‘ಜೈಲರ್ 2’ ಘೋಷಣೆ ಇಂದು, ಈ ಬಾರಿಯೂ ಇರ್ತಾರಾ ಶಿವಣ್ಣ

|

Updated on: Jan 14, 2025 | 12:43 PM

Jailer 2: ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾದ ಟೀಸರ್ ಇಂದು (ಜನವರಿ 14) ಸಂಜೆ ಬಿಡುಗಡೆ ಆಗಲಿದೆ. 2023 ರಲ್ಲಿ ಬಿಡುಗಡೆ ಆಗಿದ್ದ ‘ಜೈಲರ್’ ಸಿನಿಮಾನಲ್ಲಿ ಶಿವಣ್ಣನ ಪಾತ್ರ ಬಹಳ ಹೈಲೆಟ್ ಆಗಿತ್ತು. ‘ಜೈಲರ್ 2’ ಸಿನಿಮಾದಲ್ಲಿಯು ಶಿವಣ್ಣ ಇರಲಿದ್ದಾರಾ ಎಂಬುದು ಕುತೂಹಲ ಕೆರಳಿಸಿದೆ.

‘ಜೈಲರ್ 2’ ಘೋಷಣೆ ಇಂದು, ಈ ಬಾರಿಯೂ ಇರ್ತಾರಾ ಶಿವಣ್ಣ
Shiva Rajkumar
Follow us on

ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ 2023ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಸರಳವಾದ ಕತೆ ಹೊಂದಿದ್ದರು ಅದ್ಭುತವಾದ ಹಿನ್ನೆಲೆ ಸಂಗೀತ, ಹಾಡುಗಳು ಜೊತೆಗೆ ಅತಿಥಿ ಪಾತ್ರಗಳು ಸಿನಿಮಾ ಮೇಲೆ ಬೀರಿದ ಬಹುದೊಡ್ಡ ಪರಿಣಾಮದಿಂದಾಗಿ ಈ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಸತತ ಸೋಲು ಕಂಡಿದ್ದ ರಜನೀಕಾಂತ್ ಅವರಿಗೆ ಭಾರಿ ದೊಡ್ಡ ಯಶಸ್ಸನ್ನು ಈ ಸಿನಿಮಾ ತಂದುಕೊಟ್ಟಿತು. ಇದೀಗ ಅದೇ ತಂಡ ‘ಜೈಲರ್ 2’ ಸಿನಿಮಾ ಮಾಡುತ್ತಿದೆ. ಸಿನಿಮಾದ ಪ್ರೋಮೋ ಇಂದು ಬಿಡುಗಡೆ ಆಗಲಿದ್ದು, ಶಿವಣ್ಣನ ಅಭಿಮಾನಿಗಳು ಕಾತರದಿಂದ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದಾರೆ.

‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ನಾಯಕ, ಶಿವರಾಜ್ ಕುಮಾರ್, ಮೋಹನ್​ಲಾಲ್, ಜಾಕಿಶ್ರಾಫ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಮೂರು ಅತಿಥಿ ಪಾತ್ರಗಳಲ್ಲಿ ಶಿವಣ್ಣನ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಶಿವಣ್ಣ ಒಂದು ಕೈಯಲ್ಲಿ ಸಿಗರೇಟು, ಇನ್ನೊಂದು ಕೈಯಲ್ಲಿ ಟಿಶ್ಯೂ ಪೇಪರ್ ಹಿಡಿದು ಸ್ಟೈಲ್ ಆಗಿ ನಡೆದು ಬರವ ಸೀನ್​, ಇಡೀ ಚಿತ್ರದ ಹೈಲೆಟ್ ಆಗಿತ್ತು. ಸಿನಿಮಾ ನೋಡಿದ ಎಲ್ಲರೂ ಸಹ ರಜನೀಕಾಂತ್ ಜೊತೆಗೆ ಶಿವಣ್ಣನ ಪಾತ್ರವನ್ನು ಬಹುವಾಗಿ ಕೊಂಡಾಡಿದ್ದರು. ಇದೀಗ ‘ಜೈಲರ್ 2’ ಘೋಷಣೆಯಾಗಿದ್ದು, ಈ ಸಿನಿಮಾದಲ್ಲಿಯೂ ಶಿವಣ್ಣ ಇರಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.

ಮೂಲಗಳ ಪ್ರಕಾರ ‘ಜೈಲರ್ 2’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ‘ಜೈಲರ್’ ಸಿನಿಮಾದಲ್ಲಿ ‘ನರಸಿಂಹ’ ಪಾತ್ರದಲ್ಲಿ ಶಿವಣ್ಣ ನಟಿಸಿದ್ದರು, ‘ಜೈಲರ್ 2’ ಸಿನಿಮಾದಲ್ಲಿಯೂ ಅದೇ ಪಾತ್ರದಲ್ಲಿಯೇ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಸಹ ‘ಜೈಲರ್ 2’ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನುಳಿದಂತೆ ಮೋಹನ್​ಲಾಲ್, ಜಾಕಿಶ್ರಾಫ್ ಅವರುಗಳು ಸಹ ಇರಲಿದ್ದಾರಂತೆ.

ಇದನ್ನೂ ಓದಿ: ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ

‘ಜೈಲರ್’ ಸಿನಿಮಾವನ್ನು ಸನ್ ಪಿಕ್ಚರ್ಸ್​ ನಿರ್ಮಾಣ ಮಾಡಿತ್ತು. ‘ಜೈಲರ್ 2’ ಸಿನಿಮಾವನ್ನೂ ಅವರೇ ನಿರ್ಮಿಸಲಿದ್ದು, ನೆಲ್ಸನ್ ನಿರ್ದೇಶನ ಮಾಡಲಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಈ ಬಾರಿಯೂ ತಮನ್ನಾ ಭಾಟಿಯಾ ಅವರೇ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ರಜನೀಕಾಂತ್ ಪ್ರಸ್ತುತ ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೇನು ಮುಕ್ತಾಯ ಹಂತದಲ್ಲಿದೆ. ಬಳಿಕ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ. ಇಂದು (ಜನವರಿ 14) ಸಂಜೆ ‘ಜೈಲರ್ 2’ ಸಿನಿಮಾದ ಎರಡು ಟೀಸರ್ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:14 am, Tue, 14 January 25