
ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಹಾಲಿವುಡ್‌ನಲ್ಲಿಯೂ ಜನಪ್ರಿಯತೆ ಗಳಿಸಿರುವ ತಾರೆಗಳಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಒಬ್ಬರು. ಅವರು ಜಾಗತಿಕ ಐಕಾನ್ ಆಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಪ್ರಿಯಾಂಕಾ ಹಾಲಿವುಡ್‌ನಲ್ಲಿ ಅವಕಾಶಗಳನ್ನು ಹುಡುಕಲು ಅಮೆರಿಕಕ್ಕೆ ಹೋದರು. ಅಲ್ಲಿ ಅವರು ಮತ್ತೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, ಅವರು ತಮ್ಮ ಹಾಲಿವುಡ್ ಪ್ರಯಾಣದ ಬಗ್ಗೆ ಆಘಾತಕಾರಿ ವಿಷಯ ಹೇಳಿದ್ದಾರೆ. ನಾನು ಎಂದಿಗೂ ಬಾಲಿವುಡ್ ಬಿಡಲು ಬಯಸಲಿಲ್ಲ, ಆದರೆ ಹೊರಗೆ ಅವಕಾಶಗಳನ್ನು ಹುಡುಕಲು ನನ್ನನ್ನು ಬಲವಂತವಾಗಿ ಒತ್ತಾಯಿಸಲಾಯಿತು ಎಂದು ಪ್ರಿಯಾಂಕಾ ಹೇಳಿದ್ದಾರೆ.
ಬಾಲಿವುಡ್‌ನಿಂದ ಹಾಲಿವುಡ್‌ಗೆ ಪ್ರಯಾಣ ಮಾಡಿದ ಬಗ್ಗೆ ಪ್ರಿಯಾಂಕಾ ಮುಕ್ತವಾಗಿ ಮಾತನಾಡಿದರು.
‘ನಾನು ಬಾಲಿವುಡ್ ಬಿಡಲು ಎಂದಿಗೂ ಬಯಸಿರಲಿಲ್ಲ. ನಾನು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಗ, ಅದಕ್ಕೆ ಸಾಕಷ್ಟು ಲಿಮಿಟೇಷನ್ ಇದೆ ಎನಿಸಿತು. ನಾನು ಏಳ್ಗೆ ಕಾಣಲು ಬಯಸಿದ್ದೆ. ಕಲಾವಿದನಾಗಿ ಅವಕಾಶಗಳನ್ನು ಹುಡುಕಲು ನನ್ನ ಮೇಲೆ ಒತ್ತಡವಿತ್ತು. ನಾನು ಅಮೆರಿಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ’ ಎಂದಿದ್ದಾರೆ ಅವರು.
‘ನಮ್ಮ ಭಾರತೀಯ ಚಲನಚಿತ್ರಗಳು ನನಗೆ ತುಂಬಾ ಇಷ್ಟ. ವಾರಣಾಸಿ ಚಿತ್ರದ ಮೂಲಕ ಭಾರತಕ್ಕೆ ಮರಳುತ್ತಿದ್ದೇನೆ. ಈ ಬಗ್ಗೆ ನನಗೆ ತುಂಬಾ ಸಂತೋಷ ಇದೆ. ನಾನು ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗಿಲ್ಲ. ನಾನು ಎಂದಿಗೂ ಆಯ್ಕೆ ಮಾಡಿಲ್ಲ. ನಾನು ಎರಡರಲ್ಲೂ ಆ್ಯಕ್ಟೀವ್ ಆಗಿದ್ದೇನೆ. ಎರಡೂ ಕಡೆ ಕೆಲಸ ಮಾಡಲು ನನಗೆ ಇಷ್ಟ’ ಎಂದು ಪ್ರಿಯಾಂಕಾ ಹೇಳಿದರು.ಎರಡೂ ಸ್ಥಳಗಳಲ್ಲಿ ಕೆಲಸ ಮಾಡೋದು ಎಂದರೆ ಖುಷಿ ಎಂದಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್
ಪ್ರಿಯಾಂಕಾ, ನಿಕ್ ಜೋನಸ್ನ ವಿವಾಹ ಆಗಿದ್ದಾರೆ. ಅವರು ಹಾಲಿವುಡ್‌ನಲ್ಲಿ ಅವಕಾಶಗಳನ್ನು ಹುಡುಕಲು ಪ್ರಾರಂಭಿಸಿದರು. ಆ ಬಳಿಕ ಅಲ್ಲಿಯೇ ಸೆಟಲ್ ಆದರು. ಮಹೇಶ್ ಬಾಬು ನಟನೆಯ ‘ವಾರಣಾಸಿ’ ಸಿನಿಮಾಗೆ ನಾಯಕಿ. ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.