಂಡಿದೆ. ಇಂದು ಈ ಕುರಿತು ವಿಡಿಯೋ ಒಂದನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದು, ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ ವಾಲ್ಯುಮ್ 3ಗೆ ಸ್ವಾಗತ ಕೋರಿದ್ದಾರೆ.

ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ ಸಿನಿಮಾದ ಪರವಾಗಿ ಪ್ರಮೋಷನಲ್ ವಿಡಿಯೋ ಹಂಚಿಕೊಂಡಿರುವ ಸಲ್ಮಾಣ್ ಖಾನ್, ಈ ಸಿನಿಮಾ ಸರಣಿಯ ಜನಪ್ರಿಯ ಪಾತ್ರ ಗ್ರೂಟ್​ನಿಂದ ಪ್ರೇರಿತರಾಗಿ ಸುದ್ದಿಗೋಷ್ಠಿಯಲ್ಲಿ ತಮಗೆ ಕೇಳಲಾಗುವ ಎಲ್ಲ ಪ್ರಶ್ನೆಗಳಿಗೂ ಗ್ರೂಟ್ ಹೇಳುವಂತೆಯೇ ಐ ಆಮ್ ಸಲ್ಮಾನ್ ಖಾನ್ ಎಂದಷ್ಟೆ ಉತ್ತರ ನೀಡುತ್ತಾರೆ. ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ ಸಿನಿಮಾದಲ್ಲಿ ಗ್ರೂಟ್ ಸಹ ಐ ಆಮ್ ಗ್ರೂಟ್ ಎನ್ನುವುದು ಬಿಟ್ಟರೆ ಇನ್ಯಾವುದೇ ಸಂಭಾಷಣೆ ಹೇಳುವುದಿಲ್ಲ. ಸುದ್ದಿಗೋಷ್ಠಿಯ ಕೊನೆಯಲ್ಲಿ ಸಲ್ಮಾನ್ ಖಾನ್ ಹೊರಡುವಾಗ ಧರಿಸಿದ್ದ ಜಾಕೆಟ್ ತೆಗೆದರೆ ಅವರ ಟಿ-ಶರ್ಟ್ ಹಿಂಭಾಗದಲ್ಲಿ ಗ್ರೂಟ್​ನ ಚಿತ್ರವಿರುತ್ತದೆ. ಸಲ್ಮಾನ್ ಖಾನ್ ಸಹ ಐದು ಬೆರಳು ತೋರಿಸಿ ಎಲ್ಲವೂ ಐದನೇ ತಾರೀಖು ತಿಳಿಯಲಿದೆ ಎನ್ನುತ್ತಾರೆ.

ಇದನ್ನೂ ಓದಿ:Salman Khan: ‘ತಪ್ಪೆಲ್ಲ ನನ್ನದೇ’; ಐಶ್ವರ್ಯಾ ರೈ, ಕತ್ರಿನಾ ಕೈಫ್ ವಿಚಾರದಲ್ಲಿ ಮೌನ ಮುರಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್​ರ ಈ ವಿಡಿಯೋ ಕೆಲವು ಅನುಮಾನಗಳನ್ನೂ ಹುಟ್ಟುಹಾಕಿದೆ. ಈ ಮೊದಲು ಗ್ರೂಟ್​ ಪಾತ್ರಕ್ಕೆ ಖ್ಯಾತ ಹಾಲಿವುಡ್ ನಟ ವಿನ್ ಡೀಸೆಲ್ ಧ್ವನಿ ನೀಡಿದ್ದರು. ಅವರು ಹೇಳಿದ್ದ ಏಕೈಕ ಡೈಲಾಗ್ ಎಂದರೆ ಐ ಆಮ್ ಗ್ರೂಟ್, ಅಂತೆಯೇ ಈಗ ಗಾರ್ಡಿಯನ್ಸ್ ಆಫ್​ ದಿ ಗ್ಯಾಲೆಕ್ಸಿ 3 ನಲ್ಲಿ ಸಲ್ಮಾನ್ ಖಾನ್ ಗ್ರೂಟ್ ಪಾತ್ರಕ್ಕೆ ಧ್ವನಿ ನೀಡಿರಬಹುದಾ ಎಂಬ ಅನುಮಾನ ಶುರುವಾಗಿದೆ. ಅಥವಾ ಸಿನಿಮಾದ ಹಿಂದಿ ಆವೃತ್ತಿಗೆ ಸಲ್ಮಾನ್ ಖಾನ್ ಧ್ವನಿ ನೀಡಿರಬಹುದಾ ಎಂದು ಸಹ ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇನ್ನು ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ ಸಿನಿಮಾವು ಐದು ಜನರ ಗುಂಪೊಂದು ಅಂತರಿಕ್ಷದಲ್ಲಿ ವಿಲನ್​ಗಳೊಟ್ಟಿಗೆ ಫೈಟ್ ಮಾಡುವ ಕತೆಗಳನ್ನು ಒಳಗೊಂಡಿರುತ್ತದೆ. ಈ ಐದು ಜನರ ಗುಂಪಿನಲ್ಲಿ ಮನುಷ್ಯ, ಇಲಿ ಮಾದರಿಯ ಪ್ರಾಣಿ, ಗಿಡ (ಗ್ರೂಟ್) ಇರುವೆಂತೆ ಆಂಟೆನಾ ಉಳ್ಳ ಯುವತಿ, ಯಂತ್ರಗಳಿಂದಾದ ಯುವತಿ ಹೀಗೆ ಚಿತ್ರ-ವಿಚಿತ್ರ ಜನರಿದ್ದಾರೆ. ಈ ವರೆಗೆ ಎರಡು ಗಾರ್ಡಿನ್ಸ್ ಆಫ್ ದಿ ಗ್ಯಾಲೆಕ್ಸಿ ಸಿನಿಮಾಗಳು ಬಂದಿದ್ದು ಇದೀಗ ಮೂರನೇ ಸಿನಿಮಾ ಮೇ 5 ರಂದು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್