‘ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾಗಿಂತ ನಾನೇ ಉತ್ತಮವಾಗಿ ಮಾಡುತ್ತಿದ್ದೆ’; ಕೊಂಕು ತೆಗೆದ ತಮಿಳು ನಟಿ

Rashmika Mandanna: ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಇರುವ ನಟಿಯರ ಪೈಕಿ ರಶ್ಮಿಕಾ ಮುಂಚೂಣಿಯಲ್ಲಿದ್ದಾರೆ. ಅವರ ಪಾತ್ರದ ಬಗ್ಗೆ ಕೊಂಕು ತೆಗೆಯಲಾಗಿದೆ.

‘ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾಗಿಂತ ನಾನೇ ಉತ್ತಮವಾಗಿ ಮಾಡುತ್ತಿದ್ದೆ’; ಕೊಂಕು ತೆಗೆದ ತಮಿಳು ನಟಿ
ರಶ್ಮಿಕಾ-ಐಶ್ವರ್ಯಾ

Updated on: May 16, 2023 | 10:34 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಸೀಕ್ವೆಲ್​ಗಾಗಿ ಅಭಿಮಾನಿಗಳು ಕಾದಿದ್ದಾರೆ. ರಶ್ಮಿಕಾ ಮಂದಣ್ಣ ಮಾಡಿದ ಶ್ರಿವಲ್ಲಿ (Srivalli) ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರ ಪಾತ್ರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಟಾಲಿವುಡ್​ ನಟಿಯೊಬ್ಬರು ರಶ್ಮಿಕಾ ಮಂದಣ್ಣ ಬಗ್ಗೆ ಕೊಂಕು ತೆಗೆದಿದ್ದಾರೆ. ಅವರಿಗಿಂತ ನಾನೇ ಉತ್ತಮವಾಗಿ ಆ ಪಾತ್ರ ಮಾಡುತ್ತಿದ್ದೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಇರುವ ನಟಿಯರ ಪೈಕಿ ರಶ್ಮಿಕಾ ಮುಂಚೂಣಿಯಲ್ಲಿದ್ದಾರೆ. ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ‘ಪುಷ್ಪ’ ಚಿತ್ರದ ಶ್ರೀವಲ್ಲಿ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರು ಈ ಚಿತ್ರದ ಹಾಡಿನಲ್ಲಿ ಹಾಕಿರೋ ಸ್ಟೆಪ್ ಸಾಕಷ್ಟು ಗಮನ ಸೆಳೆದಿದೆ. ಅನೇಕ ಸೆಲೆಬ್ರಿಟಿಗಳು ಈ ಪಾತ್ರವನ್ನು ಹೊಗಳಿದ್ದಾರೆ. ತಮಿಳು ಸಿನಿಮಾ ಮಾಡಿ ಫೇಮಸ್ ಆಗಿರುವ ಐಶ್ವರ್ಯಾ ರಾಜೇಶ್ ಈ ಬಗ್ಗೆ ಕ್ಯಾತೆ ತೆಗೆದಿದ್ದಾರೆ.

ಐಶ್ವರ್ಯಾ ರಾಜೇಶ್ ನಟನೆಯ ‘ಫರ್ಹಾನಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ತಮಿಳಿನ ಈ ಸಿನಿಮಾ ಪ್ರಚಾರದಲ್ಲಿ ಐಶ್ವರ್ಯಾ ರಾಜೇಶ್ ಬ್ಯುಸಿ ಆಗಿದ್ದಾರೆ. ಅವರಿಗೆ ತೆಲುಗು ಸಿನಿಮಾ ಬಗ್ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.. ‘ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ನಾನು ಇಷ್ಟಪಟ್ಟಿದ್ದೆ. ರಶ್ಮಿಕಾ ಉತ್ತಮವಾಗಿ ನಟಿಸಿದ್ದಾರೆ. ಆದರೆ, ಅವರಿಗಿಂತ ಉತ್ತಮವಾಗಿ ನಾನು ನಟಿಸುತ್ತಿದ್ದೆ’ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ.

ಇದನ್ನೂ ಓದಿ:  ‘ನೀನು ನನ್ನ ಫಾರೆವರ್ ಲವರ್’; ಪ್ರೀತಿ ಹೊರಹಾಕಿದ ರಶ್ಮಿಕಾ ಮಂದಣ್ಣ

ಈ ಹೇಳಿಕೆ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ರಶ್ಮಿಕಾ ಅಭಿಮಾನಿಗಳು ಐಶ್ವರ್ಯಾ ಅವರನ್ನು ಟೀಕೆ ಮಾಡುತ್ತಿದ್ದಾರೆ. ಆ ಪಾತ್ರಕ್ಕೆ ರಶ್ಮಿಕಾ ಸೂಕ್ತ ಎಂದು ಅವರು ಹೇಳಿದ್ದಾರೆ. ಸದ್ಯ ಐಶ್ವರ್ಯಾ ರಾಜೇಶ್ ಅವರು 8 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ತಮಿಳು ಸಿನಿಮಾ ಕೆಲಸಗಳ ಜೊತೆಗೆ ಮಲಯಾಳಂ ಮೊದಲಾದ ಸಿನಿಮಾ ಕೆಲಸಗಳಲ್ಲೂ ಅವರು ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:31 am, Tue, 16 May 23