ಎರಡನೇ ವಾರವೂ ತಗ್ಗದ ‘ಜೈಲರ್ 2’ ಟಿಕೆಟ್ ದರ; ತಮಿಳು ಚಿತ್ರದಿಂದ ಸುಲಿಗೆ

ಜೈಲರ್ 2 ಸಿನಿಮಾದ ಟಿಕೆಟ್ ಬೆಲೆ ಏರಿಕೆ ಎರಡನೇ ವಾರದಲ್ಲೂ ಮುಂದುವರಿದಿದೆ. ಮಲ್ಟಿಪ್ಲೆಕ್ಸ್‌ನಲ್ಲಿ 500 ರೂ.ಗಳಿಂದ ಆರಂಭವಾಗಿದೆ. ತಮಿಳುನಾಡಿನಲ್ಲಿ ಕೇವಲ 190 ರೂ. ಗರಿಷ್ಠ ಮಿತಿಯಿದೆ. ಆದರೆ, ಕರ್ನಾಟಕದಲ್ಲಿ ದುಬಾರಿ ದರದಿಂದ ಕುಟುಂಬ ಸಮೇತ ಥಿಯೇಟರ್‌ಗೆ ಹೋಗಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದು, ರಾಮಾಯಣ ಬರುವವರೆಗೆ ಈ ಸುಲಿಗೆ ತಪ್ಪುವುದಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಎರಡನೇ ವಾರವೂ ತಗ್ಗದ ‘ಜೈಲರ್ 2’ ಟಿಕೆಟ್ ದರ; ತಮಿಳು ಚಿತ್ರದಿಂದ ಸುಲಿಗೆ
ಜೈಲರ್ 2 ಸಿನಿಮಾ

Updated on: Oct 22, 2026 | 10:53 AM

ಮುಖ್ಯಾಂಶಗಳು

  • ‘ಜೈಲರ್ 2’ ಟಿಕೆಟ್ ದರ ಏರಿಕೆ
  • ಎರಡನೇ ವಾರವೂ ಮುಂದುವರಿದ ಪ್ರೇಕ್ಷಕರ ಸುಲಿಗೆ
  • 500 ರೂ. ಗಡಿ ದಾಟಿದ ಬೆಲೆ

ತಮಿಳುನಾಡಿನಲ್ಲಿ ಚಿತ್ರಮಂದಿರಗಳ ಟಿಕೆಟ್ ದರಕ್ಕೆ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿವೆ. ಸಿನಿಮಾ ಟಿಕೆಟ್ ದರ 190 ರೂಪಾಯಿ ದಾಟುವಂತಿಲ್ಲ. ಆದರೆ ಕರ್ನಾಟಕದಲ್ಲಿ ಇದಕ್ಕೆ ಮಿತಿಯೇ ಇಲ್ಲದಂತೆ ಆಗಿದೆ. ಚಿತ್ರ ಬಿಡುಗಡೆಯ ಮೊದಲ ವಾರ ಟಿಕೆಟ್ ದರ ಹೆಚ್ಚಿಸುವುದು ಸಾಮಾನ್ಯ. ಆದರೆ, ‘ಜೈಲರ್ 2’ ಸಿನಿಮಾದ ವಿಚಾರದಲ್ಲಿ ಎರಡನೇ ವಾರವೂ ಈ ದರ ಏರಿಕೆಯ ಸುಲಿಗೆ ಮುಂದುವರಿದಿದೆ. ಇದಕ್ಕೆ ಸಿನಿಪ್ರಿಯರು ಹಿಡಿಶಾಪ ಹಾಕಿದ್ದಾರೆ.

ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ಬೆಲೆಯು 500 ರೂಪಾಯಿಗಳಿಂದ ಆರಂಭವಾಗುತ್ತಿದ್ದು, ವಾರದ ದಿನಗಳಲ್ಲೂ ಟಿಕೆಟ್ ದರ ದುಬಾರಿಯಾಗಿಯೇ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ‘ರಾಮಾಯಣ’ ಸಿನಿಮಾ ಬಿಡುಗಡೆಯಾಗುವವರೆಗೆ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೀಗೆಯೇ ಗಗನಮುಖಿಯಾಗಿ ಮುಂದುವರಿಯುವ ಸಾಧ್ಯತೆಯಿದೆ.

ಎರಡನೇ ವಾರವೂ ಪ್ರೇಕ್ಷಕರಿಗೆ ಯಾವುದೇ ರೀತಿಯ ರಿಲೀಫ್ ಸಿಕ್ಕಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಸಾಮಾನ್ಯವಾಗಿ ಟಿಕೆಟ್ ಬೆಲೆ ಕಡಿಮೆ ಇದ್ದರೆ ಇಡೀ ಕುಟುಂಬದ ಜೊತೆ ಸಿನಿಮಾ ನೋಡಲು ಹೋಗುವ ಪ್ಲ್ಯಾನ್ ಮಾಡುವ ಪ್ರೇಕ್ಷಕರು ಈಗ ಹಿಂದೇಟು ಹಾಕುತ್ತಿದ್ದಾರೆ. ಅತಿಯಾದ ಟಿಕೆಟ್ ಬೆಲೆಯಿಂದಾಗಿ ಸಾಮಾನ್ಯ ವರ್ಗದ ಜನರು ಮತ್ತು ಕುಟುಂಬ ಸಮೇತ ಥಿಯೇಟರ್‌ಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಉತ್ತರ ಭಾರತದ ಪಿವಿಆರ್-ಐನಾಕ್ಸ್​​ಗಳಲ್ಲಿ ಬಿಡುಗಡೆ ಅಗಿಲ್ಲ ‘ಜೈಲರ್ 2’ ಏಕೆ?

ಚಿತ್ರದ ಕಲೆಕ್ಷನ್ ವರದಿ:

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಈ ಚಿತ್ರದ ಒಟ್ಟು ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ ಬರೋಬ್ಬರಿ 582.45 ಕೋಟಿ ರೂಪಾಯಿ ತಲುಪಿದೆ. ಹಾಗೆಯೇ ಭಾರತದಲ್ಲಿ ಒಟ್ಟು ನೆಟ್ ಕಲೆಕ್ಷನ್ 317.20 ಕೋಟಿ ರೂಪಾಯಿ ಹಾಗೂ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 371.45 ಕೋಟಿ ರೂಪಾಯಿ ಆಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ 211.00 ಕೋಟಿಗಳನ್ನು ಬಾಚಿಕೊಂಡಿದೆ. ಚಿತ್ರ ಬಿಡುಗಡೆಯಾಗಿ 7ನೇ ದಿನವಾದ ಬುಧವಾರದಂದು ಭಾರತದಲ್ಲಿ 28.15 ಕೋಟಿ ನೆಟ್ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us