AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಆಗಲಿದೆ ‘ಗೇಮ್ ಆಫ್ ಥ್ರೋನ್ಸ್’ ಆದರೆ ಯಾವ ಅಧ್ಯಾಯ?

‘ ‘ಗೇಮ್ ಆಫ್ ಥ್ರೋನ್ಸ್’ ಬಳಿಕ ಅದೇ ‘ಸಾಂಗ್ ಆಫ್ ಐಸ್ ಆಂಡ್ ಫೈರ್’ನ ಇನ್ನೂ ಬೇರೆ ಬೇರೆ ಅಧ್ಯಾಯಗಳನ್ನು ಆಧರಿಸಿ ವೆಬ್ ಸರಣಿಗಳನ್ನು ನಿರ್ಮಿಸಲಾಗಿದೆ. ಆದರೆ ಈ ವರೆಗೆ ಯಾವುದೇ ಸಿನಿಮಾವನ್ನು ಈ ಕತೆಯನ್ನು ಆಧರಿಸಿ ನಿರ್ಮಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಿನಿಮಾ ಸಹ ನಿರ್ಮಾಣಗೊಳ್ಳುತ್ತಿದೆ. ಸಿನಿಮಾದ ಚಿತ್ರಕತೆ ಈಗಾಗಲೇ ತಯಾರಾಗಿದೆ. ಆದರೆ ಸಿನಿಮಾ ನಿರ್ದೇಶನ ಮಾಡುವವರು ಯಾರು?

ಸಿನಿಮಾ ಆಗಲಿದೆ ‘ಗೇಮ್ ಆಫ್ ಥ್ರೋನ್ಸ್’ ಆದರೆ ಯಾವ ಅಧ್ಯಾಯ?
Game Of Thrones
ಮಂಜುನಾಥ ಸಿ.
|

Updated on: Sep 11, 2026 | 6:06 PM

Share

ಮುಖ್ಯಾಂಶಗಳು

  • ಗೇಮ್ ಆಫ್ ಥ್ರೋನ್ಸ್ ವಿಶ್ವದ ಬಲು ಜನಪ್ರಿಯ ಟಿವಿ ಸರಣಿ
  • ಆರ್​ಆರ್ ಮಾರ್ಟಿನ್ ಬರೆದ ಬೃಹತ್ ಕಾದಂಬರಿ ಆಧರಿತ ವೆಬ್ ಸರಣಿಯದು
  • ಇದೀಗ ಅದೇ ಕಾದಂಬರಿ ಆಧರಿಸಿದ ಸಿನಿಮಾ ನಿರ್ಮಾಣ ಆಗಲಿದೆ.

ಗೇಮ್ ಆಫ್ ಥ್ರೋನ್ಸ್’ ವಿಶ್ವದ ಅತ್ಯಂತ ಜನಪ್ರಿಯ ವೆಬ್ ಸರಣಿ. ಆರ್​ ಆರ್ ಮಾರ್ಟಿನ್ ಬರೆದಿರುವ ‘ಸಾಂಗ್ ಆಫ್ ಐಸ್ ಆಂಡ್ ಫೈರ್’ ಹೆಸರಿನ ಹಲವು ಕಾದಂಬರಿ ಸರಣಿಗಳಲ್ಲಿ ಒಂದು ಅಧ್ಯಾಯದಿಂದ ನಿರ್ಮಿಸಿದ ಈ ವೆಬ್ ಸರಣಿ ವಿಶ್ವದ ಅತ್ಯಂತ ಜನಪ್ರಿಯ ವೆಬ್ ಸರಣಿ ಆಗಿದೆ. ‘ಗೇಮ್ ಆಫ್ ಥ್ರೋನ್ಸ್’ ಬಳಿಕ ಅದೇ ‘ಸಾಂಗ್ ಆಫ್ ಐಸ್ ಆಂಡ್ ಫೈರ್’ನ ಇನ್ನೂ ಬೇರೆ ಬೇರೆ ಅಧ್ಯಾಯಗಳನ್ನು ಆಧರಿಸಿ ವೆಬ್ ಸರಣಿಗಳನ್ನು ನಿರ್ಮಿಸಲಾಗಿದೆ. ಆದರೆ ಈ ವರೆಗೆ ಯಾವುದೇ ಸಿನಿಮಾವನ್ನು ಈ ಕತೆಯನ್ನು ಆಧರಿಸಿ ನಿರ್ಮಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಿನಿಮಾ ಸಹ ನಿರ್ಮಾಣಗೊಳ್ಳುತ್ತಿದೆ.

‘ಸಾಂಗ್ ಆಫ್ ಐಸ್ ಆಂಡ್ ಫೈರ್’ ಬೃಹತ್ ಕಾದಂಬರಿಯ ಮೊದಲ ಭಾಗಗಳಲ್ಲಿ ಬರುವ ಏಗಾನ್ ಪಾತ್ರವನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡಲು ಎಚ್​​​ಬಿಓ ಮುಂದಾಗಿದ್ದು, ಈಗಾಗಲೇ ಚಿತ್ರಕತೆಯನ್ನು ಸಹ ಬರೆಸಿದೆ. ಮತ್ತೊಂದು ಬಲು ಜನಪ್ರಿಯ ವೆಬ್ ಸರಣಿ ‘ಹೌಸ್ ಆಫ್ ಕಾರ್ಡ್ಸ್’ಗೆ ಚಿತ್ರಕತೆ ಬರೆದಿರುವ ಬಿಯೂ ವಿಲಿಯಮ್ ಅವರು ಇದೀಗ ‘ಏಗಾನ್’ ಪಾತ್ರ ಆಧರಿಸಿದ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದು, ಚಿತ್ರಕತೆಯನ್ನು ಎಚ್​​ಬಿಓ ಸುಪರ್ಧಿಗೆ ನೀಡಿದ್ದಾರೆ. ಇದೀಗ ಎಚ್​​ಬಿಓ ನಿರ್ದೇಶಕನ ಹುಡುಕಾಟದಲ್ಲಿದೆ

ಕೆಲ ಸುದ್ದಿಗಳ ಪ್ರಕಾರ, ವಿಶ್ವ ಸಿನಿಮಾರಂಗ ಪ್ರಸ್ತುತ ನಂಬರ್ 1 ನಿರ್ದೇಶಕ ಎನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ ಅವರಿಂದ ಸಿನಿಮಾ ನಿರ್ದೇಶಿಸಬೇಕು ಎಂಬ ಪ್ರಯತ್ನದಲ್ಲಿ ಎಚ್​​ಬಿಓ ಇದ್ದು, ಕ್ರಿಸ್ಟೊಫರ್ ನೋಲನ್ ಅವರೊಟ್ಟಿಗೆ ಚರ್ಚೆ ಜಾರಿಯಲ್ಲಿದೆ. ಆದರೆ ನೋಲನ್ ಅವರು ಇತ್ತೀಚೆಗಷ್ಟೆ ‘ದಿ ಆಡಸ್ಸಿ’ ಸಿನಿಮಾ ನಿರ್ದೇಶಿಸಿದ್ದು, ಮತ್ತೊಮ್ಮೆ ಅದೇ ಮಾದರಿಯ ಸಿನಿಮಾ ನಿರ್ದೇಶನ ಮಾಡುತ್ತಾರಾ ಎಂಬ ಅನುಮಾನವಿದೆ.

ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟನೆದುರು ಕತ್ತಿ ಬೀಸಿದ ವಿಜಯ್ ದೇವರಕೊಂಡ

ಏಗಾನ್ ಪಾತ್ರ ಆಧರಿಸಿದ ಸಿನಿಮಾ ಇದಾಗಲಿದ್ದು, ಪೂರ್ಣ ಸಾಂಗ್ ಆಫ್ ಐಸ್ ಆಂಡ್ ಫೈರ್ ಅಥವಾ ‘ಗೇಮ್ ಆಫ್ ಥ್ರೋನ್ಸ್’ನಲ್ಲಿ ಬಹಳ ಪ್ರಮುಖವಾಗಿರುವ ಟಾಗೇರಿಯನ್ ವಂಶದ ಸಂಸ್ಥಾಪಕ ಈ ಏಗಾನ್. ಏಳು ಕಿಂಗ್​​ಡಮ್​​​ಗಳಲ್ಲಿ ಆರನ್ನು ವಶಕ್ಕೆ ತೆಗೆದುಕೊಂಡು ಅವುಗಳನ್ನು ಒಂದು ಮಾಡಿ ಆಡಳಿತ ನಡೆಸಿದಾತ ಏಗಾನ್. ಆತನ ಸಹೋದರಿ (ಪತ್ನಿಯರು) ವಿಸೇನ್ಯಾ ಮತ್ತು ರೇನೀಸ್ ಅವರೊಡನೆ ಸೇರಿ ಡ್ರ್ಯಾಗನ್​​ಗಳನ್ನು ಪಳಗಿಸಿ ಅವನ್ನು ವಾಹನವಾಗಿ ಬಳಸಿದಾತ ಏಗಾನ್. ‘ಹೀರೋಯಿಕ್’ ಗುಣಗಳುಳ್ಳ ಈ ಪಾತ್ರದ ಕುರಿತಾಗಿ ಸಿನಿಮಾ ಮಾಡಲು ಇದೀಗ ಎಚ್​​ಬಿಓ ಮುಂದಾಗಿದೆ. ಒಂದೊಮ್ಮೆ ಕ್ರಿಸ್ಟೊಫರ್ ನೋಲನ್ ಈ ಸಿನಿಮಾ ನಿರ್ದೇಶಿಸಲು ಒಪ್ಪಿಕೊಂಡಲ್ಲಿ, ಹಲವಾರು ದಾಖಲೆಗಳನ್ನು ಮುರಿಯುವ ಸಿನಿಮಾ ಇದಾಗಲಿದೆ.

ಆರ್​​ಆರ್ ಮಾರ್ಟಿನ್ ಅವರ ಕತೆ ಆಧರಿಸಿ ಈಗಾಗಲೇ ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿ ನಿರ್ಮಾಣವಾಗಿ ವಿಶ್ವದಾದ್ಯಂತ ದೊಡ್ಡ ಹಿಟ್ ಆಗಿದೆ. ಅದರ ಪ್ರೀಕ್ವೆಲ್​​ಗಳಾದ ‘ಹೌಸ್​​ ಆಫ್ ದಿ ಡ್ರ್ಯಾಗನ್ಸ್’ ಮೂರು ಸೀಸನ್ ಈಗಾಗಲೇ ಪ್ರಸಾರ ಆಗಿದೆ. ‘ನೈಟ್ ಆಫ್ ದಿ ಸೆವೆನ್ ಕಿಂಗ್​​ಡಮ್ಸ್’ ಹೆಸರಿನ ಮತ್ತೊಂದು ವೆಬ್ ಸರಣಿ ಒಂದು ಸೀಸನ್ ಪ್ರಸಾರ ಆಗಿದೆ. ಇದೀಗ ಮೊದಲ ಬಾರಿಗೆ ಈ ಬೃಹತ್ ಕಾದಂಬರಿ ಆಧರಿಸಿದ ಸಿನಿಮಾ ನಿರ್ಮಾಣ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us