AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಟ್ಲಿ-ಶಾರುಖ್ ನಿರ್ಧಾರದ ಬಗ್ಗೆ ನಯನತಾರಾ ಅಸಮಾಧಾನ; ಬಾಲಿವುಡ್ ಸಿನಿಮಾ ಮಾಡದಿರಲು ನಿರ್ಧಾರ

‘ಜವಾನ್’ ಸಿನಿಮಾ ಸೆಪ್ಟೆಂಬರ್ 07ರಂದು ರಿಲೀಸ್ ಆಗಿದೆ. ಈ ಚಿತ್ರ ಎರಡು ವಾರಗಳಲ್ಲಿ ವಿಶ್ವಾದ್ಯಂತ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಎಲ್ಲ ಕಡೆಗಳಿಂದ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಹೊಗಳಲಾಗುತ್ತಿದೆ. ಆದರೆ, ನಯನತಾರ ಅವರಿಗೆ ವೈಯಕ್ತಿಕವಾಗಿ ಬೇಸರ ಆಗಿದೆಯಂತೆ.

ಅಟ್ಲಿ-ಶಾರುಖ್ ನಿರ್ಧಾರದ ಬಗ್ಗೆ ನಯನತಾರಾ ಅಸಮಾಧಾನ; ಬಾಲಿವುಡ್ ಸಿನಿಮಾ ಮಾಡದಿರಲು ನಿರ್ಧಾರ
ನಯನತಾರಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Sep 21, 2023 | 10:32 AM

Share

ನಟಿ ನಯತಾರಾ (Nayanthara) ಅವರು ಇಷ್ಟು ವರ್ಷಗಳ ಕಾಲ ಬಾಲಿವುಡ್ ಸಿನಿಮಾ ಮಾಡಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ‘ಜವಾನ್’ ಸಿನಿಮಾದಲ್ಲಿ (Jawan Movie) ನಟಿಸುವ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ಪಾತ್ರದ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ನಯನತಾರಾಗೆ ಈ ವಿಚಾರದಲ್ಲಿ ಖುಷಿ ಇಲ್ಲ. ನಿರ್ದೇಶಕ ಅಟ್ಲಿ ಹೇಳಿದ್ದೇ ಒಂದು ಆ ಬಳಿಕ ಮಾಡಿದ್ದೇ ಒಂದು ಎಂದು ಅವರು ಅಸಮಾಧಾನ ಹೊರಹಾಕಿದ್ದಾರಂತೆ. ಅಷ್ಟೇ ಅಲ್ಲ, ಇನ್ನುಮುಂದೆ ಯಾವುದೇ ಬಾಲಿವುಡ್ ಸಿನಿಮಾ ಮಾಡದಿರಲು ಅವರು ನಿರ್ಧರಿಸಿದ್ದಾರೆ.

‘ಜವಾನ್’ ಸಿನಿಮಾ ಸೆಪ್ಟೆಂಬರ್ 07ರಂದು ರಿಲೀಸ್ ಆಗಿದೆ. ಈ ಚಿತ್ರ ಎರಡು ವಾರಗಳಲ್ಲಿ ವಿಶ್ವಾದ್ಯಂತ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಭಾರತದಲ್ಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಎಲ್ಲ ಕಡೆಗಳಿಂದ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಹೊಗಳಲಾಗುತ್ತಿದೆ. ಆದರೆ, ನಯನತಾರ ಅವರಿಗೆ ವೈಯಕ್ತಿಕವಾಗಿ ಬೇಸರ ಆಗಿದೆಯಂತೆ.

ನಯನಾತಾರಾ ಪಾತ್ರ ಹೇಗೆ ಹೈಲೈಟ್ ಆಗಿದೆಯೋ ಅದೇ ರೀತಿಯಲ್ಲಿ ದೀಪಿಕಾ ಪಡುಕೋಣೆ ಪಾತ್ರವೂ ಗಮನ ಸೆಳೆದಿದೆ. ಈ ಚಿತ್ರದಲ್ಲಿ ದೀಪಿಕಾ ಮಾಡಿರೋದು ಅತಿಥಿ ಪಾತ್ರ. ಆದರೆ, ಅವರ ಪಾತ್ರವನ್ನು ಅಟ್ಲಿ ಹಾಗೂ ಶಾರುಖ್ ಖಾನ್ ಹೆಚ್ಚು ಹೈಲೈಟ್ ಮಾಡಿದ್ದಾರೆ ಎನ್ನುವುದು ನಯನತಾರಾ ಅಭಿಪ್ರಾಯ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಅಟ್ಲಿ ಹಾಗೂ ಶಾರುಖ್ ಖಾನ್ ಬಳಿ ಈ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

‘ನನ್ನ ಪಾತ್ರ ಇನ್ನೂ ಹೈಲೈಟ್ ಆಗಬೇಕಿತ್ತು. ಹಲವು ಭಾಗಗಳನ್ನು ಕತ್ತರಿಸಲಾಗಿದೆ. ದೀಪಿಕಾ ಪಾತ್ರವನ್ನು  ಹೆಚ್ಚು ಹೈಲೈಟ್ ಮಾಡಲಾಗಿದೆ. ಇದು ಶಾರುಖ್ ಹಾಗೂ ದೀಪಿಕಾ ಸಿನಿಮಾದ ರೀತಿ ಕಾಣುತ್ತದೆ’ ಎಂದು ನಯನತಾರಾ ಅವರು ಅಭಿಪ್ರಾಯಪಟ್ಟಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ: Viral Video: ಜವಾನ್​ ಜಮಾನಾ: ವೆಂಟಿಲೇಟರ್​ನೊಂದಿಗೆ ಶಾರುಖ್​ಗೋಸ್ಕರ ಥಿಯೇಟರಿಗೆ ಬಂದ ದಿವ್ಯಾಂಗ ವ್ಯಕ್ತಿ

ಇತ್ತೀಚೆಗೆ ಮುಂಬೈನಲ್ಲಿ ‘ಜವಾನ್’ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಆದರೆ, ಇದರಲ್ಲಿ ನಯನತಾರಾ ಅವರು ಭಾಗಿ ಆಗಿರಲಿಲ್ಲ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಅನಿರುದ್ಧ್ ರವಿಚಂದರ್, ಅಟ್ಲಿ, ಸಾನ್ಯಾ ಮಲ್ಹೋತ್ರಾ ಹಾಗೂ ರಿಧಿ ದೋಗ್ರಾ ಭಾಗವಹಿಸಿದ್ದರು. ಅಸಮಾಧಾನ ಹಿನ್ನೆಲೆಯಿಂದಲೇ ನಯನತಾರಾ ಕಾರ್ಯಕ್ರಮಕ್ಕೆ ಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:13 am, Thu, 21 September 23