ಜ್ಯೂ.ಎನ್ಟಿಆರ್ ‘ಆರ್ಆರ್ಆರ್’ (RRR) ಚಿತ್ರದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಅವರ ಬೇಡಿಕೆಯೂ ಹೆಚ್ಚಿದೆ. ಅಲ್ಲದೇ ಅವರ ಮುಂದಿನ ಚಿತ್ರಗಳ ಕುರಿತು ನಿರೀಕ್ಷೆಯೂ ಜೋರಿದೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ (Koratala Siva) ಅವರೊಂದಿಗೆ ಜ್ಯೂ.ಎನ್ಟಿಆರ್ (Jr NTR) ಮುಂದಿನ ಚಿತ್ರಕ್ಕೆ ಸೈನ್ ಮಾಡಿದ್ದು ಬಹುತೇಕ ಅಂತಿಮವಾಗಿದೆ. ಅಲ್ಲದೇ ಆ ಚಿತ್ರಕ್ಕೆ ಸದ್ಯ ‘ಎನ್ಟಿಆರ್ 30’ ಅಥವಾ ‘ಎನ್ಟಿಆರ್- ಕೊರಟಾಲ 2’ ಎಂದೂ ಕರೆಯಲಾಗುತ್ತಿದೆ. ಸೂಪರ್ ಹಿಟ್ ಚಿತ್ರ ‘ಜನತಾ ಗ್ಯಾರೇಜ್’ ನಂತರ ಈ ಜೋಡಿ ಮತ್ತೆ ಒಂದಾಗುತ್ತರಿಉವ ಚಿತ್ರ ಇದಾಗಿದ್ದರಿಂದ, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಕೇಳಿಬರುತ್ತಿರುವ ಗುಸುಗುಸುಗಳ ಪ್ರಕಾರ ಈ ಚಿತ್ರದಲ್ಲಿ ಜ್ಯೂ.ಎನ್ಟಿಆರ್ ಜತೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಬಣ್ಣಹಚ್ಚಲಿದ್ದಾರಂತೆ!
‘ಆರ್ಆರ್ಆರ್’ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ಜತೆ ಆಲಿಯಾ ಈಗಾಗಲೇ ತೆರೆ ಹಂಚಿಕೊಂಡಿದ್ದಾರೆ. ಮುಂದಿನ ಚಿತ್ರಕ್ಕೆ ಸಿಕ್ಕಾಪಟ್ಟೆ ಸಂಭಾವನೆಯ ಬೇಡಿಕೆಯನ್ನೂ ಆಲಿಯಾ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದು ಅಚ್ಚರಿಯ ವಿಚಾರವೆಂದರೆ ಆಲಿಯಾ ಹೊರತಾಗಿ ಸಮಂತಾ ಕೂಡ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗಿದೆ.
ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ವಿದ್ಯಾರ್ಥಿ ಸಂಘಟನೆಯ ನಾಯಕನ ಪಾತ್ರದಲ್ಲಿ ಜ್ಯೂ.ಎನ್ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರು 6-7 ಕೆಜಿ ತೂಕವನ್ನೂ ಇಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್ ಮತ್ತು ಸುಧಾಕರ್ ಮಿಕ್ಕಿಲಿನೇನಿ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಲಿದ್ದಾರೆ. ಆದರೆ ಚಿತ್ರದಲ್ಲಿ ಆಳಿಯಾ ಕಾಣಿಸಿಕೊಳ್ಳುತ್ತಿರುವ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಸದ್ಯದಲ್ಲೇ ಚಿತ್ರತಂಡ ಹಾಗೂ ಆಲಿಯಾ ಪ್ರವೇಶದ ಕುರಿತು ಮಾಹಿತಿ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆ ಇದೆ.
ಚಿತ್ರಗಳ ವಿಷಯಕ್ಕೆ ಬಂದರೆ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದ ಬಿಡುಗಡೆಗೆ ಆಲಿಯಾ ಹಾಗೂ ಜ್ಯೂ.ಎನ್ಟಿಆರ್ ಕಾಯುತ್ತಿದ್ದಾರೆ. ವಾಸ್ತವದಲ್ಲಿ ಜನವರಿ 7ರಂದು ತೆರೆಕಾಣಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ:
Rashmika Mandanna: ‘ಈ ಲುಕ್ ಹೇಗಿದೆ?’; ಹೊಸ ಪೋಟೋಗಳನ್ನು ಹಂಚಿಕೊಂಡು ರಶ್ಮಿಕಾ ಪ್ರಶ್ನೆ
Keerthy Suresh: ಕೀರ್ತಿ ಸುರೇಶ್ಗೆ ಕೊವಿಡ್ ಪಾಸಿಟಿವ್; ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡ ನಟಿ
Published On - 8:45 pm, Tue, 11 January 22