ಮಲೈಕಾ ಅರೋರಾ ತಂದೆ ಆತ್ಮಹತ್ಯೆ: ಅಂತಿಮ ನಮನ ಸಲ್ಲಿಸಲು ಬಂದ ಅರ್ಜುನ್ ಕಪೂರ್
ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಮಲೈರಾ ಅರೋರಾ ಅವರ ತಂದೆ ಅನಿಲ್ ಅರೋರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ಅರ್ಜುನ್ ಕಪೂರ್ ಓಡೋಡಿ ಬಂದಿದ್ದಾರೆ. ಅನನ್ಯಾ ಪಾಂಡೆ, ಸಲೀಂ ಖಾನ್, ಅರ್ಬಾಜ್ ಖಾನ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಮಂತಾದ ಸೆಲೆಬ್ರಿಟಿಗಳು ಕೂಡ ಬಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಖ್ಯಾತ ನಟಿ ಮಲೈಕಾ ಅರೋರಾ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಅವರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಅನೇಕ ಸೆಲೆಬ್ರಿಟಿಗಳು ಅನಿಲ್ ಅರೋರಾ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಮಲೈಕಾ ಅರೋರಾ ಅವರ ಮಾಜಿ ಪ್ರಿಯಕರ ಅರ್ಜುನ್ ಕಪೂರ್ ಕೂಡ ಬಂದು ಅನಿಲ್ ಅರೋರಾ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅರ್ಜುನ್ ಕಪೂರ್ ಅವರು ಆಗಮಿಸಿದ ವಿಡಿಯೋ ವೈರಲ್ ಆಗಿದೆ.
ಮಲೈಕಾ ಅರೋರಾ ಅವರು ಬಹುಬೇಡಿಕೆಯ ನಟಿಯಾಗಿದ್ದಾರೆ. ಖುಷಿ ಖುಷಿಯಾಗಿ ಫಾರಿನ್ ಟ್ರಿಪ್ ಮಾಡುತ್ತಿದ್ದ ಅವರಿಗೆ ತಂದೆಯ ಸಾವಿನ ವಿಷಯ ತಿಳಿದು ಶಾಕ್ ಆಗಿದೆ. ತಂದೆಯ ಮನೆಗೆ ಮಲೈಕಾ ಅವರು ಓಡೋಡಿ ಬಂದಿದ್ದಾರೆ. ಬಳಿಕ ಅರ್ಜುನ್ ಕಪುರ್ ಕೂಡ ಬಂದಿದ್ದಾರೆ. ಕೆಲವೇ ತಿಂಗಳ ಹಿಂದೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಬ್ರೇಕಪ್ ಮಾಡಿಕೊಂಡರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗಣೇಶನ ಮುಂದೆ ಡ್ಯಾನ್ಸ್ ಮಾಡಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ
ಬ್ರೇಕಪ್ ಆಗಿದ್ದರೂ ಕೂಡ ಕಷ್ಟದ ಸಮಯದಲ್ಲಿ ಮಲೈಕಾ ಅರೋರಾ ಅವರ ಬೆಂಬಲಕ್ಕೆ ನಿಲ್ಲಲು ಅರ್ಜುನ್ ಕಪೂರ್ ಅವರು ಬಂದಿದ್ದಾರೆ. ಅವರು ಮಾತ್ರವಲ್ಲದೇ ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಕೂಡ ಆಗಮಿಸಿ ಕಂಬನಿ ಮಿಡಿದಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಅನನ್ಯಾ ಪಾಂಡೆ ಮುಂತಾದವರು ಸಹ ಅನಿಲ್ ಅರೋರಾಗೆ ಅಂತಿಮ ನಮನ ಸಲ್ಲಿಸಿದ್ದಾರೆ.
View this post on Instagram
ಅನಿಲ್ ಅರೋರಾ ಅವರು ಮೂಲತಃ ಪಂಜಾಬ್ನವರು. ಮುಂಬೈನಲ್ಲಿ ಅವರು ವಾಸವಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಾಂದ್ರಾ ಅಪಾರ್ಟ್ಮೆಂಟ್ಗೆ ಪೊಲೀಸರು ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಅನಿಲ್ ಅರೋರಾ ಅವರು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎಂಬುದು ನಿಗೂಢವಾಗಿಯೇ ಉಳಿದುಕೊಂಡಿದೆ. ಅಪಾರ್ಟ್ಮೆಂಟ್ನ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ವರದಿ ಬಂದ ಬಳಿಕ ಹೆಚ್ಚಿನ ವಿಷಯ ಬಹಿರಂಗ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.