ಭಾರತದಲ್ಲಿ 100 ಕೋಟಿ ಬಾಚಿದ ಎರಡು ಹಾಲಿವುಡ್ ಸಿನಿಮಾ, ರೇಸ್​​ನಲ್ಲಿ ಇನ್ನೊಂದು ಸಿನಿಮಾ

Hollywood Movies in India: 2020-23ಕ್ಕೆ ಹೋಲಿಸಿದರೆ ಕಳೆದೆರಡು ವರ್ಷಗಳಲ್ಲಿ ಭಾರತೀಯ ಸಿನಿಮಾಗಳ ಗೆಲುವಿನ ಸಂಖ್ಯೆ ಕಡಿಮೆ ಆಗಿದೆ. ಸ್ಟಾರ್ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್​ನಲ್ಲಿ ಮುಗ್ಗರಿಸುತ್ತಿವೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ಎರಡು ಹಾಲಿವುಡ್​ ಸಿನಿಮಾಗಳು ಕೆಲವೇ ದಿನಗಳಲ್ಲಿ 100 ಕೋಟಿ ಗಳಿಕೆ ದಾಟಿವೆ. ಮತ್ತೊಂದು ಹಾಲಿವುಡ್ ಸಿನಿಮಾ ಇದೇ ಹಾದಿಯಲ್ಲಿದೆ.

ಭಾರತದಲ್ಲಿ 100 ಕೋಟಿ ಬಾಚಿದ ಎರಡು ಹಾಲಿವುಡ್ ಸಿನಿಮಾ, ರೇಸ್​​ನಲ್ಲಿ ಇನ್ನೊಂದು ಸಿನಿಮಾ
F1 Jurasic

Updated on: Jul 24, 2025 | 9:47 AM

ಚಿತ್ರರಂಗದ ಪಾಲಿಗೆ ಕೋವಿಡ್ ಬಳಿಕ ಎರಡು ಮೂರು ವರ್ಷ ಬಂಪರ್ ಆಗಿತ್ತು. ಹಲವಾರು ಸಿನಿಮಾಗಳು, ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಆದವು. ಆದರೆ ಕಳೆದ ಎರಡು ವರ್ಷಗಳಿಂದ ಮತ್ತೆ ಚಿತ್ರರಂಗ ತುಸು ಡಲ್ ಆಗಿದೆ. ಸ್ಟಾರ್ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲು ವಿಫಲವಾಗುತ್ತಿವೆ. ಎಲ್ಲೋ ಕೆಲವು ಸಿನಿಮಾಗಳಷ್ಟೆ ಗೆಲ್ಲುತ್ತಿವೆ. ಭಾರತದ ಸಿನಿಮಾಗಳೇ ಬಾಕ್ಸ್ ಆಫೀಸ್​​ನಲ್ಲಿ ಗೆಲ್ಲಲು ಕಷ್ಟ ಅನುಭವಿಸುತ್ತಿರುವಾಗ ಎರಡು ಹಾಲಿವುಡ್​ ಸಿನಿಮಾಗಳು ನಿರಾಯಾಸವಾಗಿ ಭಾರತದ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿ ಹಣ ಗಳಿಕೆ ಮಾಡಿವೆ. ಇನ್ನೊಂದು ಸಿನಿಮಾ 100 ಕೋಟಿ ಗಳಿಸುವತ್ತ ದಾಪುಗಾಲಿಟ್ಟಿದೆ.

ಸ್ಕಾರ್ಲೆಟ್ ಜಾನ್ಸನ್ ನಟನೆಯ ಫ್ಯಾಂಟಸಿ ಸಿನಿಮಾ ‘ಜುರಾಸಿಕ್ ವರ್ಲ್ಡ್ ರೀಬರ್ತ್’ ಮತ್ತು ಬ್ರಾಡ್ ಪಿಟ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಎಫ್​1’ ಸಿನಿಮಾಗಳು ಕೆಲವೇ ದಿನಗಳ ಹಿಂದೆ ಭಾರತದಲ್ಲಿ ಬಿಡುಗಡೆ ಆಗಿದ್ದು, ಈ ಎರಡೂ ಸಿನಿಮಾಗಳು ಭಾರತದಲ್ಲಿ ನೂರು ಕೋಟಿ ಗಳಿಕೆಯನ್ನು ದಾಟಿ ಮುನ್ನುಗ್ಗುತ್ತಿವೆ. ‘ಎಫ್​1’ ಸಿನಿಮಾ ಜೂನ್ 27 ರಂದು ಭಾರತದಲ್ಲಿ ಬಿಡುಗಡೆ ಆಗಿತ್ತು. ಐಮ್ಯಾಕ್ಸ್, ಮಲ್ಟಿಪ್ಲೆಕ್ಸ್​ಗಳಲ್ಲಿ ಹೆಚ್ಚಿನ ಪರದೆಗಳಲ್ಲಿ ಬಿಡುಗಡೆ ಆಗಿತ್ತು ಈ ಸಿನಿಮಾ.

ಇದನ್ನೂ ಓದಿ:ಕೇವಲ ಐದು ದಿನಕ್ಕೆ 2900 ಕೋಟಿ ಕಲೆಕ್ಷನ್ ಮಾಡಿದೆ ಈ ಸಿನಿಮಾ

ಇನ್ನು ‘ಜುರಾಸಿಕ್ ವರ್ಲ್ಡ್: ರೀಬರ್ತ್’ ಸಿನಿಮಾ ಜುಲೈ 4 ರಂದು ಭಾರತದಲ್ಲಿ ಬಿಡುಗಡೆ ಆಗಿತ್ತು. ಮೊದಲು ಬಿಡುಗಡೆ ಆದ ‘ಎಫ್​1’ ಸಿನಿಮಾ 25 ದಿನಗಳಲ್ಲಿ 100 ಕೋಟಿ ಗಳಿಕೆಯನ್ನು ಭಾರತದ ಬಾಕ್ಸ್ ಆಫೀಸ್​ನಲ್ಲಿ ಮಾಡಿದರೆ, ‘ಜುರಾಸಿಕ್ ವರ್ಲ್ಡ್ ರೀಬರ್ತ್’ ಸಿನಿಮಾ ಕೇವಲ 20 ದಿನಗಳಲ್ಲಿ 100 ಕೋಟಿ ಕಲೆಕ್ಷನ್ ಅನ್ನು ದಾಟಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ 100 ಕೋಟಿ ಕಲೆಕ್ಷನ್ ಮಾಡಿದ ಹಾಲಿವುಡ್ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸಹ ಸೇರಿಕೊಂಡಿದೆ.

‘ಜುರಾಸಿಕ್ ವರ್ಲ್ಡ್: ರೀಬರ್ತ್’ ಸಿನಿಮಾದ ಬಳಿಕ ಭಾರತದಲ್ಲಿ ಬಿಡುಗಡೆ ಆಗಿರುವ ಭಾರಿ ಬಜೆಟ್​ನ ಹಾಲಿವುಡ್ ಸಿನಿಮಾ ‘ಸೂಪರ್​ಮ್ಯಾನ್’ ಸಹ ಭಾರತದ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಬಿಡುಗಡೆ ಆದಾಗ ಕಿಸ್ಸಿಂಗ್ ಸೀನ್ ಒಂದನ್ನು ಕತ್ತರಿಸಿದ ಕಾರಣಕ್ಕೆ ತುಸು ಇವಾದವಾಗಿತ್ತು. ಆದರೆ ಈ ಸಿನಿಮಾ ಸಹ ಬಾಕ್ಸ್ ಆಫೀಸ್​ನಲ್ಲಿ ವೇಗ ಪಡೆದುಕೊಂಡಿದ್ದು ಸಿನಿಮಾ ಈಗಾಗಲೇ 50 ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿದ್ದು, 100 ಕೋಟಿ ಕಲೆಕ್ಷನ್​ನತ್ತ ದಾಪುಗಾಲಿರಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಭಾರತದಲ್ಲಿ ಹಾಲಿವುಡ್ ಸಿನಿಮಾಗಲು ಬಹಳ ಒಳ್ಳೆಯ ಪ್ರದರ್ಶನ ಕಾಣುತ್ತಿವೆ. ಮಾರ್ವೆಲ್ ಸಿನಿಮಾಗಳಾದ ‘ಅವೇಂಜರ್ಸ್’, ‘ಸ್ಪೈಡರ್​ಮ್ಯಾನ್’, ‘ಥಾರ್’, ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾಗಳು, ‘ಅವತಾರ್: ವೇ ಆಫ್ ವಾಟರ್’, ‘ಆಪನ್​ಹೈಮರ್, ‘ಜಾನ್ ವಿಕ್’ ಇನ್ನೂ ಕೆಲವು ಹಾಲಿವುಡ್ ಸಿನಿಮಾಗಳು ಭಾರತದ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ