ಸಂಭಾವನೆ ಕೊಟ್ಟೇ ಸುಸ್ತಾದ ‘ಕಲ್ಕಿ 2898 ಎಡಿ’ ನಿರ್ಮಾಪಕ; ನಟರು ಚಾರ್ಜ್ ಮಾಡಿದ್ದು ಅಷ್ಟಿಷ್ಟಲ್ಲ

|

Updated on: Apr 25, 2024 | 10:29 AM

ಕಲ್ಕಿ 2898 ಎಡಿ’ ಸಿನಿಮಾ ದೊಡ್ಡ ಬಜೆಟ್ ಸಿನಿಮಾ. ಈ ಚಿತ್ರದ ಶೂಟಿಂಗ್ ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಚಿತ್ರದ ಸಂಭಾವನೆಯೇ ನಿರ್ಮಾಪಕರಿಗೆ ದೊಡ್ಡ ಹೊರೆ ಎನಿಸಿದೆ ಎಂದು ವರದಿ ಆಗಿದೆ. ನಿರ್ಮಾಪಕ ಅಶ್ವಿನಿ ದತ್​ಗೆ ಇದು ದೊಡ್ಡ ಮಟ್ಟದಲ್ಲಿ ಹೊರೆ ಎನಿಸಿಕೊಂಡಿದೆ.

ಸಂಭಾವನೆ ಕೊಟ್ಟೇ ಸುಸ್ತಾದ ‘ಕಲ್ಕಿ 2898 ಎಡಿ’ ನಿರ್ಮಾಪಕ; ನಟರು ಚಾರ್ಜ್ ಮಾಡಿದ್ದು ಅಷ್ಟಿಷ್ಟಲ್ಲ
ಕಲ್ಕಿ
Follow us on

‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD) ಸೂಪರ್ ಹಿಟ್ ಆಗಲಿದೆ ಎಂದು ಪ್ರಭಾಸ್ ಅಭಿಮಾನಿಗಳು ಭಾವಿಸಿದ್ದಾರೆ. ಈ ಚಿತ್ರ ಹೊಸ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಭರವಸೆ ಅಭಿಮಾನಿಗಳಿಗೆ ಇದೆ. ಈ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಫ್ಯಾನ್ಸ್​ಗೆ ಗೊಂದಲ ಇದೆ. ಮೇ 9ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಅಶ್ವಿನಿ ದತ್ ಹೇಳಿದ್ದಾರೆ. ಆದರೆ, ಅದಕ್ಕೆ ತಕ್ಕ ರೀತಿಯಲ್ಲಿ ಪ್ರಚಾರ ಮಾಡುತ್ತಿಲ್ಲ. ಎಲೆಕ್ಷನ್ ಅಬ್ಬರ ಜೋರಾಗಿರುವುದರಿಂದ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸಿನಿಮಾದ ಕಲಾವಿದರ ಸಂಭಾವನೆ ಬಗ್ಗೆ ಚರ್ಚೆ ಆಗಿದೆ.

ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಕಲಾವಿದರು ನಟಿಸಬೇಕು ಎಂದರೆ ಹೆಚ್ಚಿನ ಕಾಲ್​ಶೀಟ್ ನೀಡಬೇಕಾಗುತ್ತದೆ. ಹೀಗಾಗಿ, ಸಹಜವಾಗಿಯೇ ಹೆಚ್ಚಿನ ಮೊತ್ತ ಚಾರ್ಜ್ ಮಾಡಬೇಕಾಗುತ್ತದೆ. ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ದೊಡ್ಡ ಬಜೆಟ್ ಸಿನಿಮಾ. ಈ ಚಿತ್ರದ ಶೂಟಿಂಗ್ ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಚಿತ್ರದ ಸಂಭಾವನೆಯೇ ನಿರ್ಮಾಪಕರಿಗೆ ದೊಡ್ಡ ಹೊರೆ ಎನಿಸಿದೆ ಎಂದು ವರದಿ ಆಗಿದೆ.

ಪ್ರಭಾಸ್ ಅವರು 150 ಕೋಟಿ ರೂಪಾಯಿ ಪಡೆದಿದ್ದಾರೆ. ಅವರು ಸಿನಿಮಾ ಉದ್ದಕ್ಕೂ ಕಾಣಿಸಿಕೊಳ್ಳಲಿದ್ದಾರಂತೆ. ಅತಿ ಹೆಚ್ಚು ಸಂಭಾವನೆ ಪಡೆದ ಕಲಾವಿದರಲ್ಲಿ ಅವರು ಮೊದಲಿಗರಾಗಿದ್ದಾರೆ. ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಅವರು 20 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಹಾಗೂ ಕಮಲ್ ಹಾಸನ್ ಅವರು ತಮ್ಮ ಪಾತ್ರಕ್ಕಾಗಿ ತಲಾ 20 ಕೋಟಿ ರೂಪಾಯಿ ಪಡೆದಿದ್ದಾರೆ. ದಿಶಾ ಪಟಾಣಿ ಕೂಡ ಸಿನಿಮಾದಲ್ಲಿ ನಟಿಸಿದ್ದು ಅವರ ಸಂಭಾವನೆ 5 ಕೋಟಿ ರೂಪಾಯಿ ಆಗಿದೆ. ಇನ್ನೂ ಸಣ್ಣ-ಪುಟ್ಟ ಕಲಾವಿದರು ನಟಿಸಿದ್ದು, ಅವರು ಲಕ್ಷಗಳಲ್ಲಿ ಸಂಭಾವನೆ ಪಡೆದಿದ್ದಾರೆ.

ಇದನ್ನೂ ಓದಿ: ಹೊಸ ರಿಲೀಸ್​ ದಿನಾಂಕದ ಬಗ್ಗೆ ಆಲೋಚಿಸಿದ ‘ಕಲ್ಕಿ 2898 ಎಡಿ’ ಚಿತ್ರತಂಡ?

ಇವಿಷ್ಟನ್ನೂ ಲೆಕ್ಕ ಹಾಕಿದರೆ ಸಂಭಾವನೆ ಮೊತ್ತವೇ 250 ಕೋಟಿ ರೂಪಾಯಿ ದಾಟಿದೆ. ಈ ಚಿತ್ರಕ್ಕೆ ದೊಡ್ಡ ಬಜೆಟ್​ಗಳನ್ನು ಹಾಕಲಾಗಿದೆ, ಸಾಕಷ್ಟು ವಿಎಫ್​ಎಕ್ಸ್ ಕೆಲಸಗಳು ನಡೆದಿವೆ. ಒಟ್ಟಾರೆ ಸಿನಿಮಾದ ಬಜೆಟ್ 500-600 ಕೋಟಿ ರೂಪಾಯಿ ಆಗಿದೆ. ಅಷ್ಟೇ ದೊಡ್ಡ ಮಟ್ಟದಲ್ಲಿ ಸಿನಿಮಾ ಗಳಿಕೆ ಮಾಡಿದರೆ ನಿರ್ಮಾಪಕರು ಸೇಫ್ ಆಗುತ್ತಾರೆ. ಒಂದೊಮ್ಮೆ ಕಲಾವಿದರು ಕಡಿಮೆ ಮೊತ್ತ ಚಾರ್ಜ್ ಮಾಡಿದ್ದರೆ ನಿರ್ಮಾಪಕರಿಗೆ ಇದು ದೊಡ್ಡ ಹೊರೆ ಎನಿಸುತ್ತಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.