ರಣಬೀರ್- ಆಲಿಯಾ ಡಿವೋರ್ಸ್?; ಮದುವೆ ಮುನ್ನವೇ ಶಾಕಿಂಗ್ ಭವಿಷ್ಯ ನುಡಿದ ಕಮಾಲ್ ಆರ್ ಖಾನ್

| Updated By: Digi Tech Desk

Updated on: Jul 14, 2021 | 2:33 PM

Ranbir Kapoor- Alia Bhat: ತಮ್ಮ ಟ್ವೀಟ್​ಗಳಿಂದ ಸುದ್ದಿಯಲ್ಲಿರುವ ಕಮಾಲ್ ಆರ್ ಖಾನ್ ಈಗ ಹೊಸ ಟ್ವೀಟ್ ಮೂಲ್ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈಗ ಅವರು ಮಾತನಾಡಿರುವುದು ಜನಪ್ರಿಯ ಬಾಲಿವುಡ್ ತಾರಾ ಜೋಡಿಯ ದಾಂಪತ್ಯ ಜೀವನದ ಬಗ್ಗೆ.

ರಣಬೀರ್- ಆಲಿಯಾ ಡಿವೋರ್ಸ್?; ಮದುವೆ ಮುನ್ನವೇ ಶಾಕಿಂಗ್ ಭವಿಷ್ಯ ನುಡಿದ ಕಮಾಲ್ ಆರ್ ಖಾನ್
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ (ಎಡ), ಕಮಾಲ್ ಆರ್ ಖಾನ್(ಬಲ)
Follow us on

ಇತ್ತೀಚೆಗೆ ಕಮಾಲ್ ಆರ್ ಖಾನ್(Kamaal Rashid Khan) ತಮ್ಮ ಟ್ವೀಟ್​ಗಳಿಂದ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಬಾಲಿವುಡ್​ ನಟ ಸಲ್ಮಾನ್ ಖಾನ್ ಸಿನಿ ಜೀವನವನ್ನೇ ನಾಶ ಮಾಡುತ್ತೇನೆ ಎಂದು ಪಣತೊಟ್ಟಿದ್ದ ಅವರು, ಕೋರ್ಟ್ ಸಲ್ಮಾನ್ ಖಾನ್ ಕುರಿತು ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರಿಂದ ಸುಮ್ಮನಾಗಿದ್ದರು. ಈಗ ಟ್ವಿಟರ್​ನಲ್ಲಿ ಬಾಲಿವುಡ್​ನ ಜನಪ್ರಿಯ ತಾರೆಗಳ ದಾಂಪತ್ಯ ಜೀವನದ ಬಗ್ಗೆ ಭವಿಷ್ಯ ಹೇಳಲು ಆರಂಭಿಸಿದ್ದಾರೆ. ಈಗಾಗಲೇ ನಿಕ್​ ಜೊನಾಸ್(Nick Jonas) ಹಾಗೂ ಪ್ರಿಯಾಂಕ ಚೋಪ್ರಾ(Priyanka Chpra) ಬಗ್ಗೆ ಹೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಕೆಆರ್​ಕೆ(ಕಮಾಲ್ ಆರ್ ಖಾನ್) ಈಗ ಆಲಿಯಾ (Alia Bhat) ಹಾಗೂ ರಣಬೀರ್ ಕಪೂರ್(Ranbir Kapoor) ಜೋಡಿಯ ಬಗ್ಗೆ ಟ್ವೀಟಿಸಿದ್ದಾರೆ.

ನಟನಾ ವೃತ್ತಿಯಿಂದ ಹೊರಬಂದು ವಿಮರ್ಶಕನಾಗಿ ಬದಲಾಗಿರುವ ಕಮಾಲ್ ಆರ್ ಖಾನ್ ಇನ್ನೂ ದಾಂಪತ್ಯಕ್ಕೆ ಕಾಲಿರಿಸದ ಜೋಡಿಯ ಡಿವೋರ್ಸ್ ಭವಿಷ್ಯವನ್ನೂ ಹೇಳಿಯಾಗಿದೆ. ಹೌದು. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೊತೆಗೆ ಸುತ್ತಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿರುವುದೇ. ಅವರ ಅಭಿಮಾನಿಗಳಗೆ ಈ ತಾರಾ ಜೋಡಿ ಎಂದು ದಾಂಪತ್ಯದ ಹಸೆಮಣೆ ಏರಲಿದ್ಧಾರೆ ಎಂಬ ಕುತೂಹಲವಿದೆ. ಆ ಕುತೂಹಲವನ್ನೂ ತಮ್ಮ ಭವಿಷ್ಯವಾಣಿಯಿಂದ ತಣಿಸಿರುವ ಕಮಾಲ್, ಜೊತೆಗೆ ಅವರ ಮುಂದಿನ ಜೀವನದ ಭವಿಷ್ಯವನ್ನೂ ಹೇಳಿದ್ದಾರೆ.

ಕೆಆರ್​ಕೆ ಪ್ರಕಾರ ಭವಿಷ್ಯವಾಣಿಯ ಪ್ರಕಾರ 2022ರ ಅಂತ್ಯದ ಒಳಗೆ ರಣಬೀರ್ ಹಾಗೂ ಆಲಿಯಾ ಭಟ್ ಜೋಡಿ ಹಸೆಮಣೆ ಏರಲಿದೆ. ಅಷ್ಟಕ್ಕೇ ಸುಮ್ಮನಾಗದ ಅವರು 15 ವರ್ಷದೊಳಗೆ ಈ ಜೋಡಿ ವಿಚ್ಛೇದನವನ್ನೂ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ. ಈ ಟ್ವೀಟ್ ಈಗ ಎಲ್ಲರ ಗಮನ  ಸೆಳೆದಿದೆ.

ಇನ್ನೂ ಮದುವೆಯಾಗದ ಜೋಡಿಯ ಡಿವೋರ್ಸ್ ಸಮಯವನ್ನೂ ತಿಳಿಸಿರುವ ಕೆಆರ್​ಕೆಗೆ ಅಭಿಮಾನಿಗಳು ನಾನಾ ವಿಧವಾಗಿ ಕಾಲೆಳೆದಿದ್ದಾರೆ. ಒಬ್ಬರು, ಅವರೀವರ್ವರೂ ಮದುವೆಯನ್ನೇ ಆಗುವುದಿಲ್ಲ ಎಂದಿದ್ದರೆ, ಮತ್ತೊಬ್ಬರು ಕೆಆರ್​ಕೆ, ನಿಮ್ಮ ಜ್ಯೋತಿಷ್ಯ ಹೇಳುವ ಕೆಲಸದ ಜೀವನವು ಆಗಸದೆತ್ತರಕ್ಕೆ ಸಾಗಲಿ ಎಂದು ಹಾರೈಕೆಯ ಧಾಟಿಯಲ್ಲಿ ಕಾಲೆಳೆದಿದ್ದಾರೆ. ಮತ್ತೊಬ್ಬ ಅಭಿಮಾನಿ, ಅಯ್ಯಾ ಪ್ರಭುವೇ- ದಯವಿಟ್ಟು ನನ್ನ ಮದುವೆ ಹಾಗೂ ವಿಚ್ಛೇದನದ ದಿನಾಂಕವನ್ನೂ ತಿಳಿಸಿ ಎಂದು ಚಟಾಕಿ ಹಾರಿಸಿದ್ದಾರೆ.

ಇತ್ತೀಚೆಗಷ್ಟೇ  ಕೆಆರ್​ಕೆ ತಮ್ಮ ಮೂರನೇ ಭವಿಷ್ಯವಾಣಿಯಲ್ಲಿ ಇನ್ನು ಹತ್ತು ವರ್ಷಗಳೊಳಗೆ ಪ್ರಿಯಾಂಕಾ ಹಾಗೂ ನಿಕ್ ಜೊನಾಸ್ ವಿಚ್ಛೇದನ ಪಡೆಯುತ್ತಾರೆ ಎಂದಿದ್ದು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಆದರೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಕಮಾಲ್ ತಮ್ಮ ಭವಿಷ್ಯ ಹೇಳುವ ಕಾಯಕವನ್ನು ಮುಂದುವರೆಸಿದ್ದಾರೆ.

(Kamaal Rashid Khan prdicts Alia Bhat and Ranbir Kapoor marriage and divorce)

Published On - 11:17 am, Wed, 14 July 21