‘ನನ್ನ ಪತಿಗೆ ನಾನು ಈಗಲೂ ಹಾಟ್ ಆಗಿ ಕಾಣಿಸ್ತೀನಿ, ನಂಗೆ ಅಷ್ಟು ಸಾಕು’: ಕರೀನಾ

Kareena Kapoor: ಕರೀನಾ ಕಪೂರ್ ನಟಿಸಿರುವ ‘ಬಕ್ಕಿಂಗ್ಯಾಮ್ ಮರ್ಡರ್ಸ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಕರೀನಾ ಸಂದರ್ಶನವೊಂದರಲ್ಲಿ ತಮ್ಮ ವಯಸ್ಸಿನ ಬಗ್ಗೆ ಮಾತನಾಡುತ್ತಾ, ನನ್ನ ಪತಿಗೆ ನಾನು ಈಗಲೂ ಹಾಟ್​ ಆಗಿಯೇ ಕಾಣುತ್ತೇನೆ ನನಗೆ ಅಷ್ಟು ಸಾಕು ಎಂದಿದ್ದಾರೆ.

‘ನನ್ನ ಪತಿಗೆ ನಾನು ಈಗಲೂ ಹಾಟ್ ಆಗಿ ಕಾಣಿಸ್ತೀನಿ, ನಂಗೆ ಅಷ್ಟು ಸಾಕು’: ಕರೀನಾ
Follow us
| Updated By: ಮಂಜುನಾಥ ಸಿ.

Updated on: Sep 12, 2024 | 2:17 PM

ಕರೀನಾ ಕಪೂರ್ ಖಾನ್ ಅವರು 20ನೇ ವಯಸ್ಸಿನಿಂದ ಚಿತ್ರರಂಗದಲ್ಲಿ ಇದ್ದಾರೆ. ಅವರು ಇನ್ನು 10 ದಿನಗಳಲ್ಲಿ 44ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರು ಸದ್ಯ ‘ಬಕ್ಕಿಂಗ್ಯಾಮ್ ಮರ್ಡರ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರನ್ನು ಅನೇಕರು ಅಜ್ಜಿ, ಆಂಟಿ ಎಂದೆಲ್ಲ ಕರೆದಿದ್ದು ಇದೆ. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ ಅನ್ನೋದು ಗೊತ್ತಾಗುತ್ತದೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕರೀನಾ ಇತ್ತೀಚೆಗೆ ಸಂದರ್ಶನ ಒಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ಹಲವು ವಿಚಾರ ಮಾತನಾಡಿದ್ದಾರೆ. ‘ನಾನು ಏನು ಮಾಡಬೇಕು ಎಂದುಕೊಂಡಿದ್ದೆನೋ ಅದೆಲ್ಲವನ್ನೂ ಮಾಡಿದ್ದೇನೆ. ವಿಶ್ವದ ಎಲ್ಲರೂ ನನ್ನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ನನಗೆ ಹಾಲಿವುಡ್ ಸಿನಿಮಾ ಮಾಡಬೇಕು ಅಥವಾ ಇಂಗ್ಲಿಷ್ ಸಿನಿಮಾ ಮಾಡಬೇಕು ಎನ್ನುವ ಆಸೆಯೇ ಬಂದಿಲ್ಲ. ಅರ್ಥಪೂರ್ಣ ಕೆಲಸ ಮಾಡುವುದು ಹಾಗೂ ನನಗೆ ನಾನು ಪ್ರಾಮಾಣಿಕವಾಗಿರೋದು ನನ್ನ ಉದ್ದೇಶ. ನಾನು ಈಗ ಎಲ್ಲಿದ್ದೇನೋ ಅದಕ್ಕೆ ಖುಷಿಯಾಗಿದ್ದೇನೆ’ ಎಂಬುದು ಕರೀನಾ ಮಾತು.

ಇದನ್ನೂ ಓದಿ: ಗೆಳತಿಗಾಗಿ ದೊಡ್ಡ ತ್ಯಾಗ ಮಾಡಿದ ಕರೀನಾ ಕಪೂರ್

‘ಈಗ ಮೀಡಿಯಾ ಕವರೇಜ್ ಬೇರೆ ರೀತಿ ಇದೆ. ಪರ್ಫೆಕ್ಟ್ ಆಗಿ ಕಾಣಿಸಬೇಕು ಎನ್ನುವ ಒತ್ತಡ ಇದೆ. ನನ್ನ ಟೀನ್ ಏಜ್ನಲ್ಲಿ ಪಂಜಾಬಿ ಕಪೂರ್ ಆಗಿದ್ದೆ. ಈಗ ಎಲ್ಲಾ ಒತ್ತಡ ಮರೆತು ಆಹಾರ ಮತ್ತು ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ. ಒಳ್ಳೆಯ ರೀತಿಯಲ್ಲಿ ಇರೋದಷ್ಟೇ ನನ್ನ ಉದ್ದೇಶ’ ಎಂಬುದು ಅವರ ಮಾತು.

‘ಯಂಗ್ ಆಗಿ ಕಾಣಿಸಬೇಕು ಎಂಬುದು ಉದ್ದೇಶ ಅಲ್ಲ. ನನಗೆ 44 ವರ್ಷ. ನಾನು ನನ್ನ ಪತಿಗೆ ಸೆಕ್ಸಿ ಆಗಿ ಕಾಣಿಸುತ್ತೇನೆ. ನನ್ನ ಗೆಳೆಯರು ಈಗಲೂ ನನ್ನ ಹೊಗಳುತ್ತಾರೆ. ನನ್ನ ಸಿನಿಮಾ ಗೆಲ್ಲುತ್ತಿದೆ. ನನ್ನ ವಯಸ್ಸನ್ನು ಪ್ರತಿನಿಧಿಸುವ ಪಾತ್ರ ಮಾಡುತ್ತಿದ್ದೇನೆ. ನಾನು ನಾನಾಗಿ ಇರೋದನ್ನು ನೋಡಲು ಫ್ಯಾನ್ಸ್ ಇಷ್ಟಪಡುತ್ತಾರೆ’ ಎಂದು ಕರೀನಾ ಕಪೂರ್ ಹೇಳಿದ್ದಾರೆ.

ಕರೀನಾ ಕಪೂರ್ ನಟನೆಯ ‘ಕ್ರ್ಯೂ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಹಾಸ್ಯ ಹಾಗೂ ಸಸ್ಪೆನ್ಸ್ನ ಇದು ಒಳಗೊಂಡಿದೆ. ಕರೀನಾ ಕಪೂರ್ ನಟನೆಯ, ಹನ್ಸಲ್ ಮೆಹ್ತಾ ನಿರ್ದೇಶನದ ‘ಬಕ್ಕಿಂಗ್ಯಾಮ್ ಮರ್ಡರ್ಸ್’ ಸೆಪ್ಟೆಂಬರ್ 13ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಶೇ.70 ಪರ್ಸೆಂಟ್ ಇಂಗ್ಲಿಷ್, 30 ಪರ್ಸಂಟ್ ಹಿಂದಿ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್