ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ

ಬಾಲಿವುಡ್ ನಟಿ, ಮಾಡೆಲ್ ಮಲೈಕಾ ಅರೋರಾರ ತಂದೆ ಅನಿಲ್ ಅರೋರಾ ಇಳಿ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ನಿವಾಸದ ಮೇಲ್ಛಾವಣಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ
Follow us
ಮಂಜುನಾಥ ಸಿ.
|

Updated on: Sep 11, 2024 | 12:40 PM

ಬಾಲಿವುಡ್​ನ ಖ್ಯಾತ ನಟಿ, ಮಾಡೆಲ್ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಇಂದು (ಸೆಪ್ಟೆಂಬರ್ 11) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ತಪ್ಪ ಮನೆಯ ಮೇಲ್ಛಾವಣಿಯಿಂದ ಕೆಳಗೆ ಹಾರಿ ಮಲೈಕಾರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಲೈಕಾರ ತಂದೆ ಮುಂಬೈನ ಬಾಂದ್ರಾದಲ್ಲಿ ವಾಸವಿದ್ದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.

ಮಲೈಕಾ ಅರೋರಾ ಚಿತ್ರೀಕರಣಕ್ಕಾಗಿ ಪುನಾಕ್ಕೆ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುಂಬೈಗೆ ರವಾನೆಯಾಗಿದ್ದಾರೆ. ಮಲೈಕಾ ಅರೋರಾರ ಸಹೋದರಿ ಅಮೃತ್ ಅರೋರಾ ಸಹ ತಂದೆಯ ಸಾವಿನ ವಿಷಯ ತಿಳಿದು ಮುಂಬೈಗೆ ವಾಪಸ್ಸಾಗಿದ್ದಾರೆ. ಮಲೈಕಾ ಅರೋರಾರ ತಂದೆ ಅನಿಲ್ ಅರೋರಾ ಭಾರತದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ:ಅವಕಾಶ ಕಡಿಮೆಯಾದರೂ ಮಲೈಕಾ ಅರೋರಾ ಆದಾಯ ಕಡಿಮೆಯಾಗಿಲ್ಲ

ಅನಿಲ್ ಅರೋರಾರ ಮೃತ ದೇಹವನ್ನು ಮುಂಬೈನ ಬಾಬಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಗಳಿಗೆ ನೀಡಲಾಗುವುದೆಂದು ತಿಳಿಸಲಾಗಿದೆ. ಅನಿಲ್ ಅವರದ್ದು ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದರೋ ಎಂಬ ಬಗ್ಗೆ ಅನುಮಾನವಿರುವುದಾಗಿ ಪೊಲೀಸರು ಹೇಳಿದ್ದಾರೆ. ಅನಿಲ್ ಅರೋರಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಲೈಕಾ ಅರೋರಾರ ಮಾಜಿ ಪತಿ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್, ಮಲೈಕಾರ ಬಾಂದ್ರಾದ ಮನೆಗೆ ಆಗಮಿಸಿದ್ದಾರೆ.

ಮಲೈಕಾ ಅರೋರಾ ಹಾಗೂ ಅಮೃತ್ ಅರೋರಾ ಇಬ್ಬರೂ ಸಹ ಮಾಡೆಲ್​ಗಳಾಗಿ ಗುರುತಿಸಿಕೊಂಡರು. ಬಳಿಕ ಚಿತ್ರರಂಗಕ್ಕೂ ಎಂಟ್ರಿ ನೀಡಿದರು. ಮಲೈಕಾ ಅರೋರಾ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ದಶಕಕ್ಕೂ ಹೆಚ್ಚು ಕಾಲ ದಾಂಪತ್ಯದಲ್ಲಿದ್ದರು. ಅವರಿಗೆ ಒಬ್ಬ ಮಗನಿದ್ದಾನೆ. ಬಳಿಕ ಅರ್ಬಾಜ್​ಗೆ ವಿಚ್ಛೇದನ ನೀಡಿ, ತನಗಿಂತಲೂ ಬಹಳ ಕಿರಿಯರಾದ ಅರ್ಜುನ್ ಕಪೂರ್ ಜೊತೆಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿ ತೊಡಗಿಕೊಂಡರು. ಇತ್ತೀಚೆಗೆ ಅರ್ಜುನ್ ಕಪೂರ್ ಜೊತೆಗೂ ಸಹ ಮಲೈಕಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ