ಹೋಟೆಲ್ ಮಹಡಿಯಿಂದ ಬಿದ್ದು ಗಾಯಕ ಸಾವು, ಹಲವು ಅನುಮಾನ

|

Updated on: Oct 17, 2024 | 10:48 AM

ಖ್ಯಾತ ಬ್ರಿಟನ್ ಗಾಯಕ ಲಿಯಾಮ್ ಪಾಯ್ನ್ ಅರ್ಜೆಂಟೀನಾದ ರಾಜಾಧಾನಿ ಬೋನಿಸ್ ಐರಿಸ್​ನ ಖಾಸಗಿ ಹೋಟೆಲ್​ನ ತಮ್ಮ ಕೊಠಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಅವರ ಸಾವಿನ ಬಗ್ಗೆ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಹೋಟೆಲ್ ಮಹಡಿಯಿಂದ ಬಿದ್ದು ಗಾಯಕ ಸಾವು, ಹಲವು ಅನುಮಾನ
Follow us on

ಬ್ರಿಟನ್​ನ ಖ್ಯಾತ ಪಾಪ್ ಗಾಯಕ, ಲಿಯಾಮ್ ಪಾಯ್ನ್ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 31 ವರ್ಷ ವಯಸ್ಸಾಗಿತ್ತು. ಅರ್ಜೆಂಟೀನಾದ ರಾಜಧಾನಿ ಬೋನಸ್ ಐರಿಸ್​ನಲ್ಲಿ ಲಿಯಾಮ್ ತಂಗಿದ್ದ ಹೋಟೆಲ್​ ಕೊಠಡಿಯ ಬಾಲ್ಕನಿಯಿಂದ ಬಿದ್ದು ಅವರು ಸಾವನ್ನಪ್ಪಿದ್ದು, ಈ ಘಟನೆ ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರದ ಜೊತೆಗೆ ಅನುಮಾನವನ್ನೂ ಹುಟ್ಟುಹಾಕಿದೆ. ಲಿಯಾಮ್ ಸಾವಿಗೆ ಮುನ್ನ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಡಿರುವ ಕರೆ ಕೆಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಘಟನೆ ಬಗ್ಗೆ ಮಾಧ್ಯಮಗಳಿಗೆ ವರದಿ ನೀಡಿರುವ ಬೋನಸ್ ಐರಿಸ್ ಪೊಲೀಸರು, ಲಿಯಾಮ್, ನಗರದ ಕಾಸಾ ಸರ್ ಹೋಟೆಲ್​ನ ಮೂರನೇ ಮಹಡಿಯ ತನ್ನ ಕೋಣೆಯ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಹಾರಿದ ಕೂಡಲೇ ಲಿಯಾಮ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಬೋನಸ್ ಐರಿಸ್ ಭದ್ರತಾ ಮುಖ್ಯಸ್ಥ, ‘ಸಂಜೆ ಐದು ಗಂಟೆ ವೇಳೆಗೆ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಆ ವೇಳೆಗಾಗಲೆ ಲಿಯಾಮ್ ನಿಧನ ಹೊಂದಿದ್ದರು. ಆತ ಬಹಳ ಒರಟು ಹಾಗೂ ಮಾದಕ ದ್ರವ್ಯ ವ್ಯಸನಿಯಾಗಿದ್ದ, ಮಾದಕ ವಸ್ತು ಸೇವಿಸಿಯೇ ಆತ ಈ ಕೃತ್ಯ ಎಸಗಿಕೊಂಡಿದ್ದಾನೆ’ ಎಂದಿದ್ದಾರೆ.

ಅಸಲಿಗೆ ಲಿಯಾಮ್, ನಿಧನ ಹೊಂದುವುದಕ್ಕೂ ಕೆಲ ಸಮಯ ಮುಂಚೆ ಕಾಸಾ ಸರ್ ಹೋಟೆಲ್​ನ ಮ್ಯಾನೇಜರ್ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ‘ನಮ್ಮ ಹೋಟೆಲ್​ ನಲ್ಲಿರುವ ವ್ಯಕ್ತಿ ಬಹಳ ಗಲಾಟೆ ಮಾಡುತ್ತಿದ್ದಾನೆ, ಹೋಟೆಲ್​ನ ವಸ್ತುಗಳನ್ನು ಹಾಳು ಮಾಡುತ್ತಿದ್ದಾನೆ, ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿದ್ದಾನೆ, ನೀವು ಈಗಲೇ ಇಲ್ಲಿಗೆ ಬನ್ನಿ’ ಎಂದು ಮಾತನಾಡಿದ್ದಾರೆ. ಈ ಕರೆ ದಾಖಲಾಗಿದೆ. ಕೆಲವರ ಆರೋಪದ ಪ್ರಕಾರ ಪೊಲೀಸರು ಬಂದು ಬೆದರಿಸಿದ್ದರಿಂದಲೇ ಲಿಯಾಮ್ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬಿಗ್ ಬಜೆಟ್ ಸಿನಿಮಾಗಳೇ ಮುಳುವಾದಾಗ; ಖ್ಯಾತ ನಿರ್ಮಾಣ ಸಂಸ್ಥೆಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್

ಲಿಯಾಮ್, ತಾನು ಮದ್ಯವ್ಯಸನದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. 2023 ರಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಲಿಯಾಮ್, ‘ಮದ್ಯವ್ಯಸನದಿಂದ ಸಮಸ್ಯೆ ಅನುಭವಿಸುತ್ತಿದ್ದೆ. ಚಿಕಿತ್ಸೆ ಬಳಿಕ ಕಳೆದ ಆರು ತಿಂಗಳಿನಿಂದಲೂ ನಾನು ಮದ್ಯ ಸೇವಿಸಿಲ್ಲ’ ಎಂದಿದ್ದರು. ಆದರೆ ಈಗ ಹಠಾತ್ತನೆ ಮದ್ಯ ಹಾಗೂ ಮಾದಕ ವಸ್ತು ಸೇವಿಸಿ ಲಿಯಾಮ್ ನಿಧನ ಹೊಂದಿದ್ದಾರೆ ಎಂಬುದನ್ನು ಸಹ ಅಭಿಮಾನಿಗಳಿಗೆ ನಂಬಲಾಗುತ್ತಿಲ್ಲ.

ಲಿಯಾಮ್, ಬ್ರಿಟನ್​ನ ಖ್ಯಾತ ಪಾಪ್ ಗಾಯಕರಲ್ಲಿ ಒಬ್ಬರು. ಬ್ರಿಟನ್​ನ ಖ್ಯಾತ ಸಂಗೀತ ಬ್ಯಾಂಡ್ ಒನ್ ಡೈರೆಕ್ಷನ್​ನ ಸದಸ್ಯರಾಗಿದ್ದರು ಲಿಯಾಮ್. ಇವರು ಕೆಲವು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ