Natu-Natu: ಆಸ್ಕರ್ ವೇದಿಕೆ ಮೇಲೆ ನಾಟು-ನಾಟುಗೆ ಕುಣಿಯಲಿದ್ದಾರೆ ಈ ಯುವತಿ: ಯಾರೀಕೆ?

ಆಸ್ಕರ್ ವೇದಿಕೆ ಮೇಲೆ 'ನಾಟು-ನಾಟು' ಹಾಡಿಗೆ ಕುಣಿಯಲಿರುವ ಯುವತಿ ಈಕೆಯೇ? ಭಾರತದ ಸಿನಿಮಾ ಹಾಗೂ ನೃತ್ಯ ಪ್ರಿಯರಿಗೆ ಈ ಯುವತಿ ಅಪರಿಚತರೇನಲ್ಲ! ಹಾಗಿದ್ದರೆ ಯಾರೀಕೆ?

Natu-Natu: ಆಸ್ಕರ್ ವೇದಿಕೆ ಮೇಲೆ ನಾಟು-ನಾಟುಗೆ ಕುಣಿಯಲಿದ್ದಾರೆ ಈ ಯುವತಿ: ಯಾರೀಕೆ?
ಲಾರೆನ್
Follow us
ಮಂಜುನಾಥ ಸಿ.
|

Updated on: Mar 12, 2023 | 5:17 PM

ಕೆಲವೇ ಗಂಟೆಗಳಲ್ಲಿ ಆಸ್ಕರ್ 2023 (Oscars 2023) ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲ್ಸ್​ನಲ್ಲಿ ಆರಂಭವಾಗಲಿದೆ. ಈ ಬಾರಿ ತೆಲುಗಿನ ಆರ್​ಆರ್​ಆರ್ (RRR) ಸಿನಿಮಾದ ನಾಟು-ನಾಟು (Natu Natu) ಹಾಡು ನಾಮಿನೇಟ್ ಆಗಿದ್ದು ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಮಾತ್ರವಲ್ಲ ಆಸ್ಕರ್ ವೇದಿಕೆ ಮೇಲೆ ನಾಟು-ನಾಟು ಹಾಡಿನ ಲೈವ್ ಫರ್ಮಾರ್ಮೆನ್ಸ್ ಸಹ ನಡೆಯಲಿದೆ. ಗಾಯಕರಾದ ರಾಹುಲ್ ಸಿಪ್ಲಿಗಂಜ ಹಾಗೂ ಕಾಲಭೈರವ ವೇದಿಕೆ ಮೇಲೆ ಹಾಡು ಹಾಡಲಿದ್ದಾರೆ. ಆದರೆ ಹಾಡಿಗೆ ಕುಣಿಯುತ್ತಿರುವುದು ಜೂ ಎನ್​ಟಿಆರ್-ರಾಮ್ ಚರಣ್ ಅಲ್ಲ ಬದಲಿಗೆ ಅಮೆರಿಕದ ಯುವತಿ!

ಹೌದು, ಜೂ.ಎನ್​ಟಿಆರ್ ಹಾಗೂ ರಾಮ್ ಚರಣ್ ಅವರುಗಳು ನಾಟು-ನಾಟು ಹಾಡಿಗೆ ನರ್ತಿಸುತ್ತಾರೆ ಎನ್ನಲಾಗಿತ್ತು. ಆದರೆ ರಿಹರ್ಸಲ್​ಗೆ ಸಾಕಷ್ಟು ಸಮಯ ಧಕ್ಕುವುದಿಲ್ಲ ಎಂಬ ಕಾರಣಕ್ಕೆ ಅವರು ನೃತ್ಯ ಮಾಡುವ ಅವಕಾಶವನ್ನು ಕೈಬಿಟ್ಟರು. ಆ ಅವಕಾಶ ಅಮೆರಿಕದ ನಟಿ ಹಾಗೂ ಡ್ಯಾನ್ಸರ್ ಲಾರೆನ್ ಗೋತ್ಲಿಬ್ ಪಾಲಾಗಿದೆ. ಬಳ್ಳಿಯಂತೆ ಬಳುಕಬಲ್ಲ ಅಮೆರಿಕದ ಈ ಚೆಲುವೆ ಭಾರತದ ಸಿನಿಮಾ ಪ್ರೇಕ್ಷಕರಿಗೆ, ನೃತ್ಯ ಪ್ರೇಮಿಗಳಿಗೆ ಹೊಸಬರೇನೂ ಅಲ್ಲ.

ಅಮೆರಿಕದ ಜನಪ್ರಿಯ ಡ್ಯಾನ್ಸರ್​ಗಳಲ್ಲಿ ಒಬ್ಬರಾಗಿರುವ ಲಾರೆನ್ ಭಾರತದ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ಝಲಕ್ ದಿಕ್​ಲಾಜಾ ನಲ್ಲಿ 2013 ರಲ್ಲಿ ಭಾಗವಹಿಸಿ ರನ್ನರ್ ಅಪ್ ಆದರು. ಅದೇ ವರ್ಷ ಅವರು ಪ್ರಭುದೇವ ನಟಸಿ, ರೆಮೊ ಡಿಸೋಜಾ ನಿರ್ದೇಶನ ಮಾಡಿದ್ದ ‘ಎಬಿಸಿಡಿ’ ಸಿನಿಮಾದಲ್ಲಿಯೂ ನಟಿಸಿದರು. ಆ ಬಳಿಕ ಸಾಲು ಸಾಲು ಹಿಂದಿ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ.

ತಮಗೆ ನಾಟು-ನಾಟು ಹಾಡಿಗೆ ಆಸ್ಕರ್​ನಲ್ಲಿ ನರ್ತಿಸುವ ಅವಕಾಶ ದೊರತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದ ಲಾರೆನ್, ”ವಿಶೇಷ ಸುದ್ದಿ, ನಾನು ಆಸ್ಕರ್​ನಲ್ಲಿ ನಾಟು-ನಾಟು ಹಾಡಿಗೆ ವಿಶೇಷ ಪ್ರದರ್ಶನ ನೀಡಲಿದ್ದೇನೆ. ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಉತ್ಸುಕಳಾಗಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ” ಎಂದು ಬರೆದುಕೊಂಡಿದ್ದರು. ಭಾರತದ ಕೆಲವು ಸೆಲೆಬ್ರಿಟಿಗಳು ಸೇರಿದಂತೆ ಹಲವರು ಲಾರೆನ್​ಗೆ ಶುಭಾಶಯ ತಿಳಿಸಿದ್ದರು.

ಅಂತೆಯೇ ನಾಟು-ನಾಟು ಹಾಡಿಗೆ ತಾವು ತಮ್ಮ ತಂಡದೊಂದಿಗೆ ತಾಲೀಮು ಮಾಡುತ್ತಿರುವ ಕೆಲವು ವಿಡಿಯೋಗಳನ್ನು ಸಹ ಲಾರೆನ್ ಹಂಚಿಕೊಂಡಿದ್ದರು. ಮಾರ್ಚ್ 12 ರಂದು (ಭಾರತದ ಕಾಲಮಾನದಂತೆ ಮಾರ್ಚ್ 13) ಲಾಸ್ ಏಂಜಲಸ್​ನ ಆಸ್ಕರ್ ಮುಖ್ಯ ವೇದಿಕೆಯಲ್ಲಿ ತಮ್ಮ ತಂಡದೊಂದಿಗೆ ಲಾರೆನ್ ನಾಟು-ನಾಟು ಹಾಡಿಗೆ ಕುಣಿಯಲಿದ್ದಾರೆ. ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಂಜ್ ಹಾಗೂ ಕಾಲಭೈರವ ಹಾಡಲಿದ್ದಾರೆ.

ಲಾರೆನ್, ಹಿಂದಿಯ ಎಬಿಸಿಡಿ ಸಿನಿಮಾ ಮಾತ್ರವೇ ಅಲ್ಲದೆ, ಸುಶಾಂತ್ ರಜಪೂತ್ ನಟಿಸಿದ್ದ ಡಿಟೆಕ್ಟಿವ್ ಬ್ಯೂಮಕೇಶ ಬಕ್ಷಿ, ವರುಣ್ ಧವನ್ ನಟನೆಯ ಎಬಿಸಿಡಿ 2, ಅರ್ಷದ್ ವಾರ್ಸಿ ನಟನೆಯ ವೆಲ್​ಕಮ್ ಟು ಕರಾಚಿ, ಪಂಜಾಬಿ ಸಿನಿಮಾ ಅಂಬರಸರಿಯಾ, ನವಾಜುದ್ದೀನ್ ಸಿದ್ಧಿಕಿ ನಟನೆಯ ಗೂಮ್​ಕೇತು ಸಿನಿಮಾಗಳಲ್ಲಿ ವಿಶೇಷ ಹಾಡುಗಳಲ್ಲಿ ಕುಣಿದಿದ್ದಾರೆ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಝಲಕ್ ದಿಖ್​ಲಾಜಾ, ಬಿಗ್​ಬಾಸ್ ಸೇರಿದಂತೆ ಹಲವು ಹಿಂದಿ ಟಿವಿ ಶೋಗಳಲ್ಲಿಯೂ ಈ ಡ್ಯಾನ್ಸರ್ ಕಾಣಿಸಿಕೊಂಡಿದ್ದಾರೆ. ಕೆಲವು ಇಂಗ್ಲೀಷ್ ಸಿನಿಮಾಗಳಲ್ಲಿಯೂ ಲಾರೆನ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ