ಪ್ರಿಯಾಂಕಾ ಚೋಪ್ರಾ ಹಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ಅಮೆರಿಕದ ಪಾಪ್ ಗಾಯಕ ನಿಕ್ ಜೋನಸ್ ಮದುವೆ ಆದ ನಂತರದಲ್ಲಿ ಅಲ್ಲಿಯೇ ಸೆಟಲ್ ಆಗಿದ್ದಾರೆ. ಆದರೆ, ಅವರಿಗೆ ಭಾರತದ ಮೇಲಿನ ಪ್ರೀತಿ ಕೊಂಚವೂ ಕಡಿಮೆ ಆಗಿಲ್ಲ. ಅವರು ಪತಿ ನಿಕ್ ಜೋನಸ್ ಜತೆಗೂಡಿ ಹೋಳಿ ಹಬ್ಬ ಆಚರಿಸಿದ್ದರು. ಈಗ ಅವರು ವಿಮಾನದಲ್ಲಿ ಕೂತಿರುವ ಹೊಸ ಫೋಟೋ ಒಂದು ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಅಲ್ಲದೆ ಪ್ರಿಯಾಂಕಾ ಅವರನ್ನು ದೇಸಿ ಗರ್ಲ್ ಎಂದು ಕರೆದಿದ್ದಾರೆ.
ನಿಕ್ ಜೋನಸ್ ಅವರನ್ನು ಮದುವೆ ಆದ ನಂತರದಲ್ಲಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದು ಕಡಿಮೆ. ಅವರು ಯಾವುದೇ ಬಾಲಿವುಡ್ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ಆದರೆ, ಹಾಲಿವುಡ್ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇದು ಭಾರತೀಯ ಫ್ಯಾನ್ಸ್ಗೆ ಕೊಂಚ ಬೇಸರ ತರಿಸಿದ್ದು ನಿಜ. ಆದರೆ, ಈಗ ಅವರು ವಿಮಾನದಲ್ಲಿ ಕೂತಿದ್ದ ರೀತಿ ಫ್ಯಾನ್ಸ್ಗೆ ಇಷ್ಟವಾಗಿದೆ.
ಭಾರತೀಯರು ಚಕ್ಕಳ ಮಕ್ಕಳ (ಸುಖಾಸನ) ಹಾಕಿ ಕೂರುತ್ತಾರೆ. ನೆಲಕ್ಕೆ ಕೂರುವಾಗ ಈ ರೀತಿಯಲ್ಲೇ ಕೂರೋಕೆ ಆದ್ಯತೆ ನೀಡುತ್ತಾರೆ. ಆದರೆ, ವಿದೇಶಿಗರು ಈ ರೀತಿಯಲ್ಲಿ ಕುಳಿತುಕೊಳ್ಳುವುದು ತುಂಬಾನೇ ಕಡಿಮೆ. ಆದರೆ, ಪ್ರಿಯಾಂಕಾ ಚೋಪ್ರಾ ಅಮೆರಿಕಕ್ಕೆ ತೆರಳಿದರೂ ಇದೇ ರೀತಿಯಲ್ಲಿ ಕೂರುತ್ತಿದ್ದಾರೆ. ಇದಕ್ಕೆ ವೈರಲ್ ಆಗುತ್ತಿರುವ ಹೊಸ ಫೋಟೋ ಸಾಕ್ಷಿ.
ಪ್ರಿಯಾಂಕಾ ಚೋಪ್ರಾ ‘ಸಿಟಾಡೆಲ್’ ಸೀರಿಸ್ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಇದಕ್ಕಾಗಿ ಅವರು ಸ್ಪೇನ್ಗೆ ತೆರಳಿದ್ದಾರೆ. ವಿಮಾನದಲ್ಲಿ ಪ್ರಯಾಣ ಮಾಡುವಾಗ ಅವರು ಚಕ್ಕಳ ಮಕ್ಕಳ ಹಾಕಿ ಕೂತಿದ್ದರು. ಈ ಫೋಟೋ ಈಗ ಸಾಕಷ್ಟು ವೈರಲ್ ಆಗಿದ್ದು, ಪ್ರಿಯಾಂಕಾ ಅವರನ್ನು ದೇಸಿ ಗರ್ಲ್ ಎಂದು ಕರೆದಿದ್ದಾರೆ ಅಭಿಮಾನಿಗಳು.
ಇತ್ತೀಚೆಗೆ ನಿಜ್ ಜೋನಸ್ ಬರ್ತ್ಡೇ ಆಚರಿಸಿಕೊಂಡಿದ್ದರು. ಶೂಟಿಂಗ್ ಕಾರಣದಿಂದ ಪ್ರಿಯಾಂಕಾ ಚೋಪ್ರಾ ಇಂಗ್ಲೆಂಡ್ಗೆ ತೆರಳಿದ್ದರು. ನಿಕ್ ಜೋನಸ್ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಅವರು ಅಲ್ಲಿಂದ ಅಮೆರಿಕದ ವಿಮಾನ ಹತ್ತಿದ್ದರು. ಸಂಜೆ ಆಗುವುದರೊಳಗೆ ಪತಿಯನ್ನು ಬಂದು ಸೇರಿಕೊಂಡಿದ್ದರು. ಅಲ್ಲಿಂದ ಬಂದು ತಮ್ಮ ಬರ್ತ್ಡೇ ಆಚರಿಸಿರುವುದು ನಿಕ್ಗೆ ಅಚ್ಚರಿ ತಂದಿತ್ತು. ಹಾಗಾಗಿ ನಿಕ್ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ‘ನನ್ನ ಒಳ ಉಡುಪು ತೋರಿಸುವಂತೆ ನಿರ್ದೇಶಕರು ಹೇಳಿದ್ದರು’; ಇದು ಪ್ರಿಯಾಂಕಾ ಚೋಪ್ರಾ ಬದುಕಿನ ಕರಾಳ ಅನುಭವ
Published On - 3:07 pm, Fri, 1 October 21