ಸಿನಿಮಾದಲ್ಲಿ ನಷ್ಟ ಕಂಡ ನಿರ್ಮಾಪಕನಿಗೆ ಬಂತು ಹೊಸ ಐಡಿಯಾ; ಒಂದೆ ಹೊಡೆತಕ್ಕೆ 400 ಕೋಟಿ ರೂ. ಲಾಭ
‘ಕೂಲಿ ನಂಬರ್ 1’, ‘ಬಿವಿ ನಂಬರ್ 1’, ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’, ‘ಮಿಷನ್ ರಾಣಿಗಂಜ್ ಮೊದಲಾದ ಸಿನಿಮಾಗಳನ್ನು ಇವರು ನಿರ್ಮಾಣ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಅವರು ನಿರ್ಮಾಣ ಮಾಡಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡವು.
ರಕುಲ್ ಪ್ರೀತ್ ಸಿಂಗ್ ಅವರ ಮಾವ ಹಾಗೂ ನಿರ್ಮಾಪಕ ವಶು ಭಗ್ನಾನಿ ಇತ್ತೀಚೆಗೆ ಸಾಕಷ್ಟು ನಷ್ಟದಲ್ಲಿ ಇದ್ದಾರೆ. ಅವರು ನಾಲ್ಕು ದಶಕಗಳಿಂದ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಅವರ ನಿರ್ಮಾಣದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗುತ್ತಿವೆ. ಈ ಕಾರಣಕ್ಕೆ ಹಣ ಸಂಪಾದನೆಗೆ ವಶು ಅವರು ಹೊಸ ಐಡಿಯಾ ಮಾಡಿದ್ದಾರೆ. ಇದರಿಂದ ಬರೋಬ್ಬರಿ 400 ಕೋಟಿ ರೂಪಾಯಿ ಲಾಭ ಇದೆ.
‘ಕೂಲಿ ನಂಬರ್ 1’, ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’, ‘ಬಿವಿ ನಂಬರ್ 1’, ‘ಮಿಷನ್ ರಾಣಿಗಂಜ್ ಮೊದಲಾದ ಸಿನಿಮಾಗಳನ್ನು ಇವರು ನಿರ್ಮಾಣ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಅವರು ನಿರ್ಮಾಣ ಮಾಡಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡವು. ಈಕಾರಣಕ್ಕೆ ಇವರು ನಷ್ಟದಲ್ಲಿ ಇದ್ದವು. ಈಗ ಇವರ ಕಡೆಯಿಂದ ಹೊಸ ಪ್ರಯತ್ನ ನಡೆದಿದೆ.
ವಶು ಅವರು ಮುಂಬೈನ ಜುಹುದಲ್ಲಿ 16 ಅಂತಸ್ತಿನ ಕಚೇರಿ ಹೊಂದಿದ್ದರು. ಈ ಕಚೇರಿಯನ್ನು ಈಗ ವಾಸಸ್ಥಾನಕ್ಕೆ ಯೋಗ್ಯವಾಗುವಂತೆ ಮಾಡಲಾಗುತ್ತಿದೆ. ಇದರಿಂದ ವಶು ಭಗ್ನಾನಿಗೆ ಆಗುತ್ತಿರುವ ಲಾಭ ಬರೋಬ್ಬರಿ 400 ಕೋಟಿ ರೂಪಾಯಿ. ಈ ಮೂಲಕ ಅವರು ರಿಯಲ್ ಎಸ್ಟೇಟ್ನಲ್ಲಿ ಲಾಭ ಕಾಣುವ ಉದ್ದೇಶ ಇಟ್ಟುಕೊಂಡಿದ್ದಾರೆ
ಹಾಗಾದರೆ ವಶು ಅವರು ಚಿತ್ರರಂಗ ತೊರೆಯುತ್ತಾರಾ? ಖಂಡಿತವಾಗಿಯೂ ಇಲ್ಲ. ಅವರು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸ ಮುಂದುವರಿಸುತ್ತಿದ್ದಾರೆ. ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೀರೋ ಆಗಿ ಸಿಗುತ್ತಿಲ್ಲ ಯಶಸ್ಸು; ವಿಲನ್ ಪಾತ್ರ ಒಪ್ಪಿಕೊಂಡ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರಿಗೆ ‘ಮಿಷನ್ ರಾಣಿಗಂಜ್’ ಸಿನಿಮಾದ ಸಂಭಾವನೆಯನ್ನೇ ವಶು ಭಗ್ನಾನಿ ನೀಡಿರಲಿಲ್ಲ. ಈ ಬಗ್ಗೆ ಅಕ್ಷಯ್ ಕುಮಾರ್ ಅವರು ಮಾತನಾಡಿದ್ದರು. ಸಮಯ ಸಿಕ್ಕಾಗ ಅದನ್ನು ನೀಡಿ ಎಂದು ಹೇಳಿದ್ದೇನೆ ಎಂದು ಅಕ್ಷಯ್ ಕುಮಾರ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.