ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ ಪ್ರಕರಣ: ಆರೋಪಿ ಅರುಣಾ ಕುಮಾರಿಯಿಂದ ಇಂದು ಮಹತ್ವದ ಸುದ್ದಿಗೋಷ್ಠಿ

ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ ಪ್ರಕರಣ: ಆರೋಪಿ ಅರುಣಾ ಕುಮಾರಿಯಿಂದ ಇಂದು ಮಹತ್ವದ ಸುದ್ದಿಗೋಷ್ಠಿ
ಅರುಣಾ ಕುಮಾರಿ

Darshan: ನಟ ದರ್ಶನ್​ಗೆ 25ಕೋಟಿ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಅರುಣಾ ಕುಮಾರಿ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ. ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಈ ಪ್ರಕರಣವು ಮುಗಿದ ಅಧ್ಯಾಯ ಎಂದಿದ್ದರೂ ಸಹ ಅರುಣಾ ಕುಮಾರಿ ಇದನ್ನು ನಿಲ್ಲಿಸುವ ಲಕ್ಷಣ ಕಾಣುತ್ತಿಲ್ಲ. ಈ ಪ್ರಕರಣದಲ್ಲಿ ನಾನು ಅಮಾಯಕಿ ಎಂದಿರುವ ಅವರು, ಇಂದು ಮತ್ತಷ್ಟು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

TV9kannada Web Team

| Edited By: shivaprasad.hs

Jul 14, 2021 | 10:18 AM

ಬೆಂಗಳೂರು: ನಟ ದರ್ಶನ್ ಹೆಸರಿನಲ್ಲಿ ವಂಚನೆಗೆ ಪ್ರಯತ್ನ ಪ್ರಕರಣವು ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ದಿನಕಳೆದಂತೆ ಇದು ಜಟಿಲವಾಗುತ್ತಾ ಸಾಗಿದೆ. ಈ ಪ್ರಕರಣವು ಕೋರ್ಟ್​ನಲ್ಲಿ ನಿಲ್ಲುವುದಿಲ್ಲ ಎಂದು ದರ್ಶನ್ ಹೇಳಿದರೂ ಸಹ ಪರಸ್ಪರ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ನಿನ್ನೆ ಗೀತರಚನೆಕಾರ ನಾಗೇಂದ್ರ ಪ್ರಸಾದ್ ಮತ್ತು ಉದ್ಯಮಿ ನಾಗವರ್ಧನ್ ಸುದ್ದಿಗೋಷ್ಠಿ ನಡೆಸಿ ಅರುಣಾ ಕುಮಾರಿಯವರಿಂದ ಹಲವರಿಗೆ ವಂಚನೆಯಾಗಿದೆ ಎಂದಿದ್ದರು. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು ಅರುಣಾ ಕುಮಾರಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಅರುಣಾ, ಬೆಂಗಳೂರು ತಲುಪಿದ ನಂತರ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ. ಇದರಲ್ಲಿ ನಿನ್ನೆ ಅವರ ಮೇಲೆ ನಾಗೇಂದ್ರಪ್ರಸಾದ್ ಹಾಗೂ ನಾಗವರ್ಧನ್ ಮಾಡಿರುವ ಆರೋಪಗಳಿಗೆ ಉತ್ತರ ನೀಡುವ ಸಾಧ್ಯತೆ ಇದೆ. ಜೊತೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರ ಕೈವಾಡದ ಕುರಿತೂ ತಮ್ಮ ಹೇಳಿಕೆಗಳನ್ನು ನೀಡಲು ಅವರು ಮುಂದಾಗುವ ಸಾಧ್ಯತೆ ಇದೆ.

ನಾನು ಹಣ ಪಡೆದಿದ್ದರೆ ಆರೋಪವನ್ನು ಒಪ್ಪಿಕೊಳ್ಳುತ್ತಿದ್ದೆ: ಅರುಣಾ ಕುಮಾರಿ

ಈ ನಡುವೆ ಟಿವಿ9ಗೆ ಹೇಳಿಕೆ ನೀಡಿರುವ ಅರುಣಾ ಕುಮಾರಿ, ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಯಾರಾದರೂ ಒಂದು ರೂಪಾಯಿ ಹಣ ಕೊಟ್ಟಿದ್ದರೆ ನಾನೇ ಆರೋಪಗಳನ್ನು ಹೊತ್ತುಕೊಳ್ಳುತ್ತಿದ್ದೆ. ಆದರೆ ನನಗೆ ಒಂದು ರೂಪಾಯಿಯೂ ಕೊಟ್ಟಿಲ್ಲ. ಆದರೆ ಅವಮಾನಗಳು ಮಾತ್ರ ನನ್ನ ತಲೆಮೇಲೆ ಬೀಳುತ್ತಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಿನ್ನೆ ಚಿತ್ರಸಾಹಿತಿ ನಾಗೇಂದ್ರ ಪ್ರಸಾಧ್ ಹಾಗೂ ಉದ್ಯಮಿ ನಾಗವರ್ಧನ್ ಸುದ್ದಿಗೋಷ್ಠಿ ನಡೆಸಿ ಅರುಣಾ ಕುಮಾರಿ ಬಹಳ ದೊಡ್ಡ ವಂಚಕಿ ಎಂದು ಆರೋಪ ಮಾಡಿದ್ದರು. ಉದ್ಯಮಿ ನಾಗವರ್ಧನ್​ಗೆ ಅರುಣಾ ಕುಮಾರಿಯಿಂದ 15 ಲಕ್ಷಕ್ಕೂ ಅಧಿಕ ಮೊತ್ತದ ವಂಚನೆಯಾಗಿದೆ ಹಾಗೂ 35ಲಕ್ಷಕ್ಕೂ ಹೆಚ್ಚು ವ್ಯವಹಾರದಲ್ಲಿ ನಷ್ಟವಾಗಿದೆ ಎಂದು ಆರೋಪ ಮಾಡಿದ್ದರು. ಅರುಣಾ ಕುಮಾರಿ ಮೊದಲಿಗೆ ಸ್ನೇಹ ಬಳಸಿ ನಂತರ ಸ್ನೇಹಿತರನ್ನು ದೂರ ಮಾಡುತ್ತಾಳೆ. ಬಹುಶಃ ದರ್ಶನ್ ಹಾಗೂ ಉಮಾಪತಿಯವರಿಗೂ ಇದೇ ರೀತಿ ಆಗಿರಬಹುದು ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಅರುಣಾ ಕುಮಾರಿ ಫೇಕ್ ಐಡಿ ಬಗ್ಗೆ ಕೆನರಾ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ

ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್

(Today accused Aruna Kumari will speak in Press meet regarding the case of trying to cheat actor Darshan)

Follow us on

Related Stories

Most Read Stories

Click on your DTH Provider to Add TV9 Kannada