ಫಿಲ್ಮ್​ಫೇರ್​ ವೇದಿಕೆ ಹತ್ತಲಾಗದೆ ಬೇಸರಗೊಂಡ ಜಾನ್ವಿ ಕಪೂರ್​ ಮಾಡಿದ್ದೇನು? ವಿಡಿಯೋ ವೈರಲ್

ಕೊರೊನಾ ವೈರಸ್ ಎರಡನೆ ಅಲೆ ಕಾರಣದಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಅನೇಕ ಚಿತ್ರಗಳ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಇದರಿಂದ ಕೆಲವರು ಮನೆಯಲ್ಲೇ ಕೂತಿದ್ದಾರೆ. ಇದಕ್ಕೆ ಜಾನ್ವಿ ಕಪೂರ್​ ಕೂಡ ಹೊರತಾಗಿಲ್ಲ.

ಫಿಲ್ಮ್​ಫೇರ್​ ವೇದಿಕೆ ಹತ್ತಲಾಗದೆ ಬೇಸರಗೊಂಡ ಜಾನ್ವಿ ಕಪೂರ್​ ಮಾಡಿದ್ದೇನು? ವಿಡಿಯೋ ವೈರಲ್
ಜಾಹ್ನವಿ ಕಪೂರ್

Updated on: Apr 19, 2021 | 7:29 PM

ಜಾನ್ವಿ ಕಪೂರ್​ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್​ ಮಗಳು. ಸ್ಟಾರ್​ ಕುಡಿ ಎನ್ನುವ ಕಾರಣಕ್ಕೆ ಅವರಿಗೆ ಬಾಲಿವುಡ್​ನಲ್ಲಿ ಸಾಕಷ್ಟು ಆಫರ್​ಗಳು ಹರಿದು ಬಂದಿವೆ. ಆದರೆ ಅವರಿಗೆ ಯಶಸ್ಸು ಕೈಹಿಡಿದಿಲ್ಲ. ಈಗ ಜಾನ್ವಿಗೆ ಬೇಸರವೊಂದು ಕಾಡಿದೆ. ಇದನ್ನು ಅವರು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾ ವೈರಸ್ ಎರಡನೆ ಅಲೆ ಕಾರಣದಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಅನೇಕ ಚಿತ್ರಗಳ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಇದರಿಂದ ಕೆಲವರು ಮನೆಯಲ್ಲೇ ಕೂತಿದ್ದಾರೆ. ಇದಕ್ಕೆ ಜಾನ್ವಿ ಕಪೂರ್​ ಕೂಡ ಹೊರತಾಗಿಲ್ಲ. ಅವರು ಸದ್ಯ ಗೆಳತಿಯರ ಜತೆ ಸಮಯ ಕಳೆಯುತ್ತಿದ್ದಾರೆ. ಈಗ ಅವರು ಹೊಸ ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಜಾನ್ವಿ ಸಖತ್​ ಆಗಿ ಸ್ಟೆಪ್​ ಹಾಕಿದ್ದಾರೆ. ಅವರ ಗೆಳತಿ ಕೂಡ ಇವರಿಗೆ ಸಾತ್ ನೀಡಿದ್ದಾರೆ. ಅವರ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಈ ವಿಡಿಯೋಗೆ ಅವರು ನೀಡಿದ ಕ್ಯಾಪ್ಶನ್​ ಸಾಕಷ್ಟು ಗಮನಸೆಳೆಯುತ್ತಿದೆ. ಫಿಲ್ಮ್​​ಫೇರ್​​ ಸ್ಟೇಜ್​ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಹೀಗಾಗಿ, ಕೊಳದ ಪಕ್ಕದಲ್ಲಿ ಡ್ಯಾನ್ಸ್​ ಮಾಡಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್​​ಗೆ ಯಾಕೋ ಪದೇಪದೇ ಅದೃಷ್ಟ ಕೈ ಕೊಡುತ್ತಿದೆ. ನಟಿಸಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಮೊದಲ ಸಿನಿಮಾ ‘ಧಡಕ್​’ ಬಳಿಕ ಅವರಿಗೆ ಮತ್ತೆ ದೊಡ್ಡ​ ಗೆಲುವು ಸಿಗಲೇ ಇಲ್ಲ. ‘ಗುಂಜನ್​ ಸಕ್ಸೇನಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ ಸಿನಿಪ್ರಿಯರು ಅದಕ್ಕೆ ಮೆಚ್ಚುಗೆ ಸೂಚಿಸಿಲ್ಲ. ಇತ್ತೀಚೆಗೆ ತೆರೆಕಂಡ ರೂಹಿ ಸಿನಿಮಾ ಮೊದಲ ದಿನವೇ ಪೈರಸಿ ಹಾವಳಿಗೆ ತುತ್ತಾಗಿ ನೆಲಕಚ್ಚಿತು. ಆ ಯಾವ ಸೋಲುಗಳನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ಜಾನ್ವಿ, ಸದ್ಯಕ್ಕೆ ವಿದೇಶದಲ್ಲಿ ಮೋಜು ಮಾಡುತ್ತಿದ್ದಾರೆ.

ಇದನ್ನೂ ಓದಿ: ಶ್ರೀದೇವಿ ಬರೆದ ಹಾರೈಕೆ ಪತ್ರವನ್ನು ಹಂಚಿಕೊಂಡು ಭಾವುಕರಾದ ಜಾಹ್ನವಿ ಕಪೂರ್​

2.74 ಲಕ್ಷ ಬೆಲೆಯ ಉಡುಪು ಧರಿಸಿದ ನಟಿ ಜಾಹ್ನವಿ ಕಪೂರ್

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us