ಜಪಾನ್​ ಬಾಕ್ಸ್ ಆಫೀಸ್ ದೂಳೆಬ್ಬಿಸಿದ ‘ಕಲ್ಕಿ’, ‘ಜವಾನ್’, ‘ಸಲಾರ್’ ದಾಖಲೆ ಪುಡಿ

|

Updated on: Jan 04, 2025 | 7:16 PM

Kalki 2898 AD Movie: ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ಜಪಾನ್​ನಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು ಅಲ್ಲಿಯೂ ಸಹ ಭರ್ಜರಿ ಗಳಿಕೆ ಮಾಡಿದೆ. ಅಂದಹಾಗೆ ಜಪಾನ್ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಎರಡನೇ ಭಾರತೀಯ ಸಿನಿಮಾ ಎನಿಸಿಕೊಂಡಿದೆ ‘ಕಲ್ಕಿ’, ಹಾಗಿದ್ದರೆ ಮೊದಲ ಸಿನಿಮಾ ಯಾವುದು?

ಜಪಾನ್​ ಬಾಕ್ಸ್ ಆಫೀಸ್ ದೂಳೆಬ್ಬಿಸಿದ ‘ಕಲ್ಕಿ’, ‘ಜವಾನ್’, ‘ಸಲಾರ್’ ದಾಖಲೆ ಪುಡಿ
Kalki 2898 Ad
Follow us on

ಪ್ರಭಾಸ್​ಗೆ ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶದಲ್ಲೂ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ‘ಬಾಹುಬಲಿ’ ಸಿನಿಮಾ ಭಾರತದಲ್ಲಿ ಮಾತ್ರವೇ ಅಲ್ಲದೆ, ಜಪಾನ್, ಚೀನಾ, ಜರ್ಮನಿ, ಮಲೇಷ್ಯಾ, ಅರಬ್ ದೇಶಗಳು, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್ ಇನ್ನೂ ಹಲವು ದೇಶಗಳಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಇತ್ತೀಚೆಗೆ ಬಿಡುಗಡೆ ಆದ ಪ್ರಭಾಸ್​ರ ‘ಕಲ್ಕಿ 2898 ಎಡಿ’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆ ಪ್ರದರ್ಶನ ಕಂಡಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಬಾಕ್ಸ್ ಆಫೀಸ್​ನಲ್ಲಿ ಗೆದ್ದಿದೆ. ಇದೀಗ ಈ ಸಿನಿಮಾ ಜಪಾನ್​ನಲ್ಲಿ ಬಿಡುಗಡೆ ಆಗಿದ್ದು, ಅಲ್ಲಿ ಮೊದಲ ದಿನವೇ ದಾಖಲೆ ಬರೆದಿದೆ.

ನಿನ್ನೆಯಷ್ಟೆ ಜಪಾನ್​ನಲ್ಲಿ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿದೆ. ಮೊದಲ ದಿನವೇ 47 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತವನ್ನು ಕಲೆ ಹಾಕಿದೆ. ಜಪಾನ್​ನಲ್ಲಿ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತಿಗೆ ‘ಕಲ್ಕಿ’ ಪಾತ್ರವಾಗಿದೆ.ಜಪಾನ್ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ ಇಷ್ಟು ದೊಡ್ಡ ಮೊತ್ತವನ್ನು ಕಲೆ ಹಾಕಿದ ಎರಡನೇ ಸಿನಿಮಾ ಇದಾಗಿದೆ. ‘ಜವಾನ್’, ‘ಪಠಾಣ್’ ಸಿನಿಮಾಗಳ ದಾಖಲೆಯನ್ನೂ ಸಹ ಈ ಸಿನಿಮಾ ಹಿಂದಿಕ್ಕಿದೆ ‘ಕಲ್ಕಿ’.

ಜಪಾನ್​ನಲ್ಲಿ ಬಿಡುಗಡೆ ಆದ ಮೊದಲ ದಿನ ಭಾರಿ ಕಲೆಕ್ಷನ್ ಮಾಡಿರುವ ಭಾರತೀಯ ಸಿನಿಮಾ ‘ಆರ್​ಆರ್​ಆರ್’, ರಾಜಮೌಳಿ ನಿರ್ದೇಶಿಸಿ, ರಾಮ್ ಚರಣ್ ಮತ್ತು ಜೂ ಎನ್​ಟಿಆರ್ ನಟಿಸಿದ್ದ ಈ ಸಿನಿಮಾ ಜಪಾನ್​ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ ಸುಮಾರು 50 ಲಕ್ಷ ರೂಪಾಯಿ ಕಮಾಯಿ ಮಾಡಿತ್ತು. ಆ ನಂತರವೂ ಸಹ ‘ಆರ್​ಆರ್​ಆರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ದೊಡ್ಡ ಮೊತ್ತದ ಕಲೆಕ್ಷನ್ ಮಾಡಿತ್ತು. ಈಗ ಪ್ರಭಾಸ್​ರ ‘ಕಲ್ಕಿ’ ಸಿನಿಮಾ ಮೊದಲ ದಿನ 47 ಲಕ್ಷ ರೂಪಾಯಿ ಗಳಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರಕ್ಕಾಗಿ ಜಪಾನಿ ಭಾಷೆಯಲ್ಲಿ ಮಾತನಾಡಿ ಪ್ರಭಾಸ್

ಜಪಾನ್​ನಲ್ಲಿ ಭಾರತದ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಹಿಂದಿಯ ‘ದಂಗಲ್’, ಸಲ್ಮಾನ್​ರ ‘ಸುಲ್ತಾನ್’ ರಾಜಮೌಳಿಯ ಎಲ್ಲ ಸಿನಿಮಾಗಳು ಇಲ್ಲಿ ಬ್ಲಾಕ್ ಬಸ್ಟರ್ ಆಗಿವೆ. ಜಪಾನ್ ಜನರಿಗೆ ವಿಶೇಷವಾಗಿ ರಾಜಮೌಳಿಯ ಸಿನಿಮಾಗಳೆಂದರೆ ವಿಶೇಷ ಪ್ರೀತಿ. ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾ ಅಂತೂ ಜಪಾನ್​ನಲ್ಲಿ ಭಾರಿ ದೊಡ್ಡ ಹಿಟ್ ಆಗಿತ್ತು. ರಜನೀಕಾಂತ್​ರ ‘ಮುತ್ತು’ ಸಹ ಆಗಿನ ಕಾಲಕ್ಕೆ ಜಪಾನ್​ನಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಭಾರತೀಯ ಸಿನಿಮಾಗಳ ಬಗ್ಗೆ ಜಪಾನಿಗರಿಗೆ ದಶಕಗಳಿಂದಲೂ ವಿಶೇಷ ಪ್ರೀತಿ ಇದೆ.

‘ಕಲ್ಕಿ 2898 ಎಡಿ’ ಸಿನಿಮಾ ಸೈನ್ಸ್ ಫಿಕ್ಷನ್ ಕತೆ ಒಳಗೊಂಡಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಾಗ್ ಅಶ್ವಿನ್. ಸಿನಿಮಾದ ಕತೆ ಮಹಾಭಾರತದಿಂದ ಆರಂಭವಾಗಿ 2898 ರ ಕಾಲಘಟ್ಟದಲ್ಲಿ ನಡೆಯುತ್ತದೆ. ಸಿನಿಮಾದ ಎರಡನೇ ಭಾಗವೂ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ