ಮದುವೆಗೂ ಮೊದಲು ಅಜಯ್ ಒಟ್ಟಿಗೆ ಎಷ್ಟು ಹುಡುಗಿಯರ ಜೊತೆ ಡೇಟ್ ಮಾಡಿದ್ದರು ಗೊತ್ತೇ?
ಅಜಯ್ ದೇವಗನ್ ಹಾಗೂ ಕಾಜೋಲ್ ಅವರು ಮದುವೆ ಆದರು. ಅಜಯ್ ಹಾಗೂ ಕಾಜೋಲ್ ಅವರು ‘ಹಲ್ಚಲ್’ (1995) ರಲ್ಲಿ ಒಟ್ಟಾಗಿ ನಟಿಸಿದರು. ಆಗ ಇಬ್ಬರೂ ಬೇರೆಯವರ ಜೊತೆ ಡೇಟ್ ಮಾಡುತ್ತಿದ್ದರು. ಇದಕ್ಕೂ ಮೊದಲು ಅವರು ಕೆಲವರ ಜೊತೆ ಡೇಟ್ ಮಾಡಿದ್ದರು.
ಅಜಯ್ ದೇವಗನ್ ಅವರು ಅನೇಕ ಹೀರೋಯಿನ್ಗಳ ಜೊತೆ ಡೇಟಿಂಗ್ ಮಾಡಿದ್ದರು. ನಂತರ ಅವರು ಮದುವೆ ಆಗಿದ್ದು ಕಾಜೋಲ್ ಅವರನ್ನು. ಇವರ ಸಂಸಾರ ಸುಖವಾಗಿ ನಡೆಯುತ್ತಿದೆ. ಅಜಯ್ ದೇವಗನ್ ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರು ಈ ಮೊದಲು ಸಂದರ್ಶನ ಒಂದರಲ್ಲಿ ಹಲವು ವಿಚಾರಗಳನ್ನು ಒಪ್ಪಿಕೊಂಡಿದ್ದರು. ಅವುಗಳು ಏನು ಎಂಬ ಬಗ್ಗೆ ಇಲ್ಲಿದೆ ವಿವರ.
ಅಜಯ್ ದೇವಗನ್ ಅವರು ಸದಾ ಕ್ಲೀನ್ ಆಗಿರಲು ಬಯಸುತ್ತಾರೆ. ನಾನ್ಸೆನ್ಸ್ಗೆ ಅವರು ಎಲ್ಲಿಯೂ ಮಣೆ ಹಾಕಲ್ಲ. ಅಜಯ್ ದೇವಗನ್ ಅವರಿಗೆ ಈ ಮೊದಲು ಹುಡುಗಿಯರ ಜೊತೆ ಸುತ್ತಾಡುವುದು ಎಂದರೆ ಸಖತ್ ಇಷ್ಟ ಆಗಿತ್ತು. ಇಬ್ಬರು ಹುಡುಗಿಯರ ಜೊತೆ ಡೇಟ್ ಮಾಡಿದ್ದೀರಾ ಎಂದು ಕೇಳಿದಾಗ ಅವರು ಹೌದು ಎಂದಿದ್ದರು. ಮೂವರು ಹುಡುಗಿಯರ ಜೊತೆ ಎಂದು ಕೇಳಿದಾಗ ಇರಬಹುದು ಎಂದರು. ನಾಲ್ಕು ಹುಡುಗಿಯರ ಜೊತೆ ಎಂದು ಪ್ರಶ್ನೆ ಮಾಡಿದಾಗ ಅವರು ‘ಇಲ್ಲ’ ಎಂದರು.
ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಎನ್ನುವ ಕಾನ್ಸೆಪ್ಟ್ ಇದೆ. ಗೆಳತಿ ಜೊತೆ ಇದ್ದು ಎಲ್ಲವನ್ನೂ ಪಡೆದುಕೊಳ್ಳುವುದು. ‘ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಬಗ್ಗೆ ನಿಮ್ಮ ಅಭಿಪ್ರಾಯ’ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದರು. ‘ಜನರೇಶನ್ ಬದಲಾಗುತ್ತಿದೆ. ಜನರು ಅದಕ್ಕೆ ಒಗ್ಗಿಕೊಂಡಿದ್ದಾರೆ. ಅದಕ್ಕೆ ನನ್ನದೇನು ತಕರಾರರು ಇಲ್ಲ. ಈ ವಿಚಾರವನ್ನು ನಾವು ದೊಡ್ಡ ಇಶ್ಯೂ ಮಾಡುತ್ತಿದ್ದೇವೆ’ ಎಂದಿದ್ದರು ಅಜಯ್
ಅಜಯ್ ದೇವಗನ್ ಹಾಗೂ ಕಾಜೋಲ್ ಅವರು ಮದುವೆ ಆದರು. ಅಜಯ್ ಹಾಗೂ ಕಾಜೋಲ್ ಅವರು ‘ಹಲ್ಚಲ್’ (1995) ರಲ್ಲಿ ಒಟ್ಟಾಗಿ ನಟಿಸಿದರು. ಆಗ ಇಬ್ಬರೂ ಬೇರೆಯವರ ಜೊತೆ ಡೇಟ್ ಮಾಡುತ್ತಿದ್ದರು. 1999ರ ಫೆಬ್ರವರಿಯಲ್ಲಿ ಇವರು ವಿವಾಹ ಆದರು. ಪಂಜಾಬಿ ಹಾಗೂ ಮಹಾರಾಷ್ಟ್ರ ಸಂಪ್ರದಾಯದಂತೆ ಇವರು ಮದುವೆ ಆದರು. ಈ ದಂಪತಿಗೆ ನಿಸಾ ಹಾಗೂ ಯುಗ್ ಹೆಸರಿನ ಮಕ್ಕಳು ಇದ್ದಾರೆ.
ಇದನ್ನೂ ಓದಿ: ಅಜಯ್ ದೇವಗನ್ಗೆ ನಮಸ್ಕಾರ ಮಾಡಿಲ್ಲ ಅಂತ ಹಿರಿಯ ನಟನನ್ನೇ ಸಿನಿಮಾದಿಂದ ತೆಗೆದ ನಿರ್ಮಾಪಕ
ಅಜಯ್ ದೇವಗನ್ ಅವರು ‘ದೇ ದೇ ಪ್ಯಾರ್ ದೇ’ ಚಿತ್ರದ ಸೀಕ್ವೆಲ್ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಟಬು ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲೂ ಮಾಧವನ್, ರಕುಲ್ ಹಾಗೂ ಅಜಯ್ ನಟಿಸುತ್ತಿದ್ದಾರೆ. ಇದಲ್ಲದೆ ರೋಹಿತ್ ಶೆಟ್ಟಿ ಅವರ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.