ಜಗದೀಶ್ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ಹೆಂಗಸಾಗೋಕೂ ಯೋಗ್ಯತೆ ಇಲ್ಲ ಎಂದ ಹಂಸಾ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಲಾಯರ್ ಜಗದೀಶ್ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ವರದಿ ಆಗಿದೆ. ಅವರು ಹಾಗೂ ರಂಜಿತ್ ಮಧ್ಯೆ ಫೈಟ್ ನಡೆದು ಇಬ್ಬರೂ ಹೊರ ಹೋದರು ಎಂದು ಹೇಳಲಾಗುತ್ತಿದೆ. ಅದನ್ನೂ ಇನ್ನೂ ತೋರಿಸಿಲ್ಲ. ಹೀಗಿರುವಾಗಲೇ ಒಂದು ಹೊಸ ಪ್ರೋಮೋನ ಕಲರ್ಸ್ ಕನ್ನಡ ರಿಲೀಸ್ ಮಾಡಿದೆ.
ಮಹಿಳಾ ಸ್ಪರ್ಧಿಗಳ ಬಗ್ಗೆ ಜಗದೀಶ್ ಅವರು ಅತಿಯಾದ ಕೆಟ್ಟ ಪದಗಳ ಬಳಕೆ ಮಾಡಿದ್ದಾರೆ. ಇದು ಮನೆಯವರ ನೆಮ್ಮದಿ ಕೆಡಿಸುತ್ತಿದೆ. ‘ಸೀರೆ ಕೊಡ್ತೀನಿ ಉಟ್ಕೋ’ ಎಂದು ಮಾನಸಾ ಅವರು ಜಗದೀಶ್ಗೆ ಹೇಳಿದ್ದಾರೆ. ‘ಅವರು ಹೆಂಗಸಾಗೋಕೂ ಯೋಗ್ಯತೆ ಇಲ್ಲ’ ಎಂದಿದ್ದಾರೆ ಹಂಸಾ. ‘ಇದಕ್ಕೆ ನೀವು ಒಂದು ಪರಿಹಾರ ಬೇಕೇ ಬೇಕು. ನೀವು ಕೊಡ್ತೀರಾ ಅಥವಾ ನಾವೇ ಏನಾದರೂ ಮಾಡಬೇಕಾ’ ಎಂದು ಹಂಸಾ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos