ನೋಲನ್ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ, ಕತೆ ಏನು?

|

Updated on: Feb 18, 2025 | 11:11 AM

Christopher Nolan: ಕ್ರಿಸ್ಟೊಫರ್ ನೋಲನ್ ಜಗತ್ತಿನ ನಂಬರ್ 1 ಸಿನಿಮಾ ನಿರ್ದೇಶಕ ಎಂದು ಹೆಸರಾಗಿದ್ದಾರೆ. ಐಎಂಡಿಯ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಅತಿ ಹೆಚ್ಚು ಸಿನಿಮಾಗಳಿರುವುದು ಕ್ರಿಸ್ಟೊಫರ್ ನೋಲನ್ ಅವರದ್ದು. ಇದೀಗ ಅವರ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.

ನೋಲನ್ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ, ಕತೆ ಏನು?
Christopher Nolan
Follow us on

ವಿಶ್ವ ಸಿನಿಮಾ ರಂಗದ ಟಾಪ್ 10 ನಿರ್ದೇಶಕರಲ್ಲಿ ಕ್ರಿಸ್ಟೊಫರ್ ನೋಲನ್ ಹೆಸರು ಕೇಳಿ ಬರುತ್ತಿದೆ. ಐಎಂಡಿಬಿಯ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಅತಿ ಹೆಚ್ಚು ಸಿನಿಮಾಗಳು ಕ್ರಿಸ್ಟೊಫರ್ ನೋಲನ್ ಅವರದ್ದಿವೆ. ಸಿನಿಮಾ ಮಾಧ್ಯಮವನ್ನು ಬಹಳ ಸಂಕೀರ್ಣವಾದ ವೈಜ್ಞಾನಿಕ ವಿಷಯಗಳನ್ನು ಹೇಳಲು ನೋಲನ್ ಬಳಸಿಕೊಳ್ಳುತ್ತಾರೆ. ನೋಲನ್​ರ ‘ಇನ್​ಸೆಪ್ಷನ್’, ‘ಇಂಟರ್​ಸ್ಟೆಲ್ಲರ್’, ಸಮಯದ ಭಿನ್ನ ಕಾನ್ಸೆಪ್ಟ್ ಹಿಡಿದು ಮಾಡಿರುವ ‘ಟೆನೆಟ್’ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ನೋಲನ್ ನಿರ್ದೇಶನ ಮಾಡಿದ್ದಾರೆ. ನೋಲನ್​ರ ಈ ಹಿಂದಿನ ಸಿನಿಮಾ ‘ಆಪನ್​ಹೈಮರ್​’ಗೆ ಆಸ್ಕರ್ ಸಹ ಬಂದಿದೆ. ಇದೀಗ ನೋಲನ್ ಹೊಸ ಸಿನಿಮಾಕ್ಕೆ ಕೈ ಹಾಕಿದ್ದು, ಮೊದಲ ಪೋಸ್ಟರ್ ಬಿಡುಗಡೆ ಆಗಿದೆ.

ಕ್ರಿಸ್ಟೊಫರ್ ನೋಲನ್ ಇದೀಗ ‘ದಿ ಒಡೆಸ್ಸೆ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಒಡೆಸ್ಸೆ’ ಸಿನಿಮಾ ಅವರ ಈ ಹಿಂದಿನ ಕೆಲ ಸಿನಿಮಾಗಳಂತೆ ‘ಮೈಂಡ್ ಬೆಂಡಿಂಗ್’ (ಮೆದುಳಿಗೆ ಶ್ರಮ ಕೊಡುವ) ಸಿನಿಮಾ ಅಲ್ಲ. ಬದಲಿಗೆ ಇದೊಂದು ಸಾಹಸಮಯ ಕತೆ ಹೊಂದಿರುವ ಒಂದೇ ಸರಳ ರೇಖೆಯಲ್ಲಿ ನಡೆಯುವ ಸಿನಿಮಾ ಅಂತೆ. ಸಿನಿಮಾದಲ್ಲಿ ಮ್ಯಾಟ್ ಡೆಮನ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಇದೀಗ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಗ್ರೀಕ್ ಪುರಾಣದ ಪ್ರಮುಖ ಪಾತ್ರ ಒಡಿಸಿಯಸ್​ ಪಾತ್ರದಲ್ಲಿ ಮ್ಯಾಟ್ ಡೆಮನ್ ನಟಿಸುತ್ತಿದ್ದಾರೆ.

‘ದಿ ಒಡೆಸ್ಸಿ’ ಪುರಾತನ ಗ್ರೀಕ್​ನ ಹೋಮೆರ್ ಬರೆದಿರುವ ‘ಒಡೆಸ್ಸೆ’ ಕಾವ್ಯದ ಸಿನಿಮಾ ರೂಪ ಎನ್ನಲಾಗುತ್ತಿದೆ. ‘ಒಡೆಸ್ಸಿ’ ಕಾವ್ಯದ ಕೆಲ ಭಾಗಗಳನ್ನು ಆಯ್ಕೆ ಮಾಡಿಕೊಂಡು ಕ್ರಿಸ್ಟೊಫರ್ ನೋಲನ್ ಈ ಸಿನಿಮಾ ಮಾಡುತ್ತಿದ್ದಾರೆ. ನೋಲನ್ ಈ ಹಿಂದೆ ಆಧುನಿಕ ಇತಿಹಾಸದ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಿದ್ದಿದೆ. ಎರಡನೇ ವಿಶ್ವಯುದ್ಧ ಆಧರಿಸಿದ‘ಡಂಕಿರ್ಕ್’, ಖ್ಯಾತ ವಿಜ್ಞಾನಿ ಆಪನ್​ಹೈಮರ್ ಜೀವನ ಆಧರಿಸಿದ ‘ಆಪನ್​ಹೈಮರ್’ ಸಿನಿಮಾಗಳನ್ನು ನೋಲನ್ ನಿರ್ದೇಶಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಪುರಾಣದ ಕತೆ ಆಧರಿಸಿದ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ:‘ಆಪನ್​ಹೈಮರ್​’ ಯಶಸ್ಸಿನ ಬಳಿಕ ಹಾರರ್​ ಸಿನಿಮಾ ಮಾಡ್ತಾರೆ ಕ್ರಿಸ್ಟೋಫರ್​ ನೋಲನ್​​

‘ದಿ ಒಡೆಸ್ಸೆ’ ಸಿನಿಮಾವು ‘ಒಡೆಸ್ಸೆ’ ಭಾರಿ ಬಜೆಟ್​ನ ಸಿನಿಮಾ ಆಗಲಿರಲಿದ್ದು, ಸಿನಿಮಾದಲ್ಲಿ ಮ್ಯಾಟ್ ಡೆಮನ್ ಜೊತೆಗೆ ‘ಸ್ಪೈಡರ್​ಮ್ಯಾನ್’ ಖ್ಯಾತಿಯ ನಟ ಟಾಮ್ ಹಾಲೆಂಡ್, ಖ್ಯಾತ ನಟಿ ಅನ್ನಾ ಹ್ಯಾತ್​ವೇ, ‘ಸ್ಪೈಡರ್​ಮ್ಯಾನ್’ ನಾಯಕಿ ಜೆಂಡೇಯ, ‘ಬ್ಲಾಕ್ ಪ್ಯಾಂಥರ್’ ನಟಿ ಲುಪಿತಾ, ರಾಬರ್ಟ್ ಪ್ಯಾಟಿಸನ್ ಇನ್ನೂ ಹಲವು ಪ್ರಮುಖ ನಟರು ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕ್ರಿಸ್ಟೋಫರ್ ನೋಲನ್ ಮತ್ತು ಅವರ ಪತ್ನಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ