ಬಿಗ್ ಬಜೆಟ್ ಸಿನಿಮಾಗಳೇ ಮುಳುವಾದಾಗ; ಖ್ಯಾತ ನಿರ್ಮಾಣ ಸಂಸ್ಥೆಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್

ಲೈಕಾ ಪ್ರೊಡಕ್ಷನ್ ತಮಿಳಿನಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದೆ. 2014ರಲ್ಲಿ ರಿಲೀಸ್ ಆದ ‘ಕತ್ತಿ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೆ ಇಳಿದರು ‘ಲೈಕಾ ಪ್ರೊಡಕ್ಷನ್’ ಅವರು. ಇತ್ತೀಚೆಗೆ ಏಕೋ ನಿರ್ಮಾಣ ಸಂಸ್ಥೆಯು ನಷ್ಟವನ್ನು ಅನುಭವಿಸುತ್ತಿದೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್​​ಗಳನ್ನು ನಿರ್ಮಾಣ ಸಂಸ್ಥೆ ನೀಡುತ್ತಿದೆ.

ಬಿಗ್ ಬಜೆಟ್ ಸಿನಿಮಾಗಳೇ ಮುಳುವಾದಾಗ; ಖ್ಯಾತ ನಿರ್ಮಾಣ ಸಂಸ್ಥೆಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್
ಲೈಚಾ ಪ್ರೊಡಕ್ಷನ್ ಹೌಸ್ ಸಿನಿಮಾಗಳು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 17, 2024 | 8:19 AM

ತಮಿಳನ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ‘ಲೈಕಾ ಪ್ರೊಡಕ್ಷನ್ಸ್​’ ಕೂಡ ಒಂದು. ಈ ನಿರ್ಮಾಣ ಸಂಸ್ಥೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದೆ. ಆದರೆ, ಇತ್ತೀಚೆಗೆ ಏಕೋ ನಿರ್ಮಾಣ ಸಂಸ್ಥೆಯು ನಷ್ಟವನ್ನು ಅನುಭವಿಸುತ್ತಿದೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್​​ಗಳನ್ನು ನಿರ್ಮಾಣ ಸಂಸ್ಥೆ ನೀಡುತ್ತಿದೆ. ಕಮಲ್ ಹಾಸನ್ ಬಳಿಕ ರಜನಿಕಾಂತ್ ಕೂಡ ಚಿತ್ರಕ್ಕೆ ಹೊರೆ ಆಗಿದ್ದಾರೆ.

ಲೈಕಾ ಪ್ರೊಡಕ್ಷನ್ ತಮಿಳಿನಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದೆ. 2014ರಲ್ಲಿ ರಿಲೀಸ್ ಆದ ‘ಕತ್ತಿ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೆ ಇಳಿದರು ‘ಲೈಕಾ ಪ್ರೊಡಕ್ಷನ್’ ಅವರು. ಎಆರ್ ಮುರುಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ದಳಪತಿ ವಿಜಯ್, ಸಮಂತಾ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ಲೈಕಾ ಹಿಂದಿರುಗಿ ನೋಡಲೇ ಇಲ್ಲ.

ಆ ಬಳಿಕ ‘ಎನಕ್ಕು ಇನ್ನೋರು ಪೇರು ಇರುಕ್ಕು’ ಸಿನಿಮಾ ಮಾಡಿದರು. 10 ವರ್ಷಗಳ ಜರ್ನಿಯಲ್ಲಿ ಹಲವು ಸಿನಿಮಾಗಳನ್ನು ‘ಲೈಕಾ’ ಕಡೆಯಿಂದ ನಿರ್ಮಾಣ ಆಗಿದೆ. ಆದರೆ, ಇತ್ತೀಚೆಗೆ ಅವರಿಗೆ ಅದೃಷ್ಟವು ಕೈ ಹಿಡಿಯುತ್ತಿಲ್ಲ. ಈ ಸಂಸ್ಥೆ ನಿರ್ಮಾಣ ಮಾಡಿದ ‘ರಾಮ ಸೇತು’, ‘ಚಂದ್ರಮುಖಿ 2’ ರೀತಿಯ ಸಿನಿಮಾಗಳು ಸೋಲು ಕಂಡವು.

ಈ ವರ್ಷ ‘ಲಾಲ್ ಸಲಾಂ’ ಬಿಡುಗಡೆ ಆಯಿತು. 100 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರವು ಸಾಕಷ್ಟು ನಷ್ಟವನ್ನು ಅನುಭವಿಸಿತು ಎಂದೇ ಹೇಳಬಹುದು. ‘ಇಂಡಿಯನ್ 2’ ಚಿತ್ರವು ಕಮಲ್ ಹಾಸನ್ ನಟಿಸಿದ್ದರು. ಶಂಕರ್ ಅವರು ಈ ಚಿತ್ರವನ್ನು ನಿರ್ದೇಶನವನ್ನು ಮಾಡಿದ್ದರು. ಈಗ ‘ವೆಟ್ಟೈಯಾನ್’ ಕೂಡ ಅವರಿಗೆ ಹೊಡೆತಕೊಟ್ಟಿದೆ. ಈ ಸಿನಿಮಾದಲ್ಲಿ ರಜನಿಕಾಂತ್​ಗೆ ದೊಡ್ಡ ಸಂಭಾವನೆಯನ್ನೇ ಕೊಡಲಾಗಿದೆ.

ಇದನ್ನೂ ಓದಿ: ಆತ್ಮಹತ್ಯೆಗೂ ಮೊದಲು ಮಕ್ಕಳಿಗೆ ಕರೆ ಮಾಡಿದ್ದ ಮಲೈಕಾ ತಂದೆ; ತೋಡಿಕೊಂಡ ದುಃಖವೇನು?

ಈಗ ‘ಲೈಕಾ’ದವರು ‘ಇಂಡಿಯನ್ 3’ ಮಾಡುತ್ತಿದ್ದಾರೆ. ಥಿಯೇಟರ್​ನಲ್ಲಿ ಸಿನಿಮಾ ಮಾಡಿ ಲಾಸ್ ಮಾಡಿಕೊಳ್ಳಬಾರದು ಎಂದು ಅವರು ನಿರ್ಧಾರ ಮಾಡಿದಂತೆ. ಈ ಕಾರಣದಿಂದಲೇ ‘ಇಂಡಿಯನ್ 3’ ಚಿತ್ರದ ಬಿಸ್ನೆಸ್​ನಲ್ಲಿ ನಷ್ಟ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕೆ ‘ಲೈಕಾ ಪ್ರೊಡಕ್ಷನ್’ ಇದನ್ನು ನೇರವಾಗಿ ಒಟಿಟಿಗೆ ತರುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಒಳ್ಳೆಯ ಕತೆಗಳನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು