ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್ನಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ವಿವಿಧ ದೇಶಗಳಿಗೆ ತೆರಳಿ ಶೂಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ, ಕುಟುಂಬದವರ ಜೊತೆಗೂ ಅವರು ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬೇಸರದ ವಿಚಾರ ಏನೆಂದರೆ, ಶೂಟಿಂಗ್ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಕಾಲಿಗೆ ಗಾಯ ಆಗಿದೆ. ಅದರ ಫೋಟೋವನ್ನೂ ಅವರು ಅಪ್ಲೋಡ್ ಮಾಡಿದ್ದಾರೆ. ಈ ಗಾಯಕ್ಕೆ ಅವರು ಮನೆಮದ್ದು ಮಾಡಿದ್ದಾರೆ.
‘ದ ಬ್ಲಫ್’ ಸಿನಿಮಾದ ಶೂಟಿಂಗ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಸನ್ನಿವೇಶಗಳು ಇರಲಿವೆ. ಚಿತ್ರೀಕರಣದ ವೇಳೆ ಪ್ರಿಯಾಂಕಾ ಅವರ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಜ್ವರ ಮತ್ತು ಉರಿಯೂತ ಬರಬಾರದು ಎಂಬ ಉದ್ದೇಶದಿಂದ ಅವರು ಭಾರತದ ಮನೆಮದ್ದು ಪ್ರಯೋಗಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರ ಪಾದಗಳಿಗೆ ಬೆಳ್ಳುಳ್ಳಿಯಿಂದ ಮಸಾಜ್ ಮಾಡಲಾಗಿದೆ. ಇದರ ಪ್ರಯೋಜನ ಏನು ಎಂಬುದನ್ನು ಅವರು ಕಮೆಂಟ್ ಬಾಕ್ಸ್ನಲ್ಲಿ ತಿಳಿಸಿದ್ದಾರೆ. ನಟಿ ಆದಷ್ಟು ಬೇಗ ಗಾಯಗಳಿಂದ ಗುಣಮುಖರಾಗಲಿ ಎಂದು ಅವರ ಫ್ಯಾನ್ಸ್ ಹಾರೈಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಫ್ಯಾಮಿಲಿ ಫೋಟೋಗಳು ವೈರಲ್ ಆಗಿವೆ. ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್, ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಅವರು ಕಾಲ ಕಳೆಯುತ್ತಿದ್ದಾರೆ.
ವಿಶ್ವಾದ್ಯಂತ ಪ್ರಿಯಾಂಕಾ ಚೋಪ್ರಾ ಅವರು ಪ್ರಸಿದ್ಧಿ ಪಡೆದಿದ್ದಾರೆ. ಮೊದಲು ಬಾಲಿವುಡ್ನಲ್ಲಿ ಫೇಮಸ್ ಆಗಿದ್ದ ಅವರು ನಂತರ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇಂಗ್ಲಿಷ್ ವೆಬ್ ಸರಣಿಗಳಲ್ಲೂ ಅವರು ಅಭಿನಯಿಸಿದ್ದಾರೆ. ಮತ್ತೆ ಅವರು ಬಾಲಿವುಡ್ ಸಿನಿಮಾ ಮಾಡಲಿ ಎಂಬುದು ಅವರ ಅಭಿಮಾನಿಗಳ ಬಯಕೆ. ಆ ಬಗ್ಗೆ ಇನ್ನಷ್ಟೇ ಅಪ್ಡೇಟ್ ಸಿಗಬೇಕಿದೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಮೈದುನನಿಗೆ ಕ್ಯಾನ್ಸರ್: ಚರ್ಮದ ಕ್ಯಾನ್ಸರ್ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಕೆವಿನ್
‘ದ ಬ್ಲಫ್’ ಮಾತ್ರವಲ್ಲದೇ ಹಾಲಿವುಡ್ನ ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾದಲ್ಲೂ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಸಿಟಾಡೆಲ್’ ಎರಡನೇ ಸೀಸನ್ ಕೂಡ ಅವರ ಕೈಯಲ್ಲಿದೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.