Kajal Aggarwal: ಪತಿಗಾಗಿ ಚಿತ್ರರಂಗ ತೊರೆಯೋ ನಿರ್ಧಾರಕ್ಕೆ ಬಂದ ಕಾಜಲ್​ ಅಗರ್​ವಾಲ್​

ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಕಾಜಲ್​ಗೆ ಇದೆ. ಪ್ಯಾರಿಸ್​ ಪ್ಯಾರಿಸ್​ ಸೇರಿ ಐದಾರು ಪ್ರಾಜೆಕ್ಟ್​ಗಳು ಅವರ ಕೈಯಲ್ಲಿವೆ.

Kajal Aggarwal: ಪತಿಗಾಗಿ ಚಿತ್ರರಂಗ ತೊರೆಯೋ ನಿರ್ಧಾರಕ್ಕೆ ಬಂದ ಕಾಜಲ್​ ಅಗರ್​ವಾಲ್​
ಕಾಜಲ್​ ಹೇಳಿಕೆ ಅವರ ಅಭಿಮಾನಿಗಳಿಗೆ ಬೇಸರ ಹಾಗೂ ಆತಂಕ ಮೂಡಿಸಿತ್ತು.

Updated on: May 19, 2021 | 8:09 PM

ಮದುವೆ ಆದ ನಂತರದಲ್ಲಿ ಸಾಕಷ್ಟು ನಟಿಯರು ಚಿತ್ರರಂಗ ತೊರೆದಿದ್ದಾರೆ. ಸಂಸಾರದಲ್ಲಿ ಬ್ಯುಸಿಯಾಗಿ ಸಿನಿಮಾ ರಂಗದಿಂದ ದೂರ ಉಳಿದವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಸಾಲಿಗೆ ಈಗ ನಟಿ ಕಾಜಲ್​ ಅಗರ್​ವಾಲ್​ ಕೂಡ ಸೇರ್ಪಡೆ ಆಗುವ ಲಕ್ಷಣ ಗೋಚರವಾಗಿದೆ. ಅವರು ಶೀಘ್ರವೇ ಚಿತ್ರರಂಗ ತೊರೆಯುವ ಸೂಚನೆ ಸಿಕ್ಕಿದೆ.

ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಕಾಜಲ್​ಗೆ ಇದೆ. ಪ್ಯಾರಿಸ್​ ಪ್ಯಾರಿಸ್​ ಸೇರಿ ಐದಾರು ಪ್ರಾಜೆಕ್ಟ್​ಗಳು ಅವರ ಕೈಯಲ್ಲಿವೆ. ಈ ಪೈಕಿ ಕೆಲ ಚಿತ್ರಗಳು ರಿಲೀಸ್​ಗೆ ರೆಡಿ ಇದ್ದು, ಕೊರೊನಾದಿಂದ ವಿಳಂಬವಾಗಿದೆ. ಹೀಗಿರುವಾಗಲೇ ಅವರ ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್​ ಒಂದು ಸಿಕ್ಕಿದೆ. ಕಾಜಲ್​ ಚಿತ್ರರಂಗದಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಿನಿಮಾ ರಂಗದಿಂದ ದೂರ ಸರಿಯುವ ಆಲೋಚನೆ ಇದೆಯೇ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿರುವ ಕಾಜಲ್​, ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ. ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ ಪತಿ ಹಾಗೂ ನನ್ನ ಕುಟುಂಬ. ನಾನು ನನ್ನ ಪತಿಯ ಅನುಮತಿ ಪಡೆದೇ ನಟನೆ ಮುಂದುವರಿಸುತ್ತಿದ್ದೇನೆ’ ಎಂದಿದ್ದಾರೆ​.

ಕಳೆದ ಅಕ್ಟೋಬರ್​ ತಿಂಗಳಲ್ಲಿ ಉದ್ಯಮಿ ಗೌತಮ್​ ಜತೆ ಕಾಜಲ್​ ಮದುವೆ ಆಗಿದ್ದರು. ಮದುವೆ ನಂತರವೂ ಅವರು ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಂದೊಮ್ಮೆ ಗೌತಮ್​ ನಟನೆಯಿಂದ ದೂರ ಉಳಿಯುವಂತೆ ಸೂಚಿಸಿದರೆ ಕಾಜಲ್ ಸಿನಿ ಬದುಕು ಅಂತ್ಯವಾಗಲಿದೆ. ಈ ನಿರ್ಧಾರವನ್ನು ಕಾಜಲ್​ ತೆಗೆದುಕೊಂಡರೆ ಅವರ ಅಭಿಮಾನಿಗಳಿಗೆ ಬೇಸರ ಆಗೋದು ಖಚಿತ.

ನಟಿ ಶಿಲ್ಪಾ ಶೆಟ್ಟಿ ಮದುವೆ ಆದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದುಕೊಂಡರು. ಸೋನಮ್ ಕಪೂರ್​ ಕೂಡ ಮದುವೆ ನಂತರ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟಿವ್​ ಇಲ್ಲ. ಈ ಸಾಲಿಗೆ ಈಗ ಕಾಜಲ್​ ಕೂಡ ಸೇರಿಕೊಂಡರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ದರ್ಶನ್​-ವಿಜಯಲಕ್ಷ್ಮಿ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ; ವೈರಲ್​ ಆಯ್ತು ಮದುವೆ ಆಮಂತ್ರಣ ಪತ್ರ  

ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಾಜಲ್​; ಅಬ್ಬಾ ಅವರು ಮಾಡಿದ ಸಹಾಯ ಮರೆಯಂಗಿಲ್ಲ!

Published On - 7:23 pm, Wed, 19 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us