Oppenheimer Vs Barbie: ‘ಆಪನ್​ಹೈಮರ್​’ ವರ್ಸಸ್​ ‘ಬಾರ್ಬಿ’; ಮೊದಲ ದಿನ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಗಳ ಕಲೆಕ್ಷನ್​ ಎಷ್ಟು?

Oppenheimer Box Office Collection: ಅನೇಕ ಕಡೆಗಳಲ್ಲಿ ‘ಆಪನ್​ಹೈಮರ್​’ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ‘ಮಿಷನ್​ ಇಂಪಾಸಿಬಲ್​ 7’ ಮತ್ತು ‘ಫಾಸ್ಟ್​ ಎಕ್ಸ್​’ ಸಿನಿಮಾಗಳು ಗಳಿಸಿದ್ದಕ್ಕಿಂತಲೂ ಹೆಚ್ಚು ಕಲೆಕ್ಷನ್​ ‘ಆಪನ್​ಹೈಮರ್​’ ಚಿತ್ರಕ್ಕೆ ಆಗಿದೆ.

Oppenheimer Vs Barbie: ‘ಆಪನ್​ಹೈಮರ್​’ ವರ್ಸಸ್​ ‘ಬಾರ್ಬಿ’; ಮೊದಲ ದಿನ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಗಳ ಕಲೆಕ್ಷನ್​ ಎಷ್ಟು?
ರಯಾನ್​ ಗಾಸ್ಲಿಂಗ್, ಕಿಲಿಯನ್​ ಮರ್ಫಿ

Updated on: Jul 23, 2023 | 7:33 AM

ಜುಲೈ 21ರಂದು ಹಾಲಿವುಡ್​ನ ಎರಡು ದೊಡ್ಡ ಸಿನಿಮಾಗಳು ಒಟ್ಟಿಗೆ ರಿಲೀಸ್​ ಆದವು. ಒಂದು ‘ಆಪನ್​ಹೈಮರ್​’ (Oppenheimer), ಇನ್ನೊಂದು ‘ಬಾರ್ಬಿ’ (Barbie). ಬೇರೆ ಬೇರೆ ಕಾರಣಗಳಿಂದಾಗಿ ಈ ಎರಡೂ ಸಿನಿಮಾಗಳ ಮೇಲೆ ಹೈಪ್​ ಕ್ರಿಯೇಟ್​ ಆಗಿತ್ತು. ಈ ಚಿತ್ರಗಳ ನಡುವೆ ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಆಗಿರುವುದು ಕೂಡ ಅಚ್ಚರಿಗೆ ಕಾರಣ ಆಗಿತ್ತು. ಭಾರತದಲ್ಲೂ ಈ ಸಿನಿಮಾಗಳ ಮೇಲೆ ಪ್ರೇಕ್ಷಕರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದರು. ಮೊದಲ ದಿನ ಬಾಕ್ಸ್​ ಆಫೀಸ್​ನಲ್ಲಿ ಯಾವ ಚಿತ್ರಕ್ಕೆ ಹೆಚ್ಚು ಕಲೆಕ್ಷನ್​ (box office collection) ಆಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ‘ಆಪನ್​ಹೈಮರ್​’ ವರ್ಸಸ್​ ‘ಬಾರ್ಬಿ’ ಪೈಪೋಟಿಯಲ್ಲಿ ಕ್ರಿಸ್ಟೋಫರ್​ ನೋಲನ್​ ನಿರ್ದೇಶನದ ‘ಆಪನ್​ಹೈಮರ್​’ ಚಿತ್ರವೇ ಹೆಚ್ಚು ಕಮಾಯಿ ಮಾಡಿದೆ. ಆ ಬಗ್ಗೆ ಇಲ್ಲಿದೆ ಲೆಕ್ಕಾಚಾರ..

ವರದಿಗಳ ಪ್ರಕಾರ, ಭಾರತದಲ್ಲಿ ‘ಆಪನ್​ಹೈಮರ್​’ ಸಿನಿಮಾಗೆ ಮೊದಲ ದಿನ 13.50 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಯಾವುದೇ ಮಾಸ್​, ಕಮರ್ಷಿಯಲ್​ ಅಂಶಗಳು ಇಲ್ಲದ ಈ ಚಿತ್ರಕ್ಕೆ ಜನರು ಈ ಪರಿ ಪ್ರತಿಕ್ರಿಯೆ ತೋರಿಸಿರುವುದು ಅಚ್ಚರಿ ಮೂಡಿಸಿದೆ. ತುಂಬ ಗಂಭೀರವಾಗಿ ಈ ಸಿನಿಮಾ ಮೂಡಿಬಂದಿದೆ. ವಿಮರ್ಶೆಯ ದೃಷ್ಟಿಯಿಂದ ಈ ಚಿತ್ರ ಮೇಲುಗೈ ಸಾಧಿಸಿದೆ. ಅಣು ಬಾಂಬ್​ ಕಂಡು ಹಿಡಿದ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಜೀವನದ ಕುರಿತು ಈ ಸಿನಿಮಾ ಮೂಡಿಬಂದಿದೆ.

ಇದನ್ನೂ ಓದಿ: Oppenheimer: ‘ಆಪನ್​ಹೈಮರ್​’ ಪಾತ್ರಕ್ಕಾಗಿ ಅಪಾಯಕಾರಿ ಡಯೆಟ್​ ಮಾಡಿದ ನಟ ಕಿಲಿಯನ್​ ಮರ್ಫಿ; ದಿನಕ್ಕೆ ಒಂದೇ ಬಾದಾಮಿ?

ರಯಾನ್​ ಗಾಸ್ಲಿಂಗ್​ ನಟನೆಯ ‘ಬಾರ್ಬಿ’ ಸಿನಿಮಾ ಕೂಡ ಕ್ರೇಜ್​ ಸೃಷ್ಟಿ ಮಾಡಿತ್ತು. ‘ಆಪನ್​ಹೈಮರ್​’ ಎದುರು ರಿಲೀಸ್​ ಆಗುತ್ತಿರುವ ಸಿನಿಮಾ ಎಂಬ ಕಾರಣದಿಂದಲೇ ‘ಬಾರ್ಬಿ’ ಹೈಪ್​ ಪಡೆದುಕೊಂಡಿತ್ತು. ಈ ಸಿನಿಮಾ ಕೂಡ ಸಾಧಾರಣ ರೀತಿಯಲ್ಲಿ ಕಲೆಕ್ಷನ್​ ಮಾಡಿದೆ. ಮೊದಲ ದಿನ ‘ಬಾರ್ಬಿ’ ಚಿತ್ರ 4.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಾಗಿದೆ ಎಂದು ವರದಿ ಆಗಿದೆ. ಮುಂಬರುವ ದಿನಗಳಲ್ಲಿ ಈ ಸಿನಿಮಾ ಭಾರತದಲ್ಲಿ ಎಷ್ಟು ಬಿಸ್ನೆಸ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: Oppenheimer: ಕ್ರಿಸ್ಟೋಫರ್ ನೋಲನ್​ ನಿರ್ದೇಶನದ ‘ಆಪನ್​ಹೈಮರ್​’ ಸಿನಿಮಾ ಮೇಲೆ ಇಷ್ಟೊಂದು ಕ್ರೇಜ್​ ಹೆಚ್ಚಲು ಕಾರಣ ಏನು? ಇಲ್ಲಿದೆ ವಿವರ..

ಅನೇಕ ಕಡೆಗಳಲ್ಲಿ ‘ಆಪನ್​ಹೈಮರ್​’ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ‘ಮಿಷನ್​ ಇಂಪಾಸಿಬಲ್​ 7’ ಸಿನಿಮಾ ಭಾರತದಲ್ಲಿ ಮೊದಲ ದಿನ 12 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ‘ಫಾಸ್ಟ್​ ಎಕ್ಸ್​’ ಸಿನಿಮಾ 13 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆದರೆ ಈ ಸಿನಿಮಾಗಳನ್ನೂ ಮೀರಿಸಿ ಭಾರತದ ಬಾಕ್ಸ್​ ಆಫೀಸ್​ನಲ್ಲಿ ‘ಆಪನ್​ಹೈಮರ್​’ ಸಿನಿಮಾ 13.50 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂಬುದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us