ಚಿಕ್ಕಬಳ್ಳಾಪುರ: ಗಣೇಶನ ಮುಂದೆ ಡ್ಯಾನ್ಸ್​ ಮಾಡಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ

ಗಣೇಶನ ಮುಂದೆ ಡ್ಯಾನ್ಸ್​ ಮಾಡಬೇಡ, ಮನೆಗೆ ಬಾ ಅಂತ ಅಣ್ಣ, ಅಮ್ಮ ಹೇಳಿದಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪ್ಯಾಯಲಗುರ್ಕಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಗಣೇಶನ ಮುಂದೆ ಡ್ಯಾನ್ಸ್​ ಮಾಡಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ
ಮೃತ ಗಿರೀಶ್​
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 11, 2024 | 2:13 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 11: ಗಣೇಶನ ಮುಂದೆ (Ganesh Festival) ಡ್ಯಾನ್ಸ್​ ಮಾಡಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಚಿಕ್ಕಪ್ಯಾಯಲಗುರ್ಕಿ ಗ್ರಾಮದಲ್ಲಿ ನಡೆದಿದೆ. ಗಿರೀಶ್ ​(21) ಮೃತ ದುರ್ದೈವಿ. ಗಣೇಶನ ಮುಂದೆ ಡ್ಯಾನ್ಸ್ ಮಾಡಬೇಡ ಮನೆಗೆ ಬರುವಂತೆ ಅಣ್ಣ ಮತ್ತು ಅಮ್ಮ ಹೇಳಿದ್ದಕ್ಕೆ ನೊಂದ ಗಿರೀಶ್​ ಗ್ರಾಮದ ಮುತ್ತುರಾಯಸ್ವಾಮಿ ದೇವಾಲಯದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಾಲಬಾಧೆಗೆ ಬೇಸತ್ತು ವೈದ್ಯ ಆತ್ಮಹತ್ಯೆ

ಬೀದರ್: ಸಾಲಬಾಧೆಗೆ ಬೇಸತ್ತು ಬ್ರಿಮ್ಸ್ ಆಸ್ಪತ್ರೆಯ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯ ಮೊಹಮ್ಮದ್ ಸೋಹೆಲ್ ಮೃತ ದುರ್ದೈವಿ. ಬೀದರ್ ತಾಲೂಕಿನ ಚಿಟ್ಟಾ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯ ಮೊಹಮ್ಮದ್ ಸೋಹೆಲ್ ಎಂಬಿಬಿಎಸ್​ ಅಧ್ಯಯನಕ್ಕಾಗಿ ವಿವಿಧ ಫೈನಾನ್ಸ್​ನಲ್ಲಿ ಲಕ್ಷಾಂತರ ಸಾಲ ಮಾಡಿದ್ದರು.

ಇದನ್ನೂ ಓದಿ: ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!

ಸಾಲ ತೀರಿಸಲು ಆಗದೆ ನೇಣು ಬಿಗಿದುಕೊಂಡು ವೈದ್ಯ ಮೊಹಮ್ಮದ್ ಸೋಹೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರಣ್ಯದಲ್ಲಿ ಕೊಳೆತ‌ ಸ್ಥಿತಿಯಲ್ಲಿ ವೈದ್ಯ ಮೊಹಮ್ಮದ್ ಸೋಹೆಲ್ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ. ಗಾಂಧಿಗಂಜ್ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸಾವು

ತುಮಕೂರು: ತೆಂಗಿನಕಾಯಿ ಕೀಳುವಾಗ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗುಬ್ಬಿ ತಾಲೂಕಿನ ಅಡಗೂರು ಗ್ರಾಮದ ಮದನ್ (24) ಮೃತ ಕೂಲಿ ಕಾರ್ಮಿಕ. ತುಮಕೂರು ತಾಲೂಕಿನ ಮಲ್ಲಸಂದ್ರ ಬಳಿಯ ಅದಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಮದನ್ ರೋಟಿಯಿಂದ ತೆಂಗಿನಮರದಲ್ಲಿ ಕಾಯಿ ಕೀಳುತ್ತಿದ್ದನು. ಈ ವೇಳೆ ತೆಂಗಿನಮರದ ಪಕ್ಕದಲ್ಲಿದ್ದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ