ದೀಪಿಕಾ ಪಡುಕೋಣೆ ಮಗುವಿಗಾಗಿ ದುಬೈನಲ್ಲಿ ಶಾಪಿಂಗ್ ಮಾಡಿ ಟ್ರೋಲ್ ಆದ ರಾಖಿ ಸಾವಂತ್
‘ನಾನು ಆಂಟಿ ಆದೆ’ ಎಂದು ರಾಖಿ ಸಾವಂತ್ ಖುಷಿಪಟ್ಟಿದ್ದಾರೆ. ದೀಪಿಕಾ ಪಡುಕೋಣೆ ಪುತ್ರಿಗಾಗಿ ದುಬೈನಲ್ಲಿ ರಾಖಿ ಸಾವಂತ್ ಶಾಪಿಂಗ್ ಮಾಡಿದ್ದಾರೆ. ಗೊಂಬೆ ಮುಂತಾದ ವಸ್ತುಗಳನ್ನು ಖರೀದಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ಇದೆಲ್ಲ ಪ್ರಚಾರದ ಗಿಮಿಕ್ ಎಂದು ಕೆಲವು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಒಂದಷ್ಟು ಪಾಸಿಟಿವ್ ಕಮೆಂಟ್ಗಳು ಕೂಡ ಬರುತ್ತಿವೆ.
ನಟಿ ದೀಪಿಕಾ ಪಡುಕೋಣೆ ಅವರು ತಾಯಿಯಾದ ಸುದ್ದಿ ತಿಳಿದು ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಖುಷಿ ಆಗಿದೆ. ಸೆಪ್ಟೆಂಬರ್ 8ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೀಪಿಕಾ ಪಡುಕೋಣೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಕೇಶ್ ಅಂಬಾನಿ ಅವರು ಆಸ್ಪತ್ರೆಗೆ ತೆರಳಿ ತಾಯಿ-ಮಗುವನ್ನು ನೋಡಿಬಂದಿದ್ದಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಕೂಡ ಪ್ರಚಾರ ಪಡೆಯಲು ಪ್ರಯತ್ನಿಸಿದ್ದಾರೆ.
ಸದ್ಯಕ್ಕೆ ರಾಖಿ ಸಾವಂತ್ ಅವರು ದುಬೈನಲ್ಲಿ ಇದ್ದಾರೆ. ದೀಪಿಕಾ ಪಡುಕೋಣೆ ಅವರಿಗೆ ಹೆಣ್ಣು ಮಗು ಜನಿಸಿದ್ದಕ್ಕಾಗಿ ರಾಖಿ ಸಖತ್ ಖುಷಿಪಟ್ಟಿದ್ದಾರೆ. ದುಬೈನಿಂದಲೇ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ದುಬೈನ ಮಾಲ್ವೊಂದಕ್ಕೆ ತೆರಳಿ ರಾಖಿ ಸಾವಂತ್ ಅವರು ಒಂದಷ್ಟು ಆಟಿಕೆ ವಸ್ತುಗಳನ್ನು ಖರೀದಿಸಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಅಪಘಾತ; ಕ್ಷಣಿಕ ಜೀವನದ ಬಗ್ಗೆ ಮಾತನಾಡಿದ ‘ಪುಷ್ಪ 2’ ನಟಿ
ದೀಪಿಕಾ ಪಡುಕೋಣೆಯ ಮಗುವಿಗಾಗಿ ರಾಖಿ ಸಾವಂತ್ ಅವರು ಗೊಂಬೆ, ಚೇರ್ ಮುಂತಾದ ವಸ್ತುಗಳನ್ನು ಖರೀದಿಸಿದ್ದಾರೆ. ‘ದೀಪಿಕಾ, ರಣವೀರ್ ಸಿಂಗ್.. ನಾನು ಆಂಟಿ ಆದೆ. ದೀಪಿಕಾ ಪಡುಕೋಣೆ ನಿಮಗೆ ನೆನಪಿದೆಯೇ? ನಾವಿಬ್ಬರೂ ಒಟ್ಟಿಗೆ ಡ್ಯಾನ್ಸ್ ಕ್ಲಾಸ್ಗೆ ಹೋಗಿದ್ದೆವು. ಇಬ್ಬರೂ ಒಟ್ಟಿಗೆ ವೃತ್ತಿ ಜೀವನ ಶುರು ಮಾಡಿದ್ದೆವು. ನೀವು ದೊಡ್ಡ ಸ್ಟಾರ್ ಆದ್ರಿ, ಹೆಂಡತಿ ಆದ್ರಿ. ಈಗ ತಾಯಿಯೂ ಆಗಿದ್ದೀರಿ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.
View this post on Instagram
ಈ ವಿಡಿಯೋ ನೋಡಿದ ಕೆಲವು ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ. ‘ದೀಪಿಕಾ ಪಡುಕೋಣೆಗೆ ಮಗು ಜನಿಸಿದ್ದಕ್ಕೆ ರಾಖಿ ಸಾವಂತ್ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ದಯವಿಟ್ಟು ನೀನು ದೂರದಿಂದಲೇ ವಿಶ್ ಮಾಡು. ಮನೆಗೆ ಬರಲೇಬೇಡ ಅಂತ ದೀಪಿಕಾ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿರಬಹುದು’ ಎಂದು ಕೂಡ ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ರಾಖಿ ಸಾವಂತ್ ಪರ ನಿಂತಿದ್ದಾರೆ. ‘ರಾಖಿ ಸಾವಂತ್ ಮನಸ್ಸು ದೊಡ್ಡದು. ಅವರು ಎಲ್ಲರಿಗೂ ಪ್ರೀತಿ ನೀಡುತ್ತಾರೆ. ಆದರೆ ಅವರಿಗೆ ನಿಜವಾದ ಪ್ರೀತಿ ಸಿಗುತ್ತಿಲ್ಲ. ಅವರನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂಬ ಕಮೆಂಟ್ ಕೂಡ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.