ಆಸ್ಕರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ, ಕೊನೆ ಆಗುವುದೇ ಪಕ್ಷಪಾತ?

Oscars 2026 New rules: ಸಿನಿಮಾಕ್ಕೆ ನೀಡಲಾಗುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್​ ಬಗ್ಗೆ ಕೆಲ ಟೀಕೆಗಳು ಸಹ ಇವೆ. ಆಸ್ಕರ್​ನಲ್ಲಿ ಪಕ್ಷಪಾತ ಹೆಚ್ಚು ಎನ್ನಲಾಗುತ್ತದೆ. ಆಸ್ಕರ್​ಗಾಗಿ ಮತ ಹಾಕುವ ಜಡ್ಜ್​ಗಳು ನಿಯಮ ಮುರಿಯುತ್ತಾರೆ. ಪಾರದರ್ಶಕತೆ ಇಲ್ಲ ಎಂಬ ಆರೋಪಗಳಿವೆ. ಇದೇ ಕಾರಣಕ್ಕೆ ಆಸ್ಕರ್​ನ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

ಆಸ್ಕರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ, ಕೊನೆ ಆಗುವುದೇ ಪಕ್ಷಪಾತ?
Oscars

Updated on: Apr 22, 2025 | 11:23 AM

ಸಿನಿಮಾ (Cinema) ಕ್ಷೇತ್ರದಲ್ಲಿ ಕೊಡಮಾಡುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದು ಆಸ್ಕರ್ (Oscar) ಅನ್ನು ಪರಿಗಣಿಸಲಾಗುತ್ತದೆ. ಆಸ್ಕರ್ಸ್ ಅಥವಾ ಅಕಾಡೆಮಿ ಅವಾರ್ಡ್ಸ್ ಪಡೆದ ನಟ, ತಂತ್ರಜ್ಞರನ್ನು ಅತ್ಯುನ್ನತ ಎಂದು ಸಿನಿಮಾ ರಂಗ ಗೌರವಿಸುತ್ತದೆ. ಆದರೆ ಆಸ್ಕರ್​ ಬಗ್ಗೆ ಇರುವ ಪ್ರಮುಖ ಟೀಕೆಯೆಂದರೆ ಈ ಪ್ರಶಸ್ತಿಯಲ್ಲಿ ಸಾಕಷ್ಟು ಪಕ್ಷಪಾತ ನಡೆಯುತ್ತದೆ, ವಶೀಲಿಬಾಜಿ ಸಾಕಷ್ಟಿದೆ, ಇದು ಕೇವಲ ಹಾಲಿವುಡ್​ನವರು, ಹಾಲಿವುಡ್​ಗಾಗಿ ಮಾಡಿಕೊಂಡಿರುವ ಪ್ರಶಸ್ತಿ ಎಂಬೆಲ್ಲ ಟೀಕೆಗಳು ಇವೆ. ಈ ಟೀಕೆಗಳ ನಡುವೆ ಇದೀಗ ಆಸ್ಕರ್ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ಇತ್ತೀಚೆಗಷ್ಟೆ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಆಕ್ಷನ್ ಡಿಸೈನ್ ಹೆಸರಿನ ಹೊಸ ವಿಭಾಗವನ್ನು ಸೇರಿಸಲಾಗಿದೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಆಸ್ಕರ್​ ಪ್ರಶಸ್ತಿಗೆ ಮತ ಹಾಕುವ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕೆಲ ಮೂಲ ನಿಯಮಗಳನ್ನು ಸಹ ತಿದ್ದಲಾಗಿದೆ. ಆಸ್ಕರ್​ ಪ್ರಶಸ್ತಿಗೆ ಇನ್ನಷ್ಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅಕಾಡೆಮಿ ಹೇಳಿದೆ.

ಆಸ್ಕರ್​ಗೆ ಅರ್ಹತೆ ಗಿಟ್ಟಿಸುವ ಸಿನಿಮಾಗಳನ್ನು ದೊಡ್ಡ ಸಂಖ್ಯೆಯ ಸದಸ್ಯರು ನೋಡಿ ಮತ ಚಲಾಯಿಸುವ ಮೂಲಕ ಸಿನಿಮಾಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದು ನಡೆದುಕೊಂಡು ಬಂದಿರುವ ರೂಢಿ. ಆದರೆ ಪ್ರಶಸ್ತಿಗೆ ಕಳಿಸಲ್ಪಟ್ಟ ಎಷ್ಟೋ ಸಿನಿಮಾಗಳನ್ನು ನಿಗದಿತ ಜಡ್ಜ್​ಗಳು ನೋಡುವುದೇ ಇಲ್ಲ. ಅದರ ಸ್ಟೋರಿ ಲೈನ್, ಪ್ಲಾಟ್ ಕೇಳಿ ಸಿನಿಮಾಗಳನ್ನು ರಿಜೆಕ್ಟ್ ಮಾಡಿರುವ ಉದಾಹರಣೆ ಇದೆ. ಇದರ ಜೊತೆಗೆ ಕಳಿಸಲಾಗಿರುವ ಸಿನಿಮಾಗಳನ್ನು 15 ನಿಮಿಷ, 20 ನಿಮಿಷ ನೋಡಿ ರಿಜೆಕ್ಟ್ ಮಾಡಿರುವ ಉದಾಹರಣೆಯೂ ಸಾಕಷ್ಟಿದೆ. ಆದರೆ ಇದಕ್ಕೆಲ್ಲ ಇನ್ನು ಮುಂದೆ ಅವಕಾಶ ಇರುವುದಿಲ್ಲ.

ಇದನ್ನೂ ಓದಿ:ರಿಷಿ ನಟನೆಯ ಹೊಸ ಸಿನಿಮಾ ‘ಮಂಗಳಾಪುರಂ’; ಕುತೂಹಲ ಮೂಡಿಸಿದ ಫಸ್ಟ್ ಲುಕ್

ಇನ್ನು ಮುಂದೆ ಅಧೀಕೃತ ಸದಸ್ಯರು ಪೂರ್ತಿ ಸಿನಿಮಾ ಅನ್ನು ವೀಕ್ಷಿಸದೆ ಮತದಾನ ಮಾಡುವಂತಿಲ್ಲ. ಸಿನಿಮಾ ವೀಕ್ಷಿಸುವವರು ಸಿನಿಮಾಕ್ಕೆ ಮುಂಚೆ ನೀಡಲಾಗುವ ಅರ್ಜಿಯನ್ನು ತುಂಬಿಯೇ ಸಿನಿಮಾ ವೀಕ್ಷಿಸಬೇಕು. ಮತದಾನದ ಸಮಯದಲ್ಲಿ, ಸಿನಿಮಾ ನೋಡಿದ್ದಾರೆಯೋ ಇಲ್ಲವೋ ಎಂಬ ಅನುಮಾನ ಬಂದಲ್ಲಿ, ಸಿನಿಮಾಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಹ ಕೇಳಿ ಖಾತ್ರಿ ಮಾಡಿಕೊಳ್ಳುವ ಅಧಿಕಾರ ಚಿತ್ರತಂಡಕ್ಕೆ ಮತ್ತು ಅಕಾಡೆಮಿಗೆ ಇರಲಿದೆ.

ಇನ್ನು ಕಳೆದ ವರ್ಷ ಕೆಲ ಸಿನಿಮಾಗಳಲ್ಲಿ ಎಐ ಅನ್ನು ಬಳಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ನಾಮಿನೇಷನ್ ಪಡೆಯಲು ಎಐ ಬಳಕೆ ಮಾಡಿರುವದನ್ನು ಹಲವರು ವಿರೋಧಿಸಿದ್ದರು. ಆದರೆ ಈ ಬಾರಿ ಆಸ್ಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಎಐ ಬಳಕೆ ಮಾಡಲಾಗಿದೆ ಎಂಬ ಮಾತ್ರಕ್ಕೆ ಸಿನಿಮಾಗಳನ್ನು ನಿಷೇಧಿಸಲಾಗದು. ಎಐ ಬಳಕೆ ಮಾಡುವುದು, ಮಾಡದೇ ಇರುವುದು ಆಸ್ಕರ್​ನ ಪ್ರಶಸ್ತಿ ಪರಿಗಣನೆಗೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲ ಕ್ಲಿಕ್ ಮಾಡಿ