ಸಲ್ಮಾನ್ ನಟನೆಯ ‘ಸಿಖಂದರ್’ ಚಿತ್ರಕ್ಕೆ ರಶ್ಮಿಕಾ ಮಾತ್ರ ನಾಯಕಿ ಅಲ್ಲ; ಮತ್ತೋರ್ವ ನಟಿಯ ಎಂಟ್ರಿ

ಎಆರ್ ಮುರುಗದಾಸ್ ಅವರು ‘ಸಿಖಂದರ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಹಿಂದಿ ಸಿನಿಮಾ ಆದರೂ ದಕ್ಷಿಣದ ಕಲಾವಿದರಿಗೆ ಮುರುಗದಾಸ್ ಅವರು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ರಶ್ಮಿಕಾ ಅವರನ್ನು ನಾಯಕಿ ಆಗಿ ಆಯ್ಕೆ ಮಾಡಿಕೊಂಡಿದ್ದರು. ಈಗ ರಶ್ಮಿಕಾ ಜೊತೆ ಕಾಜಲ್ ಕೂಡ ಸಿನಿಮಾ ತಂಡ ಸೇರಿಕೊಂಡಿದ್ದಾರೆ.

ಸಲ್ಮಾನ್ ನಟನೆಯ ‘ಸಿಖಂದರ್’ ಚಿತ್ರಕ್ಕೆ ರಶ್ಮಿಕಾ ಮಾತ್ರ ನಾಯಕಿ ಅಲ್ಲ; ಮತ್ತೋರ್ವ ನಟಿಯ ಎಂಟ್ರಿ
ಸಲ್ಮಾನ್ ನಟನೆಯ ‘ಸಿಖಂದರ್’ ಚಿತ್ರಕ್ಕೆ ರಶ್ಮಿಕಾ ಮಾತ್ರ ನಾಯಕಿ ಅಲ್ಲ; ಮತ್ತೋರ್ವ ನಟಿಯ ಎಂಟ್ರಿ
Follow us
ರಾಜೇಶ್ ದುಗ್ಗುಮನೆ
|

Updated on: Sep 13, 2024 | 11:48 AM

ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ ಚಿತ್ರದ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿವೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಲ್ಲುಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಹೊಸ ಸುದ್ದಿ ಒಂದು ಹರಿದಾಡಿದೆ. ರಶ್ಮಿಕಾ ಜೊತೆಗೆ ಕಾಜಲ್ ಅಗರ್​ವಾಲ್ ಕೂಡ ಇರಲಿದ್ದಾರೆ. ಈ ಬಗ್ಗೆ ಸ್ವತಃ ಕಾಜಲ್ ಅಗರ್​ವಾಲ್​ ಅಪ್​ಡೇಟ್ ನೀಡಿದ್ದಾರೆ.

ಎಆರ್ ಮುರುಗದಾಸ್ ಅವರು ‘ಸಿಖಂದರ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಹಿಂದಿ ಸಿನಿಮಾ ಆದರೂ ದಕ್ಷಿಣದ ಕಲಾವಿದರಿಗೆ ಮುರುಗದಾಸ್ ಅವರು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ರಶ್ಮಿಕಾ ಅವರನ್ನು ನಾಯಕಿ ಆಗಿ ಆಯ್ಕೆ ಮಾಡಿಕೊಂಡಿದ್ದರು. ಈಗ ರಶ್ಮಿಕಾ ಜೊತೆ ಕಾಜಲ್ ಕೂಡ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಸಿನಿಮಾ ಸೆಟ್​ನಲ್ಲಿ ಹೂವಿನ ಹಾರ ಕೊಟ್ಟು ಸ್ವಾಗತಿಸಿದ ಬಗ್ಗೆ ಅವರು ಅಪ್​ಡೇಟ್ ಕೊಟ್ಟಿದ್ದಾರೆ.

ಕಾಜಲ್ ಅಗರ್​ವಾಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ‘ಸಿಖಂದರ್’ ಸಿನಿಮಾ ಸೆಟ್​ನಲ್ಲಿ ಐಕಾರ್ಡ್​ ಹಾಕಿ ಗಮನ ಸೆಳೆದಿದ್ದಾರೆ. ‘ಸಿಖಂದರ್ ಒಂದನೇ ದಿನ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಚಿತ್ರವನ್ನು ಸಾಜಿದ್​ ನಾಡಿಯಾದ್ವಾಲಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ನಾಡಿಯಾದ್ವಾಲಾ ಎಂಟರ್​ಟೇನ್​ಮೆಂಟ್’ ಮೂಲಕ ಈ ಚಿತರ ನಿರ್ಮಾಣ ಆಗುತ್ತಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಅಪಘಾತ; ಕ್ಷಣಿಕ ಜೀವನದ ಬಗ್ಗೆ ಮಾತನಾಡಿದ ‘ಪುಷ್ಪ 2’ ನಟಿ

ಈಗಾಗಲೇ ರಶ್ಮಿಕಾ ಮಂದಣ್ಣ ಅವರು ಚಿತ್ರದ ಸೆಟ್ ಸೇರಿಕೊಂಡಿದ್ದಾರೆ. ಸಲ್ಲು ಹಾಗೂ ರಶ್ಮಿಕಾ ಭಾಗದ ಶೂಟಿಂಗ್ ನಡೆಯುತ್ತಿದೆ. ಇವರ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ರಶ್ಮಿಕಾ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ಡ್ಯಾನ್ಸ್ ಮಾಡಲಿದ್ದಾರೆ.  ಈ ಚಿತ್ರ 2025ರ ಈದ್​ನಲ್ಲಿ ರಿಲೀಸ್ ಆಗಲಿದೆ. ಈ ವರ್ಷದ ಈದ್​ಗೆ ಚಿತ್ರ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.