ಆ್ಯಕ್ಷನ್, ಸೈನ್ಸ್ ಫಿಕ್ಷನ್ ಮತ್ತು ಅಡ್ವೆಂಚರಸ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುವುದು ಹಾಲಿವುಡ್ ಸಿನಿಮಾಗಳು. ಅಂಥವರಿಗಾಗಿ ಈ ವಾರ ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ಸಿನಿಮಾ ಬಿಡುಗಡೆ ಆಗಿದೆ. ಅಕ್ಟೋಬರ್ 24ರಂದು ತೆರೆಕಂಡಿರುವ ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಸೈನ್ಸ್ ಫಿಕ್ಷನ್ ಕಹಾನಿ ಇರುವ ಈ ಸಿನಿಮಾದ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ಕೇಳಿಬರುತ್ತಿದೆ. ಹಾಲಿವುಡ್ ಸಿನಿಪ್ರಿಯರಿಗೆ ‘ವೆನಮ್’ ಫ್ರಾಂಚೈಸ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಈ ಮೊದಲು ಎರಡು ಪಾರ್ಟ್ಗಳು ಅದ್ಭುತ ಯಶಸ್ಸು ಕಂಡಿದ್ದವು. ಈಗ ಈ ಫ್ರಾಂಚೈನ್ನ ಕೊನೆಯ ಸಿನಿಮಾ ರಿಲೀಸ್ ಆಗಿದೆ.
‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ಸಿನಿಮಾ ಕೊನೆಯ ಫ್ರಾಂಚೈಸ್ ಎಂಬ ಕಾರಣದಿಂದಲೂ ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಮೂಡಿತ್ತು. ಈ ಮೊದಲಿನ 2 ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ, ಎಡ್ಡಿ ಬ್ರಾಕ್ ಹಾಗೂ ವೆನಮ್ ಕಥೆ ಅಂತಿಮವಾಗಿ ಹೇಗೆ ಕೊನೆಯಾಗುತ್ತದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದರು. ಈಗ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಸಿಗುತ್ತಿದೆ.
ಬಿಡುಗಡೆಗೂ ಮುನ್ನವೇ ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ಹೈಪ್ ಕ್ರಿಯೇಟ್ ಮಾಡಿತ್ತು. ಈ ಚಿತ್ರದ ಪ್ರೀಮಿಯರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿತ್ತು. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಮೂಲಕವೂ ಈ ಸಿನಿಮಾ ದಾಖಲೆ ಬರೆಯಿತು. ಈ ವಾರ ತೆರೆಗೆ ಬಂದಿರುವ ಸಿನಿಮಾವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಘಟಾನುಘಟಿ ಪಾತ್ರವರ್ಗ, ಅತ್ಯಾಕರ್ಷಕ ಗ್ರಾಫಿಕ್ಸ್, ಮೈನವಿರೇಳಿಸುವಂತವ ಆ್ಯಕ್ಷನ್ ಕಾರಣದಿಂದ ಈ ಸಿನಿಮಾದ ಬಗ್ಗೆ ಟಾಕ್ ಹೆಚ್ಚಾಗಿದೆ.
ಇದನ್ನೂ ಓದಿ: 80ಕ್ಕೂ ಅಧಿಕ ಅತ್ಯಾಚಾರ ಆರೋಪ ಇರುವ ನಿರ್ಮಾಪಕನಿಗೆ ಈಗ ಮೈತುಂಬ ಕಾಯಿಲೆ
ಟಾಮ್ ಹಾರ್ಡಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ನಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ಸಿಗುತ್ತಿದೆ. ಟಾಮ್ ಹಾರ್ಡಿ ಅವರು ವೆನಮ್ ಪಾತ್ರದಲ್ಲಿ ಜೀವಿಸಿದ್ದಾರೆ. ಈ ಚಿತ್ರದಲ್ಲಿ ಚಿವೆಟೆಲ್ ಎಜಿಯೋಫೋರ್, ರಿಸ್ ಇಫಾನ್ಸ್, ಜುನೋ ಟೆಂಪಲ್, ಪೆಗ್ಗಿ ಲೂ ಮುಂತಾದವರು ನಟಿಸಿದ್ದಾರೆ. ಅವಿ ಅರಾದ್, ಮ್ಯಾಟ್ ಟೋಲ್ಮಾಚ್, ಆಮಿ ಪಾಸ್ಕಲ್, ಕೆಲ್ಲಿ ಮಾರ್ಸೆಲ್, ಟಾಮ್ ಹಾರ್ಡಿ ಮತ್ತು ಹಚ್ ಪಾರ್ಕರ್ ನಿರ್ಮಾಣದ ಈ ಸಿನಿಮಾವನ್ನು ಕೆಲ್ಲಿ ಮಾರ್ಸೆಲ್ ಅವರು ನಿರ್ದೇಶಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.