
ಕಮಲ್ ಹಾಸನ್ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕಂಡಿದ್ದರು. ಅವರ ನಟನೆಯ ‘ವಿಕ್ರಮ್’, ‘ಕಲ್ಕಿ 2898 ಎಡಿ’ ಚಿತ್ರಗಳು ಮೆಚ್ಚುಗೆ ಪಡೆದಿದ್ದವು. ಆದರೆ, ಈಗ ‘ಇಂಡಿಯನ್ 2’ ಚಿತ್ರ ರಿಲೀಸ್ ಆಗಿ ಸೋತಿದೆ. ರಿಲೀಸ್ ಆಗಿ ವಾರ ಕಳೆಯುತ್ತಾ ಬಂದರೂ ಸಿನಿಮಾ 70 ಕೋಟಿ ರೂಪಾಯಿ ಗಳಿಕೆ ಮಾಡಿಲ್ಲ. ಹೀಗಾಗಿ, ಸಿನಿಮಾಗೆ 15 ನಿಮಿಷ ಕತ್ತರಿ ಹಾಕುವ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಈ ಮೂಲಕ ಚಿತ್ರವನ್ನು ಮತ್ತಷ್ಟು ಕ್ರಿಸ್ಪಿ ಮಾಡಿದೆ.
ಇಂದಿನ ಸಿನಿಮಾಗಳ ಅವಧಿ ಎರಡರಿಂದ ಎರಡೂವರೆ ಗಂಟೆ ಇರುತ್ತದೆ. ಆದರೆ, ‘ಇಂಡಿಯನ್ 2’ ಸಿನಿಮಾ ಬರೋಬ್ಬರಿ 3 ಗಂಟೆ ಇತ್ತು. ಏನೂ ವಿಷಯವೇ ಇಲ್ಲದೆ ಸುಮ್ಮನೆ ರಬ್ಬರ್ ರೀತಿಯಲ್ಲಿ ಸಿನಿಮಾನ ಎಳೆಯಲಾಗಿದೆ ಎಂಬ ಆರೋಪ ಈ ಸಿನಿಮಾ ಮೇಲೆ ಬಂದಿತ್ತು. ಹೀಗಾಗಿ, ಚಿತ್ರಕ್ಕೆ 15 ನಿಮಿಷ ಕತ್ತರಿ ಹಾಕುವ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಕಲೆಕ್ಷನ್ ಇಲ್ಲದ ಕಾರಣದಿಂದಲೇ ಈ ರೀತಿ ಮಾಡಲಾಗಿದೆ.
ಈಗಾಗಲೇ ಕತ್ತರಿ ಹಾಕಲ್ಪಟ್ಟ ವರ್ಷನ್ ಥಿಯೇಟರ್ಗಳಲ್ಲಿ ಸಿನಿಮಾ ಪ್ರಸಾರ ಕಾಣುತ್ತಿದೆ. ಆರಂಭದಿಂದಲೇ ‘ಇಂಡಿಯನ್ 2’ ಸಿನಿಮಾ ಬಗ್ಗೆ ಬ್ಯಾಡ್ ಟಾಕ್ ಶುರುವಾಗಿದೆ. ಹೀಗಿರುವಾಗ ಮತ್ತೆ ಸಿನಿಮಾ ನೋಡಲು ಹೋಗಿ ಎಂದರೆ ಯಾರೂ ಹೋಗುವುದಿಲ್ಲ. ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಬಹುಶಃ ಸಿನಿಮಾಗೆ ಪಾಸಿಟಿವ್ ಟಾಕ್ ಶುರುವಾಗುತ್ತಿತ್ತೇನೋ.
Tickets booked on 1st Wednesday on BookMyShow (Tamil films, 2024)#Ayalaan – 61.17k#Indian2 – 37.34k ✔️#CaptainMiller – 28.69k #LalSalaam – 8.13k
— 𝗙𝗶𝗹𝗺𝘆 𝗩𝗶𝗲𝘄 (@filmy_view) July 18, 2024
ಇದನ್ನೂ ಓದಿ: ‘ಇಂಡಿಯನ್ 2’ ಚಿತ್ರಕ್ಕೆ ಹಣ ಹಾಕಿ ಹಿಂತೆಗೆದಿದ್ದ ಖ್ಯಾತ ನಿರ್ಮಾಪಕ; ಹೊರ ಬಂದಿದ್ದೇಕೆ?
‘ಇಂಡಿಯನ್ 2’ ಚಿತ್ರಕ್ಕೆ ಸಿಕ್ಕ ಮಿಶ್ರಪ್ರತಿಕ್ರಿಯೆ ಇಂದ ‘ಕಲ್ಕಿ 2898 ಎಡಿ’ ಸಿನಿಮಾಗೆ ಸಹಕಾರಿ ಆಗಿದೆ. ಅನೇಕ ಕಡೆಗಳಲ್ಲಿ ‘ಇಂಡಿಯನ್ 2’ ಸಿನಿಮಾ ರಿಲೀಸ್ ಆಗುವಾಗ ‘ಕಲ್ಕಿ 2898 ಎಡಿ’ ಚಿತ್ರವನ್ನು ತೆಗೆಯಲಾಗಿತ್ತು. ಅವರೆಲ್ಲರೂ ಈಗ ಮತ್ತೆ ‘ಕಲ್ಕಿ 2898 ಎಡಿ’ ಚಿತ್ರವನ್ನೇ ಪ್ರಸಾರ ಮಾಡಲು ಆರಂಭಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.