ಆತ್ಮಹತ್ಯೆಗೂ ಮೊದಲು ಮಕ್ಕಳಿಗೆ ಕರೆ ಮಾಡಿದ್ದ ಮಲೈಕಾ ತಂದೆ; ತೋಡಿಕೊಂಡ ದುಃಖವೇನು?

ಖ್ಯಾತ ನಟಿ ಮಲೈಕಾ ಅರೋರಾ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಮಲೈಕಾ ಅರೋರಾ ಅವರ ತಂದೆ ಅನಿಲ್​ ಮೆಹ್ತಾ ಅವರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವುದಕ್ಕೂ ಮೊದಲು ಅವರು ತಮ್ಮ ನೋವನ್ನು ಹೇಳಿಕೊಂಡಿದ್ದರು.

ಆತ್ಮಹತ್ಯೆಗೂ ಮೊದಲು ಮಕ್ಕಳಿಗೆ ಕರೆ ಮಾಡಿದ್ದ ಮಲೈಕಾ ತಂದೆ; ತೋಡಿಕೊಂಡ ದುಃಖವೇನು?
ಆತ್ಮಹತ್ಯೆಗೂ ಮೊದಲು ಮಕ್ಕಳಿಗೆ ಕರೆ ಮಾಡಿದ್ದ ಮಲೈಕಾ ತಂದೆ; ತೋಡಿಕೊಂಡ ದುಃಖವೇನು?
Follow us
ರಾಜೇಶ್ ದುಗ್ಗುಮನೆ
|

Updated on: Sep 13, 2024 | 7:25 AM

ಮಲೈಕಾ ಅರೋರಾ ಅವರ ತಂದೆ ಅನಿಲ್ ಮೆಹ್ತಾ ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರು ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಆರನೇ ಅಂತಸ್ತಿನಿಂದ ಬಿದ್ದು ಅವರು ಮೃತಪಟ್ಟಿದ್ದಾರೆ. ಸಾಯುವುದಕ್ಕೂ ಮೊದಲು ಅವರು ತಮ್ಮ ನೋವನ್ನು ಹೇಳಿಕೊಂಡಿದ್ದರು. ಮಕ್ಕಳಿಗೆ ಕರೆ ಮಾಡಿ ವಿವರವಾಗಿ ಮಾತನಾಡಿದ್ದರಂತೆ.

ಅನಿಲ್ ಮೆಹ್ತಾ ಅವರ ಪತ್ನಿ ಜೋಯ್ಸೆ ಅವರು ಮುಂಜಾನೆ 9 ಗಂಟೆ ಸುಮಾರಿಗೆ ಪತಿ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದರು. ಅವರ ಚಪ್ಪಲಿ ಮನೆಯಲ್ಲೇ ಇತ್ತು. ಆದರೆ, ಪತಿ ಕಾಣಿಸಲಿಲ್ಲ. ಹೀಗಾಗಿ, ಅವರಿಗಾಗಿ ಹುಡುಕಾಟ ನಡೆಸಿದರು. ಅವರು ಬಾಲ್ಕನಿಗೆ ಬಂದು ನೋಡಿದಾಗ ಸೆಕ್ಯುರಿಟಿ ಗಾರ್ಡ್ ಸಹಾಯಕ್ಕಾಗಿ ಅರಚಾಡುತ್ತಿರುವುದು ಕಂಡು ಬಂತು. ಪಕ್ಕದಲ್ಲಿ ಪತಿ ರಕ್ತಸಿಕ್ತವಾಗಿ ಬಿದ್ದಿದ್ದು ಕಂಡು ಬಂತು.

ಈ ಘಟನೆ ನಡೆಯುವುದಕ್ಕೂ ಕೆಲವು ಗಂಟೆ ಮೊದಲು ಅನಿಲ್ ಅವರು ಮಕ್ಕಳಾದ ಮಲೈಕಾ ಅರೋರಾ ಹಾಗೂ ಅಮೃತಾ ಅರೋರಾ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ‘ನಾನು ಅನಾರೋಗ್ಯದಿಂದ ಬೇಸತ್ತಿದ್ದೇನೆ’ ಎಂದು ಹೇಳಿದ್ದಾಗಿ ವರದಿ ಆಗಿದೆ.

ಅನಿಲ್ ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಅವರ ಸಾವಿನ ಬಳಿಕ ಮಲೈಕಾ ಅವರ ಮಾಜಿ ಬಾಯ್​ಫ್ರೆಂಡ್ ಅರ್ಜುನ್ ಕಪೂರ್ ಕೂಡ ಆಗಮಿಸಿದ್ದರು. ಅವರು ಬಂದು ಮಲೈಕಾಗೆ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರ ಸಾವಿಗೆ ಎಲ್ಲರೂ ಸಂತಾಪ ಸೂಚಿಸಿದ್ದಾರೆ.

ಘಟನೆ ಕುರಿತಂತೆ ಮಲೈಕಾ ಅವರು ಸೋಶೀಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ‘ನಮ್ಮ ತಂದೆ ಅನಿಲ್ ಮೆಹ್ತಾ ನಿಧನ ಹೊಂದಿದ್ದಾರೆ ಎಂದು ಹೇಳಲು ವಿಷಾದಿಸುತ್ತೇವೆ. ಅವರು ಒಳ್ಳೆಯ ಮನಸ್ಸುಳ್ಳವರಾಗಿದ್ದರು. ಒಳ್ಳೆಯ ಅಜ್ಜನಾಗಿ, ಪ್ರೀತಿಯ ಪತಿಯಾಗಿ, ನಮ್ಮೆಲ್ಲರ ಒಳ್ಳೆಯ ಗೆಳೆಯನಂತೆ ಇದ್ದರು. ಅವರ ಕಳೆದುಕೊಂಡಿದ್ದರಿಂದ ನಮ್ಮ ಕುಟುಂಬ ಶಾಕ್​ನಲ್ಲಿದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಮಲೈಕಾ ಅರೋರಾ ತಂದೆ ಆತ್ಮಹತ್ಯೆ: ಅಂತಿಮ ನಮನ ಸಲ್ಲಿಸಲು ಬಂದ ಅರ್ಜುನ್​ ಕಪೂರ್​

ಸಲೀಮ್ ಖಾನ್, ಸಲ್ಮಾನ್ ಖಾನ್, ಮಲೈಕಾ ಮಾಜಿ ಪತಿ ಅರ್ಬಾಜ್ ಖಾನ್ ಮೊದಲಾದವರು ಕೂಡ ಮಲೈಕಾ ಮನೆಗೆ ಆಗಮಿಸಿದ್ದರು. ಮಲೈಕಾ ಬೆಸ್ಟ್  ಫ್ರೆಂಡ್ ಕರೀನಾ ಖಾನ್ ಕೂಡ ಆಗಮಿಸಿ ಗೆಳತಿಗೆ ಧೈರ್ಯ ತುಂಬಿದ್ದಾರೆ. ಕರೀನಾ ಕೆಲವು ದಿನ ಕೆಲಸಗಳಿಗೆ ಬ್ರೇಕ್ ಕೊಟ್ಟು ಮಲೈಕಾ ಜೊತೆ ಇರಲು ನಿರ್ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.