AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್ ಗಳಿಕೆಯಲ್ಲಿ ‘ಜವಾನ್​’ ಚಿತ್ರವನ್ನು ಹಿಂದಿಕ್ಕಲಿದೆ ‘ಟೈಗರ್ 3’ ಸಿನಿಮಾ?

‘ಟೈಗರ್ 3’ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ‘ಏಕ್ ಥಾ ಟೈಗರ್’ ಹಾಗೂ ‘ಟೈಗರ್ ಜಿಂದಾ ಹೈ’ ಚಿತ್ರದ ಮುಂದುವರಿದ ಭಾಗವಾಗಿ ‘ಟೈಗರ್ 3’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ‘ಜವಾನ್’ ಚಿತ್ರದ ಕಲೆಕ್ಷನ್ ಹಿಂದಿಕ್ಕಲಿದೆಯೇ ಎಂಬ ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಮೂಡಿದೆ.

ಬಾಕ್ಸ್ ಆಫೀಸ್ ಗಳಿಕೆಯಲ್ಲಿ ‘ಜವಾನ್​’ ಚಿತ್ರವನ್ನು ಹಿಂದಿಕ್ಕಲಿದೆ ‘ಟೈಗರ್ 3’ ಸಿನಿಮಾ?
ಸಲ್ಮಾನ್ ಖಾನ್-ಕತ್ರಿನಾ
ರಾಜೇಶ್ ದುಗ್ಗುಮನೆ
|

Updated on: Sep 21, 2023 | 1:16 PM

Share

ಬಾಕ್ಸ್ ಆಫೀಸ್​ನಲ್ಲಿ ಈ ವರ್ಷ ಹಲವು ಸಿನಿಮಾಗಳು ಗೆದ್ದು ಬೀಗಿವೆ. ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಚಿತ್ರಗಳು ಕೂಡ ಇವೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಿದವರಿಗೆ ಈ ಬೆಳವಣಿಗೆಯಿಂದ ಹೊಸ ಹುಮ್ಮಸ್ಸು ಬಂದಿದೆ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ (Tiger 3 Movie) ಸಿನಿಮಾ ಕೂಡ ಬಾಕ್ಸ್ ಆಫೀಸ್​ನಲ್ಲಿ ಅಬ್ಬರದ ಕಲೆಕ್ಷನ್ ಮಾಡಲು ರೆಡಿ ಆಗಿದೆ. ಸಲ್ಮಾನ್ ಖಾನ್ ಅವರು ಈ ಚಿತ್ರದ ಮೂಲಕ ಒಂದು ದೊಡ್ಡ ಗೆಲುವನ್ನು ಕಾಣುವ ಭರವಸೆಯಲ್ಲಿ ಇದ್ದಾರೆ.

‘ಟೈಗರ್ 3’ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ‘ಏಕ್ ಥಾ ಟೈಗರ್’ ಹಾಗೂ ‘ಟೈಗರ್ ಜಿಂದಾ ಹೈ’ ಚಿತ್ರದ ಮುಂದುವರಿದ ಭಾಗವಾಗಿ ‘ಟೈಗರ್ 3’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ‘ಜವಾನ್’ ಚಿತ್ರದ ಕಲೆಕ್ಷನ್ ಹಿಂದಿಕ್ಕಲಿದೆಯೇ ಎಂಬ ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಮೂಡಿದೆ.

‘ಜವಾನ್’ ಸಿನಿಮಾ ಶೀಘ್ರವೇ 1000 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಒಂದೊಮ್ಮೆ ಹಾಗಾದರೆ, ಅವರ ನಟನೆಯ ಎರಡು ಸಿನಿಮಾಗಳು ಒಂದೇ ವರ್ಷ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದಂತೆ ಆಗಲಿದೆ. ‘ಪಟಾಣ್’, ‘ಜವಾನ್’ ದಾಖಲೆಯನ್ನು ಮುರಿಯಲು ಸಲ್ಮಾನ್ ಖಾನ್ ಬಳಿ ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು, ಅಂದುಕೊಂಡಿದ್ದಕ್ಕಿಂತ ಮೊದಲೇ ‘ಟೈಗರ್ 3’ ಚಿತ್ರದ ಪ್ರಚಾರದಲ್ಲಿ ತಂಡ ಭಾಗಿ ಆಗಲಿದೆ ಎನ್ನಲಾಗುತ್ತಿದೆ. ಬ್ಯಾಕ್​ ಟು ಬ್ಯಾಕ್ ಟೀಸರ್ ಹಾಗೂ ಟ್ರೇಲರ್ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೊದಲು ರಿಲೀಸ್ ಆದ ‘ಜವಾನ್’ ಸಿನಿಮಾಗೆ ಭರ್ಜರಿ ಹೈಪ್ ಸೃಷ್ಟಿ ಆಯಿತು. ಈ ರೀತಿಯ ಹೈಪ್ ಹುಟ್ಟಿಕೊಂಡರೆ ಸಹಜವಾಗಿಯೇ ಸಿನಿಮಾದ ಗಳಿಕೆ ಹೆಚ್ಚುತ್ತದೆ. ಇದೇ ತಂತ್ರವನ್ನು ‘ಟೈಗರ್ 3’ ತಂಡ ಕೂಡ ಮಾಡಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದೀಪಾವಳಿಗೆ ಬರಲಿದೆ ‘ಟೈಗರ್ 3’: ಕನ್ನಡ ಪ್ರೇಕ್ಷಕರನ್ನು ನಿರಾಸೆಗೊಳಿಸಿದ ಸಲ್ಮಾನ್ ಖಾನ್

‘ಟೈಗರ್ 3’ ಸಿನಿಮಾಗೆ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡುತ್ತಿದೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More