ಅಟ್ಲಿ ವಿಚಾರದಲ್ಲಿ ನಯನತಾರಾಗಿಲ್ಲ ಮುನಿಸು; ಒಂದೇ ಪೋಸ್ಟ್​ನಿಂದ ಎಲ್ಲದಕ್ಕೂ ಉತ್ತರ

‘ದೀಪಿಕಾನ ಹೈಲೈಟ್ ಮಾಡಿ ನನ್ನ ಸೈಡ್​ಲೈನ್ ಮಾಡಲಾಗಿದೆ’ ಎಂದು ನಯನತಾರಾ ದೂರಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಆ ರೀತಿ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ನಯನತಾರಾ ಹಾಗೂ ಅಟ್ಲಿಯ ಮಧ್ಯೆ ಇರುವ ಅನ್ಯೋನ್ಯತೆ ಹಾಗೆಯೇ ಇದೆ. ಇದಕ್ಕೆ ನಯನತಾರಾ ಮಾಡಿರುವ ಪೋಸ್ಟ್ ಸಾಕ್ಷಿ.

ಅಟ್ಲಿ ವಿಚಾರದಲ್ಲಿ ನಯನತಾರಾಗಿಲ್ಲ ಮುನಿಸು; ಒಂದೇ ಪೋಸ್ಟ್​ನಿಂದ ಎಲ್ಲದಕ್ಕೂ ಉತ್ತರ
ನಯನತಾರಾ ಅಟ್ಲೀ ಶಾರುಖ್

Updated on: Sep 22, 2023 | 7:39 AM

ಚಿತ್ರರಂಗ ಎಂಬುದು ರಂಗು ರಂಗಿನ ದುನಿಯಾ. ಇಲ್ಲಿ ಎಷ್ಟು ಸುದ್ದಿಗಳು ಹುಟ್ಟಿಕೊಳ್ಳುತ್ತದೆಯೋ ಅದಕ್ಕಿಂತ ಹೆಚ್ಚು ಅಂತೆಕಂತೆಗಳು ಹರಿದಾಡುತ್ತವೆ. ಸಣ್ಣ ವಿಚಾರ ಸಿಕ್ಕರೂ ಅದನ್ನು ದೊಡ್ಡದು ಮಾಡಲಾಗುತ್ತದೆ. ಇತ್ತೀಚೆಗೆ ಅದೇ ರೀತಿ ಆಗಿತ್ತು. ನಿರ್ದೇಶಕ ಅಟ್ಲಿ (Atlee) ಹಾಗೂ ನಯನತಾರಾ ಮಧ್ಯೆ ಯಾವುದೂ ಸರಿ ಇಲ್ಲ ಎಂದು ವರದಿ ಆಗಿತ್ತು. ಆದರೆ, ಒಂದೇ ಒಂದು ಸ್ಟೇಟಸ್​ನಿಂದ ನಯನತಾರಾ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಅಷ್ಟಕ್ಕೂ ಏನಿದು ಸುದ್ದಿ? ನಯನತಾರಾ (Nayanthara) ಮಾಡಿದ ಪೋಸ್ಟ್ ಏನು ಎಂಬುದಕ್ಕೆ ಈ ಸ್ಟೋರಿಯಲ್ಲಿದೆ ಉತ್ತರ.

‘ಜವಾನ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ ನಟಿಸಿದ್ದಾರೆ. ಶಾರುಖ್ ಖಾನ್ ಅವರದ್ದು ದ್ವಿಪಾತ್ರ. ಈ ಕಾರಣದಿಂದ ದೀಪಿಕಾ ಪಡುಕೋಣೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ‘ದೀಪಿಕಾನ ಹೈಲೈಟ್ ಮಾಡಿ ನನ್ನ ಸೈಡ್​ಲೈನ್ ಮಾಡಲಾಗಿದೆ’ ಎಂದು ನಯನತಾರಾ ದೂರಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಈ ಸುದ್ದಿ ಇಷ್ಟಕ್ಕೆ ನಿಂತಿಲ್ಲ. ನಯನತಾರಾ ಬಾಲಿವುಡ್​ನಲ್ಲಿ ಸಿನಿಮಾ ಮಾಡದೇ ಇರಲು ನಿರ್ಧರಿಸಿದ್ದಾರೆ ಎಂದೂ ಹೇಳಲಾಯಿತು. ಆದರೆ, ಆ ರೀತಿ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ನಯನತಾರಾ ಹಾಗೂ ಅಟ್ಲಿಯ ಮಧ್ಯೆ ಇರುವ ಅನ್ಯೋನ್ಯತೆ ಹಾಗೆಯೇ ಇದೆ. ಇದಕ್ಕೆ ನಯನತಾರಾ ಮಾಡಿರುವ ಪೋಸ್ಟ್ ಸಾಕ್ಷಿ.

ಸೆಪ್ಟೆಂಬರ್ 21 ಅಟ್ಲಿ ಬರ್ತ್​ಡೇ. ಇದಕ್ಕೆ ನಯನತಾರಾ ಸ್ಟೇಟಸ್ ಒಂದನ್ನು ಹಾಕಿದ್ದಾರೆ. ಅಟ್ಲಿ ಜೊತೆ ಇರುವ ಫೋಟೋಗಳು ಇದರಲ್ಲಿ ಇವೆ. ‘ಹುಟ್ಟುಹಬ್ಬದ ಶುಭಾಶಯಗಳು ಅಟ್ಲಿ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಅವರು ಬರೆದುಕೊಂಡಿದ್ದಾರೆ. ವದಂತಿಗಳನ್ನು ತಳ್ಳಿ ಹಾಕಲು ಇದೊಂದು ಸ್ಟೇಟಸ್ ಸಾಕು ಎಂದು ಅಭಿಮಾನಿಗಳು ಬರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿ ಕಾನ್​ ಚಿತ್ರೋತ್ಸವದಲ್ಲಿ ಭಾಗಿಯಾದ ಅಟ್ಲಿ ಕುಮಾರ್​-ಪ್ರಿಯಾ ದಂಪತಿ; ಫೋಟೋ ವೈರಲ್​

ಅಟ್ಲಿ ಹಾಗೂ ನಯನತಾರಾ ಗೆಳೆತನ ಇಂದು ನಿನ್ನೆಯದಲ್ಲ. ಅಟ್ಲಿ ನಿರ್ದೇಶನದ ಮೊದಲ ಸಿನಿಮಾ ‘ರಾಜಾ ರಾಣಿ’ಯಲ್ಲಿ ನಯನತಾರಾ ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 2013ರಲ್ಲಿ. ಆ ಬಳಿಕ ‘ಬಿಗಿಲ್’ ಚಿತ್ರದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದರು. ಈಗ ‘ಜವಾನ್’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us