Salman Khan: ‘ತಪ್ಪೆಲ್ಲ ನನ್ನದೇ’; ಐಶ್ವರ್ಯಾ ರೈ, ಕತ್ರಿನಾ ಕೈಫ್ ವಿಚಾರದಲ್ಲಿ ಮೌನ ಮುರಿದ ಸಲ್ಮಾನ್ ಖಾನ್

ಇಂದು ನನ್ನ ಎಲ್ಲಾ ಎಕ್ಸ್​​ಗಳು ಒಳ್ಳೆಯ ಸ್ಥಾನದಲ್ಲಿದ್ದಾರೆ, ಖುಷಿಯಾಗಿದ್ದಾರೆ. ಅವರು ಇಂದು ನನ್ನ ಜೊತೆ ಇರದೇ ಇರಲು ನನ್ನ ತಪ್ಪೇ ಕಾರಣ’ ಎಂದಿದ್ದಾರೆ ಸಲ್ಲು.

Salman Khan: ‘ತಪ್ಪೆಲ್ಲ ನನ್ನದೇ’; ಐಶ್ವರ್ಯಾ ರೈ, ಕತ್ರಿನಾ ಕೈಫ್ ವಿಚಾರದಲ್ಲಿ ಮೌನ ಮುರಿದ ಸಲ್ಮಾನ್ ಖಾನ್
ಕತ್ರಿನಾ-ಸಲ್ಮಾನ್-ಐಶ್ವರ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 01, 2023 | 2:45 PM

ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರು ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಆದರೆ, ಸಲ್ಮಾನ್ ಖಾನ್​ಗೆ ಪ್ರೀತಿ ವಿಚಾರದಲ್ಲಿ ಯಶಸ್ಸು ಸಿಗಲೇ ಇಲ್ಲ. ಅನೇಕರನ್ನು ಸಲ್ಮಾನ್ ಅವರು ಪ್ರೀತಿಸಿದರು. ಆದರೆ, ಯಾರೂ ಮದುವೆ ಆಗಲು ಆಸಕ್ತಿ ತೋರಿಸಿಲ್ಲ. ಹೀಗೇಕೆ ಎನ್ನುವ ಪ್ರಶ್ನೆಗೆ ಸಲ್ಮಾನ್ ಖಾನ್ ಉತ್ತರ ಕೊಟ್ಟಿದ್ದು ಕಡಿಮೆ. ಈಗ ಸಲ್ಮಾನ್ ಖಾನ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪ್ರೀತಿ ವಿಚಾರದಲ್ಲಿ ತಾವು ಎಡವಿದ್ದು ಎಲ್ಲಿ ಎಂಬುದನ್ನು ಹೇಳಿದ್ದಾರೆ.

ರಜತ್ ಶರ್ಮಾ ನಡೆಸಿಕೊಡುವ ‘ಆಪ್​ ಕಿ ಅದಾಲತ್​’ಗೆ ಸಲ್ಮಾನ್ ಖಾನ್ ಅತಿಥಿ ಆಗಿ ಬಂದಿದ್ದರು. ಅವರು ಜೀವನದ ಎಲ್ಲಾ ಹಂತ ಹಾಗೂ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹಳೆಯ ರಿಲೇಶನ್​ಶಿಪ್ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ಇಂದು ನನ್ನ ಎಲ್ಲಾ ಎಕ್ಸ್​​ಗಳು ಒಳ್ಳೆಯ ಸ್ಥಾನದಲ್ಲಿದ್ದಾರೆ, ಖುಷಿಯಾಗಿದ್ದಾರೆ. ಅವರು ಇಂದು ನನ್ನ ಜೊತೆ ಇರದೇ ಇರಲು ನನ್ನ ತಪ್ಪೇ ಕಾರಣ’ ಎಂದಿದ್ದಾರೆ ಸಲ್ಲು.

‘ಪ್ರೀತಿಯಲ್ಲಿ ನಾನು ದುರಾದೃಷ್ಟವಂತ. ಎಲ್ಲರೂ ಒಳ್ಳೆಯವರಾಗಿದ್ದರು. ಆದರೆ, ತಪ್ಪು ನನ್ನದೇ. ಮೊದಲ ವ್ಯಕ್ತಿ ಬಿಟ್ಟು ಹೋದಾಗ ತಪ್ಪು ಅವರದ್ದು ಅನಿಸುತ್ತದೆ. ಇದು ಪದೇಪದೇ ರಿಪೀಟ್ ಆದಾಗ ಅನುಮಾನ ಬರುತ್ತದೆ. ತಪ್ಪು ಅವರದ್ದೋ ಅಥವಾ ನನ್ನದೋ ಎನ್ನುವ ಪ್ರಶ್ನೆ ಮೂಡುತ್ತದೆ. ನನ್ನ ಜೀವನದಲ್ಲಿ ವಿಶೇಷವಾದ ಯಾರಾದರೂ ಬರಬಹುದು ಎಂಬ ಭರವಸೆಯನ್ನು ಹೊಂದಿದ್ದೇನೆ’ ಎನ್ನುತ್ತಾರೆ ಸಲ್ಮಾನ್ ಖಾನ್.

‘ಹೆಚ್ಚೆಚ್ಚು ಮಂದಿ ನಮ್ಮನ್ನು ಬಿಟ್ಟು ಹೋದರು ಎಂದರೆ ಆಗ ತಪ್ಪು ನಮ್ಮದೇ ಅನ್ನೋದು ಖಚಿತವಾಗುತ್ತದೆ. ಅವರಲ್ಲಿ ಯಾವುದೇ ತಪ್ಪಿರಲಿಲ್ಲ. ತಪ್ಪೆಲ್ಲ ನನ್ನದೇ. ಅವರು ಅಂದುಕೊಂಡ ರೀತಿಯ ಜೀವನ, ಖುಷಿಯನ್ನು ನನಗೆ ನೀಡಲು ಆಗದಿದ್ದರೆ ಎನ್ನುವ ಭಯ ಇದ್ದೇ ಇತ್ತು. ನನ್ನನ್ನು ಬಿಟ್ಟು ಹೋದ ಎಲ್ಲರೂ ಖುಷಿಯಿಂದ ಇದ್ದಾರೆ’ ಎಂದಿದ್ದಾರೆ.  ಸಲ್ಮಾನ್ ಖಾನ್ ಕತ್ರಿನಾ ಕೈಫ್, ಐಶ್ವರ್ಯಾ ರೈ ಮೊದಲಾದವರ ಜೊತೆ ರಿಲೇಶನ್​ಶಿಪ್​ನಲ್ಲಿದ್ದರು.

ಇದನ್ನೂ ಓದಿ: ಕುಗ್ಗಿತು ಸಲ್ಮಾನ್ ಖಾನ್ ಚಾರ್ಮ್​; ಕಳಪೆ ಕಲೆಕ್ಷನ್ ಮಾಡಿದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ

ಸಲ್ಮಾನ್ ಖಾನ್ ಅವರು ಡ್ರೆಸ್ ವಿಚಾರವಾಗಿಯೂ ‘ಆಪ್​ ಕಿ ಅದಾಲತ್’ನಲ್ಲಿ ಮಾತನಾಡಿದ್ದರು. ‘ಒಂದು ಡೀಸೆಂಟ್​ ಸಿನಿಮಾ ಮಾಡಿದಾಗ ಇಡೀ ಕುಟುಂಬದವರು ಬಂದು ನೋಡುತ್ತಾರೆ. ಅದರಲ್ಲಿ ಯಾವುದೇ ದ್ವಂದ್ವ ನೀತಿ ಇಲ್ಲ. ಮಹಿಳೆಯ ದೇಹ ಬಹಳ ಮೌಲ್ಯಯುತವಾದ್ದದ್ದು ಅಂತ ನಾನು ಭಾವಿಸಿದ್ದೇನೆ. ಹಾಗಾಗಿ ಹೆಚ್ಚು ದೇಹ ಮುಚ್ಚಿಕೊಂಡಷ್ಟೂ ಒಳ್ಳೆಯದು ಎಂದು ನನಗೆ ಅನಿಸುತ್ತದೆ’ ಎಂದು ಸಲ್ಮಾನ್​ ಖಾನ್​ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:44 pm, Mon, 1 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ